
ಕುಂದಗೋಳ: ತಾಲೂಕಿನ ಬೆಟದೂರು ಗ್ರಾಮದಲ್ಲಿ ಜೈ ಭೀಮ ಸ್ಪೋರ್ಟ್ಸ್ ಕ್ಲಬ್ ಹಾಗೂ ಧಾರವಾಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್, ಹುಬ್ಬಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಗಳಿಗೆ ಶನಿವಾರ ಅದ್ಧೂರಿ ಚಾಲನೆ ನೀಡಲಾಯಿತು. ಶನಿವಾರದಂದು ರಂ ಕ್ರೀಡಾಕೂಟಕ್ಕೆ ಅಧಿಕೃತವಾಗಿ ಚಾಲನೆ ದೊರೆಯಿತು.
ಕ್ರೀಡೆಯು ಮಾನವನ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೂರಕವಾಗಿದ್ದು, ಇಂತಹ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಕ್ರೀಡಾಪಟುಗಳು ತಮ್ಮ ಆಶಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರಾಜು ದೊಡ್ಡಶಂಕರ, ರಮೇಶ್ ಚಲವಾದಿ, ಮುಕ್ತುಮ್ ಸಾಬ್ ಹಾರೋಬುಡಿ, ಕಲ್ಲಪ್ಪ ಹೆಬ್ಬಳ್ಳಿ, ಮಾರುತಿ ಪರಮ ನಾಯ್ಕರ್, ಮಹಮ್ಮದ್ ಸಾಬ್ ಹಾರೋಬುಡಿ ಹಾಗೂ ಚಂದು ಕಾಳೆ ಸೇರಿದಂತೆ ಪ್ರಮುಖ ಮುಖಂಡರು ಉಪಸ್ಥಿತರಿದ್ದು ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಜೈ ಭೀಮ ಅಭಿಮಾನಿ ಬಳಗದ ಸದಸ್ಯರು, ಬೆಟದೂರು ಗ್ರಾಮದ ಸಮಸ್ತ ಸಮಾಜ ಬಾಂಧವರು ಹಾಗೂ ಸ್ಥಳೀಯ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

