ಕುಂದಗೋಳ: 10 ನೇ ತರಗತಿ ವಿದ್ಯಾರ್ಥಿಯ ಶಂಕಾಸ್ಪದ ಸಾವು; ಕೊಲೆ ಶಂಕೆ?

Spread the love

ಕುಂದಗೋಳ: ಪಟ್ಟಣದ ಕರೋಗಲ ಓಣಿಯ ೧೬ ವರ್ಷದ ೧೦ನೇ ತರಗತಿ ವಿದ್ಯಾರ್ಥಿಯೋರ್ವ ಶಂಕಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಮೇಲ್ನೋಟಕ್ಕೆ ಇದೊಂದು ಕೊಲೆ ಎಂದು ಶಂಕಿಸಲಾಗಿದೆ.

​ಮೃತನನ್ನು ನಿಂಗರಾಜ ಮಲ್ಲಿಕಾರ್ಜುನ ಅವಾರಿ (೧೬) ಎಂದು ಗುರುತಿಸಲಾಗಿದೆ. ಪಟ್ಟಣದ ಸೊಸೈಟಿ ಪಕ್ಕದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಬಾಲಕನ ಶವ ಪತ್ತೆಯಾದ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳದಲ್ಲಿ ಜಮಾಯಿಸಿದ್ದರು.

​ವಿಷಯ ತಿಳಿದು ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಧಾರವಾಡ ಜಿಲ್ಲಾ ಎಸ್ಪಿ ಹಾಗೂ ಕುಂದಗೋಳ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಸದ್ಯಕ್ಕೆ ಸಾವಿನ ಸುತ್ತ ಹತ್ತು ಹಲವು ಅನುಮಾನಗಳು ಹುಟ್ಟಿಕೊಂಡಿದ್ದು, ತನಿಖೆ ಮುಂದುವರಿದಿದೆ. ಪೊಲೀಸ್ ತನಿಖೆ ಪೂರ್ಣಗೊಂಡ ನಂತರವಷ್ಟೇ ಇದು ಕೊಲೆಯೇ ಅಥವಾ ಸಾವಿಗೆ ಬೇರೇನಾದರೂ ಕಾರಣವಿದೆಯೇ ಎಂಬ ನಿಖರವಾದ ಸತ್ಯಾಂಶ ಹೊರಬೀಳಬೇಕಿದೆ. ಪೊಲೀಸರು ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *