ಶಿರಗುಪ್ಪಿಯಲ್ಲಿ ಸಹಸ್ರ ಬಿಲ್ವಾರ್ಚನೆ, ಸದ್ವಿಚಾರ ಪಾಲನೆಗೆ ಶ್ರೀ ಬಸವಣ್ಣಜ್ಜನವರ ಕರೆ

Spread the love

ಶಿರಗುಪ್ಪಿ : ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್‌ (ರಿ), ಕುಂದಗೋಳ ವಲಯದ ವತಿಯಿಂದ ಶಿರಗುಪ್ಪಿ ಗ್ರಾಮದ ಶ್ರೀ ಗುರುಪಾದೇಶ್ವರ ಕಲ್ಯಾಣ ಮಂಟಪದಲ್ಲಿ ಸಾಮೂಹಿಕ ಸಹಸ್ರ ಬಿಲ್ವಾರ್ಚನೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ರವಿವಾರದಂದು ಹಮ್ಮಿಕೊಳ್ಳಲಾಗಿತ್ತು.

ನೆಮ್ಮದಿಗೆ ಸದ್ವಿಚಾರವೇ ಮಾರ್ಗ :
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಪರಮಪೂಜ್ಯ ಶ್ರೀ ಅಭಿನವ ಕಲ್ಯಾಣಪುರ ಮಠದ ಬಸವಣ್ಣಜ್ಜನವರು ಆಶೀರ್ವಚನ ನೀಡಿದರು. “ಜೀವನದಲ್ಲಿ ಸದ್ವಿಚಾರ, ಸದಾಚಾರ ಮತ್ತು ಸಚ್ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು. ದೇವರು ಮತ್ತು ಧರ್ಮದಲ್ಲಿ ನಂಬಿಕೆ ಇಟ್ಟು ನಡೆಸುವ ಎಲ್ಲ ಪೂಜೆ, ಪುನಸ್ಕಾರ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜೀವನದಲ್ಲಿ ನೆಮ್ಮದಿ ದೊರಕಿಸಿಕೊಡುತ್ತವೆ” ಎಂದು ಅವರು ಭಕ್ತರಿಗೆ ಉಪದೇಶಿಸಿದರು.

ಯೋಜನೆಯ ಕಾರ್ಯಕ್ರಮಗಳ ವಿವರ:
ಕಾರ್ಯಕ್ರಮವನ್ನು ಧಾರವಾಡ ಜಿಲ್ಲಾ ಪಂಚಾಯತ್‌ನ ಮಾಜಿ ಅಧ್ಯಕ್ಷರಾದ ಶ್ರೀಮತಿ ಚೈತ್ರಾ ಶಿರೂರ ಅವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್‌ (ರಿ), ಗದಗ ನಿರ್ದೇಶಕರಾದ ಶ್ರೀ ಕೇಶವ್ ದೇವಾಂಗ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮೀಣ ಪ್ರದೇಶದಲ್ಲಿ ಅನುಷ್ಠಾನಗೊಳಿಸುತ್ತಿರುವ ವಿವಿಧ ಅಭಿವೃದ್ಧಿ ಹಾಗೂ ಕಲ್ಯಾಣ ಕಾರ್ಯಕ್ರಮಗಳ ಕುರಿತು ಸಮಗ್ರ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪುಷ್ಪ ಯರಗುಪ್ಪಿ, ಮುಖಂಡರಾದ ಶಂಕ್ರಪ್ಪ ನೆರ್ತಿ, ಮಹಾಬಳೇಶ್ವರ ಅಣ್ಣಿಗೇರಿ, ಜಾಫರ್ ಅಹಮದ್ ಅತ್ತಾರ್, ಗಂಗವ್ವ ನೀಲಪ್ಪ ನಾಯ್ಕರ, ಶಾಂತಯ್ಯ ಹೊಸಮಠ, ಶ್ರೀ ಗಣೇಶ ಸೇರಿದಂತೆ ವಲಯದ ಮೇಲ್ವಿಚಾರಕರು, ಸಿಬ್ಬಂದಿಗಳು, ಹಾಗೂ ವಲಯದ ಎಲ್ಲ ಕಾರ್ಯಕರ್ತರು ಮತ್ತು ಸಂಘಗಳ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಈ ಸಾಮೂಹಿಕ ಧಾರ್ಮಿಕ ಕಾರ್ಯಕ್ರಮಕ್ಕೆ ಸ್ಥಳೀಯ ಭಕ್ತರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.

Leave a Reply

Your email address will not be published. Required fields are marked *