
ರಾಯಬಾಗ (ಭಿರಡಿ): ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬಿರಡಿ ಗ್ರಾಮದಲ್ಲಿ ಶ್ರೀ ಮುರಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಅಕ್ಟೋಬರ್ 19 ರಿಂದ 23 ರವರೆಗೆ ವೈವಿಧ್ಯಮಯ ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ರಂಗೋಲಿ, ರಾಜ್ಯ ಮಟ್ಟದ ಕಬಡ್ಡಿ, ವಾಲಿಬಾಲ್ ಪಂದ್ಯಾವಳಿಗಳು, ಜಿದ್ದಾಜಿದ್ದಿನ ಡೊಳ್ಳಿನ ಪದಗಳು ಹಾಗೂ ಸಾಂಪ್ರದಾಯಿಕ ಜೋಡು ಎತ್ತಿನಗಾಡಿ ಮತ್ತು ಕುದುರೆಗಾಡಿ ಶರ್ಯತ್ತುಗಳು ಜಾತ್ರೆಯ ಪ್ರಮುಖ ಆಕರ್ಷಣೆಯಾಗಿವೆ.
ಕ್ರೀಡಾ ಸ್ಪರ್ಧೆಗಳ ವಿವರ:
- ರಾಜ್ಯ ಮಟ್ಟದ ಮಹಿಳಾ ಕಬಡ್ಡಿ ಪಂದ್ಯಾವಳಗಳು: ಅಕ್ಟೋಬರ್ 19 ರಂದು ಬೆಳಿಗ್ಗೆ 10 ಗಂಟೆಗೆ ವರ ಶ್ರೀ ಮಹಾದೇವ ಶಿಕ್ಷಣ ಸಂಸ್ಥೆ ಆವರಣದಲ್ಲಿ ಸ್ಪರ್ಧೆಗಳು ನಡೆಯಲಿವೆ. ಪ್ರಥಮ ಬಹುಮಾನ ₹5,000, ದ್ವಿತೀಯ ₹3,000 ಮತ್ತು ತೃತೀಯ ₹2,000 ನೀಡಲಾಗುವುದು.
- ರಂಗೋಲಿ ಸ್ಪರ್ಧೆಗಳು: ಅಕ್ಟೋಬರ್ 20 ರಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ನಡೆಯಲಿದ್ದು, ಪ್ರಥಮ ₹3,000 ಮತ್ತು ದ್ವಿತೀಯ ₹2,000 ಬಹುಮಾನ ನಿಗದಿಪಡಿಸಲಾಗಿದೆ. ಪ್ರವೇಶ ಶುಲ್ಕ ₹100/-.
- ವಾಲಿಬಾಲ್ ಪಂದ್ಯಾವಳಿಗಳು: ಅಕ್ಟೋಬರ್ 21 ರಂದು ಬೆಳಿಗ್ಗೆ 10 ಗಂಟೆಗೆ ಭರಡಿ ಹೈಸ್ಕೂಲ್ ಆವರಣದಲ್ಲಿ ವಾಲಿಬಾಲ್ ಪಂದ್ಯಗಳು ಜರುಗಲಿವೆ. ಪ್ರಥಮ ಸ್ಥಾನಕ್ಕೆ ₹10,000, ದ್ವಿತೀಯಕ್ಕೆ ₹7,001, ತೃತೀಯಕ್ಕೆ ₹5,000 ಮತ್ತು ಚತುರ್ಥಕ್ಕೆ ₹3,000 ಬಹುಮಾನಗಳನ್ನು ನೀಡಲಾಗುತ್ತದೆ.
ಜಾನಪದ ಮತ್ತು ಸಾಂಪ್ರದಾಯಿಕ ಕಾರ್ಯಕ್ರಮಗಳು:
- ಜಿದ್ದಾಜಿದ್ದಿನ ಡೊಳ್ಳಿನ ಪದಗಳು: ಅಕ್ಟೋಬರ್ 22 ರಂದು ರಾತ್ರಿ 9:30 ಗಂಟೆಗೆ ಶ್ರೀ ವಿಠ್ಠಲ ದೇವರ ಡೊಳ್ಳಿನ ಗಾಯನ ಸಂಪದ, ಬೆಳಗಾವಿ ಅವರಿಂದ ಗ್ರಾಮ ಮತ್ತು ಸುತ್ತಮುತ್ತಲ ಗ್ರಾಮಗಳ ಪಲ್ಲತ್ತಿಗಳ ಡೊಳ್ಳಿನ ಪದಗಳು ಜರುಗಲಿವೆ.
- ಜೋಡು ಎತ್ತಿನಗಾಡಿ ಶರ್ಯತ್ತು: ಅಕ್ಟೋಬರ್ 23 ರಂದು ಬೆಳಿಗ್ಗೆ 9 ಗಂಟೆಗೆ ಆರಂಭವಾಗುವ ಜೋಡು ಎತ್ತಿನಗಾಡಿ ಶರ್ಯತ್ತಿಗೆ ಪ್ರವೇಶ ಶುಲ್ಕ ₹750 ನಿಗದಿಪಡಿಸಲಾಗಿದೆ. ಪ್ರಥಮ ಬಹುಮಾನ ₹35,000, ದ್ವಿತೀಯ ₹25,000, ತೃತೀಯ ₹15,000, ಚತುರ್ಥ ₹10,000, ಹಾಗೂ ಪಂಚಮ ₹7,500 ಮತ್ತು ಆರನೇ ಸ್ಥಾನಕ್ಕೆ ₹3,001 ಬಹುಮಾನ ಘೋಷಿಸಲಾಗಿದೆ.
- ಜೋಡು ಕುದುರೆಗಾಡಿ ಮತ್ತು ಹೋರಿಗಾಡಿ ಶರ್ಯತ್ತು: ಇದೇ ದಿನ ಬೆಳಿಗ್ಗೆ 9 ಗಂಟೆಗೆ ಜೋಡು ಕುದುರೆಗಾಡಿ ಶರ್ಯತ್ತಿನಲ್ಲಿ ಪ್ರಥಮ ₹7,500, ದ್ವಿತೀಯ ₹4,000, ತೃತೀಯ ₹3,000 ಮತ್ತು ಹೋರಿಗಾಡಿ ಶರ್ಯತ್ತಿನಲ್ಲಿ ಪ್ರಥಮ ₹5,000, ದ್ವಿತೀಯ ₹3,000, ತೃತೀಯ ₹2,000 ಬಹುಮಾನಗಳನ್ನು ನೀಡಲಾಗುತ್ತದೆ. ಶರ್ಯತ್ತು ಬಿಡುವ ಸ್ಥಳ: ಭಿರಡಿ ಕ್ರಾಸಿನಿಂದ ರಾಯಬಾಗಕ್ಕೆ ಹೋಗಿ ಬರುವ 5 ಕಿ.ಮೀ. ಅಂತರ. ಭಾಗವಹಿಸುವವರು ಬೆಳಿಗ್ಗೆ 8 ಗಂಟೆಯೊಳಗೆ ಹೆಸರು ನೋಂದಾಯಿಸಿರಬೇಕು.
ಇತರ ಕಾರ್ಯಕ್ರಮಗಳು:
ಅಕ್ಟೋಬರ್ 23 ರಂದು ಮಧ್ಯಾಹ್ನ 12:00 ಗಂಟೆಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದ್ದು, ಸಂಜೆ 4:00 ಗಂಟೆಯಿಂದ ಪಲ್ಲಕ್ಕಿ ಮೆರವಣಿಗೆ ಜರುಗಲಿದೆ. ಸಂಜೆ ಪಲ್ಲಕ್ಕಿ ಮೆರವಣಿಗೆಯಲ್ಲಿ ಕನ್ನಾಳ ಕಲಾವಿದರಿಂದ ಡೊಳ್ಳು ಕುಣಿತವು ಗಮನ ಸೆಳೆಯಲಿದೆ.
ಶ್ರೀ ಮುರಸಿದ್ದೇಶ್ವರ ಜಾತ್ರಾ ಮಹೋತ್ಸವ ಕಮೀಟಿ, ರಾಯಣ್ಣಾ ಗೋ-ಗ್ರೀನ್ ಫೌಂಡೇಶನ್ ಸೇರಿದಂತೆ ಹಲವು ಸಂಘ-ಸಂಸ್ಥೆಗಳು ಮತ್ತು ಸ್ಥಳೀಯ ದಾನಿಗಳ ಸಹಕಾರದೊಂದಿಗೆ ಈ ಎಲ್ಲ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸಾರ್ವಜನಿಕರು ಮತ್ತು ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಮುರಸಿದ್ದೇಶ್ವರ ದೇವರ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕೆಂದು ಆಯೋಜಕರು ಕೋರಿದ್ದಾರೆ.

