
ಕುಂದಗೋಳ: ತಾಲೂಕಿನ ಯಲಿವಾಳ ಗ್ರಾಮದ, ಶ್ರೀ ಸಂಕೇತ್ ಎಸ್ ಹೊಸಕೇರಿ ರವರು
2023-24ನೇ ಸಾಲಿನ ವಿಶ್ವವಿದ್ಯಾಲಯ ಮಟ್ಟದ ಡಾ. ಡಿ. ಸಿ. ಪಾವಟೆ ಎನ್ ಎಸ್ ಎಸ್ ಉತ್ತಮ ಸ್ವಯಂ ಸೇವಕ ಪ್ರಶಸ್ತಿಗೆ ಭಾಜನರಾಗಿರುತ್ತಾರೆ.
ಪ್ರತಿ ವರ್ಷ ವಿಶ್ವವಿದ್ಯಾಲಯ ಮಟ್ಟದ ಎನ್ಎಸ್ಎಸ್ ಉತ್ತಮ ಘಟಕ, ಉತ್ತಮ ಎನ್ ಎಸ್ ಎಸ್ ಉತ್ತಮ ಅಧಿಕಾರಿ ಮತ್ತು ಉತ್ತಮ ಸ್ವಯಂ ಸೇವಕರು ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು, ಸದರಿಯವರು ಎನ್ಎಸ್ಎಸ್ ಘಟಕಗಳಲ್ಲಿ ಸಲ್ಲಿಸಿದ ಅತ್ಯುತ್ತಮ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ
ಹ್ಯಾಟ್ರಿಕ್ : 2023-24 ನೇ ಸಾಲಿನ ಉತ್ತಮ ಎನ್ ಎಸ್ ಎಸ್ ಘಟಕ ಪ್ರಶಸ್ತಿಗೆ ಧಾರವಾಡದ ಶ್ರೀ ಸಿದ್ದರಾಮೇಶ್ವರ ಮಹಾವಿದ್ಯಾಲಯದ ಎನ್ ಎಸ್ ಎಸ್ ಘಟಕ , ಉತ್ತಮ ಎನ್ ಎಸ್ ಎಸ್ ಅಧಿಕಾರಿ ಪ್ರೊ. ಕೊಟಬಾಗಿ ಮತ್ತು ಅತ್ಯುತ್ತಮ ಸ್ವಯಂ ಸೇವಕ ಪ್ರಶಸ್ತಿಯು ಅದೇ ಮಹಾವಿದ್ಯಾಲಯದ ವಿದ್ಯಾರ್ಥಿಯಾಗಿದ್ದ ಶ್ರೀ ಸಂಕೇತ್ ಎಸ್ ಹೊಸಕೇರಿಯವರು ಆಯ್ಕೆಯಾಗುವ ಮುಖಾಂತರ ಈ ಮಹಾವಿದ್ಯಾಲಯವು ಹ್ಯಾಟ್ರಿಕ್ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ ಯಾಗಿದೆ.


Thank you sir. For the post ❤️🙏