
ಕುಂದಗೋಳ: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರದಂದು ಚುನಾವಣೆ ಜರುಗಿತು.
ಒಟ್ಟು 13 ಸದಸ್ಯ ಬಲ ಹೊಂದಿರುವ ಈ ಸಂಘದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಮೇಶ ಶಿ. ಇಂಗಳಹಳ್ಳಿ ಮತ್ತು ಸಿದ್ದಪ್ಪ ನಿ. ಅರಳಿಕಟ್ಟಿ ನಾಮಪತ್ರ ಸಲ್ಲಿಸಿದ್ದರು. ರಮೇಶ ಶಿ. ಇಂಗಳಹಳ್ಳಿ 9 ಮತಗಳನ್ನು ಪಡೆದು ಜಯಶಾಲಿಯಾದರು, ಸಿದ್ದಪ್ಪ ನಿ. ಅರಳಿಕಟ್ಟಿ 4 ಮತಗಳನ್ನು ಪಡೆದು ಪರಾಭವಗೊಂಡರು.
ಉಪಾಧ್ಯಕ್ಷ ಸ್ಥಾನಕ್ಕೆ ಹೊಳಲಪ್ಪ ವೆಂಕಪ್ಪ ಬೋವಿ ಮತ್ತು ದಾದಾಪೀರ ರಾಯಸಾಬ ಕಳ್ಳಿಮನಿ ನಾಮಪತ್ರ ಸಲ್ಲಿಸಿದ್ದರು. ಇದರಲ್ಲಿ ಹೊಳಲಪ್ಪ ವೆಂಕಪ್ಪ ಬೋವಿ 8 ಮತಗಳನ್ನು ಪಡೆದು ಜಯಶಾಲಿಯಾದರು, ದಾದಾಪೀರ ರಾಯಸಾಬ ಕಳ್ಳಿಮನಿ 5 ಮತಗಳನ್ನು ಪಡೆದು ಪರಾಭವಗೊಂಡರು.
ಚುನಾವಣಾ ಅಧಿಕಾರಿ ಬಿ.ಕೆ. ಗೋಕಲೆಯವರು ರಮೇಶ ಶಿ. ಇಂಗಳಹಳ್ಳಿ ಅವರನ್ನು ಅಧ್ಯಕ್ಷರನ್ನಾಗಿ ಹಾಗೂ ಹೊಳಲಪ್ಪ ವೆಂಕಪ್ಪ ಬೋವಿ ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಘೋಷಿಸಿದರು.
ನಂತರ, ನೂತನ
ಅಧ್ಯಕ್ಷ-ಉಪಾಧ್ಯಕ್ಷರನ್ನು ಗುರು-ಹಿರಿಯರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ನಾಗರಾಜ ದೇಶಪಾಂಡೆ, ದಾನಪ್ಪ ಗಂಗಾಯಿ, ಬಸವರಾಜ ಬಾಳಿಕಾಯಿ, ಸಿದ್ದಣ್ಣ ಇಂಗಳಹಳ್ಳಿ, ಬಿ.ಟಿ. ಗಂಗಾಯಿ, ಬಸವರಾಜ ಕೊಪ್ಪದ, ಬಸವರಾಜ ಹರವಿ, ರಾಜು ಕೊಪ್ಪದ, ಬಸವರಾಜ ಬ್ಯಾಹಟ್ಟಿ, ವಿರೇಶ ಬಂಡಿವಾಡ, ಸಿದ್ದು ಧಾರವಾಡಶೇಟ್ಟರ, ಪೃಥ್ವಿರಾಜ ಕಾಳೆ, ವಾಗೀಶ ಮಣಕಟ್ಟಿಮಠ, ಪ್ರದೀಶ ಕಾಳೆ, ಸುರೇಶ ಧಾರವಾಡಶೆಟ್ಟರ, ಮಲ್ಲಿಕ ಶಿರೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

