
ನವಲಗುಂದ : ಪಟ್ಟಣದಲ್ಲಿರುವ ನವಲಗುಂದ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕ-ಶಿಕ್ಷಕಿಯರ ಸಹಕಾರಿ ಪತ್ತಿನ ಸಂಘದ ಶತಮಾನೋತ್ಸವ ಸಮಾರಂಭ 101 ನೇ ವಾರ್ಷಿಕ ಸರ್ವಸಾಧಾರಣ ಸಭೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ಸೆ 20 ಶನಿವಾರದಂದು ಬೆಳಿಗ್ಗೆ ತಾಲೂಕ ಪಂಚಾಯತ್ ಹತ್ತಿರ ವಿರುವ ಶಿಕ್ಷಕರ ಸಹಕಾರ ಕಲ್ಯಾಣ ಕೇಂದ್ರದಲ್ಲಿ ಜರುಗಲಿದೆ ಎಂದು ಸಂಘದ ಅಧ್ಯಕ್ಷ ಗಣೇಶ ಜಿ ಹೊಳೆಯನ್ನವರ ತಿಳಿಸಿದ್ದಾರೆ
ಶಿರಹಟ್ಟಿಯ ಜಗದ್ಗುರುಫಕ್ಕೀರ ದಿಂಗಾಲೇಶ್ವರ ಮಹಾಸ್ವಾಮೀಜಿಗಳು ಪಾವನ ಸಾನಿಧ್ಯ ಹಾಗೂ ಸುಳ್ಳ-ಹುಲಿಯ ಸಂಸ್ಥಾನ ಪಂಚಗ್ರಹ ಹಿರೇಮಠದ ಶಿವಸಿದ್ಧರಾಮೇಶ್ವರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವಹಿಸುವರು, ಶಾಸಕ ಎನ್. ಹೆಚ್. ಕೋನರಡ್ಡಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಅಧ್ಯಕ್ಷತೆಯನ್ನು ನವಲಗುಂದ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕ-ಶಿಕ್ಷಕಿಯರ ಸಹಕಾರಿ ಪತ್ತಿನಸಂಘದ ಅಧ್ಯಕ್ಷ ಜಿ ವ್ಹಿ ಹೊಳೆಯಣ್ಣವರ ವಹಿಸುವರು ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಶತಮಾನೋತ್ಸವ ಮಹಾದ್ವಾರ ಉದ್ಘಾಟನೆ ಮಾಡುವರು ಮಾಜಿ ಸಚಿವ ಕೆ ಎನ್ ಗಡ್ಡಿಯವರು ಸಂಘ ನಡೆದುಬಂದ ದಾರಿ ಸ್ಮರಣ ಸಂಚಿಕೆ ಅನಾವರಣಗೊಳಿಸಲಿದ್ದಾರೆ.
ಮುಖ್ಯಅತಿಥಿಗಳಾಗಿ ಕೆಪಿಸಿಸಿ ಸದಸ್ಯ ವಿನೋದ ಅಸೂಟಿ, ಪುರಸಭಾ ಅಧ್ಯಕ್ಷ ಶಿವಾನಂದ ತಡಸಿ, ಗೌರವ ಉಪಸ್ಥಿತರಾಗಿ ಡಿಡಿಪಿಐ ಎಸ್ ಎಸ್ ಕೆಳದಿಮಠ, ಬೆಂಗಳೂರು ಕ.ರಾ.ಸ.ಪ. ಸಂ ಮಹಾಮಂಡಳದ ನಿರ್ದೇಶಕರಾದ ಸಂಜಯ ಹೊಸಮಠ ಭಾಗವಹಿಸಲಿದ್ದಾರೆ, ನವಲಗುಂದ ಹಾಗೂ ಅಣ್ಣಿಗೇರಿ ತಾಲೂಕಿನ ವಿವಿಧ ಶಿಕ್ಷಕ/ ನೌಕರರ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿರುವರು. ಶರಣು ಯಮನೂರ ಇವರಿಂದ ನಗೆಹಬ್ಬ ಜರುಗಲಿದೆ. ಬಾಲಪ್ರತಿಭೆ ಮಹನ್ಯ ಪಾಟೀಲರಿಂದ ಸಂಗೀತ ಕಾರ್ಯಕ್ರಮ ಜರುಗುವುದು.

