
ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ, ಡಾ. ಜೆ. ಎಂ. ನಾಗಯ್ಯ ಟ್ರಸ್ಟ್ ಹಾಗೂ ಡಾ. ಬಸವರಾಜ ಮಲಶೆಟ್ಟಿ ಬಯಲಾಟ ಕಾಲೇಜು, ಹೂವಿನಹಡಗಲಿ ಇವರ ಸಂಯುಕ್ತ ಆಶ್ರಯದಲ್ಲಿ ಸೆಪ್ಟೆಂಬರ್ 14, 2025ರಂದು ಜೆ. ಎಂ. ನಾಗಯ್ಯನವರ ಸಾಹಿತ್ಯ ಕುರಿತು ವಿಚಾರ ಸಂಕಿರಣ’ ಮತ್ತು ಗ್ರಂಥಗಳ ಲೋಕಾರ್ಪಣೆ ಸಮಾರಂಭ’ವನ್ನು ಹಮ್ಮಿಕೊಳ್ಳಲಾಗಿದೆ.
ಸಂಘದ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಬೆಳಿಗ್ಗೆ 10:30ಕ್ಕೆ ನಡೆಯುವ ಸಮಾರಂಭಕ್ಕೆ ಬಂಡಿವಾಡ ಗಿರೀಶ ಆಶ್ರಮದ ಶ್ರೀ ಸ.ಸ. ಡಾ. ಎ.ಸಿ. ವಾಲಿ ಮಹಾರಾಜರು ಸಾನ್ನಿಧ್ಯ ವಹಿಸುವರು. ಹಂಪಿ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಕಾರ್ಯಕ್ರಮ ಉದ್ಘಾಟಿಸುವರು. ಧಾರವಾಡ ಡಾ. ದ.ರಾ. ಬೇಂದ್ರೆ ರಾಷ್ಟಿಯ ಟ್ರಸ್ಟ್‌ನ ಮಾಜಿ ಅಧ್ಯಕ್ಷ ಡಾ. ಡಿ.ಎಂ. ಹಿರೇಮಠ ಮುಖ್ಯ ಅತಿಥಿಗಳಾಗಿ ಹಾಗೂ ನಿವೃತ್ತ ಜಂಟಿ ನಿರ್ದೇಶಕ ಡಾ. ಶ್ಯಾಮಸುಂದರ ಕೋಚಿ ಆಶಯ ನುಡಿಗಳನ್ನಾಡುವರು. ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾತ ಗುರಪ್ಪ ಬೆಲ್ಲದ ಅಧ್ಯಕ್ಷತೆ ವಹಿಸಲಿದ್ದು, ಸಾಹಿತಿ ಡಾ. ಜೆ. ಎಂ. ನಾಗಯ್ಯ ಗೌರವ ಉಪಸ್ಥಿತರಿರುವರು.
ವಿದ್ವಾಂಸರಿಂದ ವಿಚಾರಗೋಷ್ಠಿ
ಕಾರ್ಯಕ್ರಮದ ಅಂಗವಾಗಿ ಎರಡು ವಿಚಾರಗೋಷ್ಠಿಗಳನ್ನು ಏರ್ಪಡಿಸಲಾಗಿದೆ. ಮಧ್ಯಾಹ್ನ 12 ರಿಂದ 2ರವರೆಗೆ ನಡೆಯುವ ಮೊದಲ ಗೋಷ್ಠಿಯಲ್ಲಿ ಡಾ. ಜೆ. ನಾಗಯ್ಯನವರ ಅಧ್ಯಯನ-ಅಧ್ಯಾಪನ-ಸಂಶೋಧನೆ’, ಕನ್ನಡ ವಿದ್ವತ್ಪರಂಪರೆ ಮತ್ತು ಡಾ. ಜೆ. ಎಂ. ನಾಗಯ್ಯ’, ಹಾಗೂ `ಸಂಶೋಧನೆಯ ವೈಧಾನಿಕತೆ’ ಕುರಿತು ಡಾ. ವೆಂಕಟಗಿರಿ ದಳವಾಯಿ, ಡಾ. ಮಲ್ಲಪ್ಪ ಬಂಡಿ ಮತ್ತು ಡಾ. ಎಸ್.ಎಂ. ಗಂಗಾಧರಯ್ಯ ಅವರು ವಿಷಯ ಮಂಡನೆ ಮಾಡುವರು.
ಮಧ್ಯಾಹ್ನ 3 ರಿಂದ 5ರವರೆಗೆ ನಡೆಯುವ ಎರಡನೇ ಗೋಷ್ಠಿಯಲ್ಲಿ ಸಂಶೋಧನಾ ಬರಹಗಳಲ್ಲಿ ಚಾರಿತ್ರಿಕ ದೃಷ್ಟಿ’, ಶಾಸನ ಸಂಪಾದನೆಯ ಅನನ್ಯತೆ’, ವೀರಶೈವ ಅಧ್ಯಯನಗಳ ವಿಶಿಷ್ಟತೆ’ ಹಾಗೂ ಸಂಶೋಧನ ಬರಹಗಳಲ್ಲಿ ಸಂಸ್ಕೃತಿ’ ಕುರಿತು ಡಾ. ಅಮರೇಶ ಯತಗಲ್ಲ, ಶ್ರೀ ಎಚ್. ದೇವರಡ್ಡಿ, ಡಾ. ಸಿ.ಎಂ. ವೀರಭದ್ರಯ್ಯ ಮತ್ತು ಡಾ. ಮಲ್ಲಿಕಾರ್ಜುನ ಕುಂಬಾರ ಅವರು ವಿಷಯ ಮಂಡನೆ ಮಾಡಲಿದ್ದಾರೆ.
ಸಂಶೋಧನಾ ಗ್ರಂಥಗಳ ಲೋಕಾರ್ಪಣೆ
ಸಂಜೆ 5 ಗಂಟೆಗೆ ನಡೆಯುವ ಗ್ರಂಥ ಲೋಕಾರ್ಪಣಾ ಸಮಾರಂಭದಲ್ಲಿ ದೇಗುಲಮಠದ ಶ್ರೀ ಮ.ನಿ.ಪ್ರ. ಡಾ. ಚೆನ್ನಬಸವ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸುವರು. ವಿಧಾನ ಪರಿಷತ್ತಿನ ಸಭಾಪತಿ ಸನ್ಮಾನ್ಯ ಶ್ರೀ ಬಸವರಾಜ ಹೊರಟ್ಟಿ ಅವರು ಗ್ರಂಥಗಳನ್ನು ಲೋಕಾರ್ಪಣೆ ಮಾಡುವರು.
ಲೋಕಾರ್ಪಣೆಗೊಳ್ಳಲಿರುವ ಗ್ರಂಥಗಳು:
- ಕಲ್ಯಾಣ ಚಾಲುಕ್ಯರ ಶಾಸನಗಳು (ಸಂಪುಟ-೨)
- ಕನ್ನಡ ಶಾಸನಗಳಲ್ಲಿ ಶ್ರೀಶೈಲ
- ಸಾAಪಥ : (ಸಂಪುಟ-೩)
- ಸಾAಪಥ : (ಸಂಪುಟ-೪)
ಸಾಂಸ್ಕೃತಿಕ ಕಾರ್ಯಕ್ರಮ
ಸಂಜೆ 6 ಗಂಟೆಗೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ. ಟಿ.ಎಂ. ಭಾಸ್ಕರ ಉದ್ಘಾಟಿಸುವರು. ಡಾ. ಬಸವರಾಜ ಮಲಶೆಟ್ಟಿ ಬಯಲಾಟ ಕಾಲೇಜಿನ ಸಂಶೋಧನಾ ನಿರ್ದೇಶಕ ಡಾ. ಕರಿಶೆಟ್ಟಿ ರುದ್ರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಡಾ. ಬಸವರಾಜ ಮಲಶೆಟ್ಟಿ ಬಯಲಾಟ ಕಾಲೇಜು ವಿದ್ಯಾರ್ಥಿಗಳಿಂದ ಬಯಲಾಟ ಗಿರಿಜಾ ಕಲ್ಯಾಣ ಪ್ರದರ್ಶನಗೊಳ್ಳಲಿದೆ.
ಕಾರ್ಯಕ್ರಮದಲ್ಲಿ ಸಾಹಿತಿಗಳು, ಚಿಂತಕರು, ಕಲಾವಿದರು, ವಿದ್ಯಾರ್ಥಿಗಳು ಹಾಗೂ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಕಟಣೆಯಲ್ಲಿ ಕೋರಿದ್ದಾರೆ.

