ಗರ್ಭಕಂಠ ಕ್ಯಾನ್ಸರ್ ತಡೆಗಟ್ಟಲು ಗುಡಗೇರಿ ಗ್ರಾ ಪಂ ಲಸಿಕೆ ಅಭಿಯಾನ ನಡೆಯಿತು.

Spread the love

ಕುಂದಗೋಳ: ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವ ಮತ್ತು ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಉದ್ದೇಶದಿಂದ ಇತ್ತೀಚೆಗೆ ತಾಲೂಕಿನ ಗುಡಗೇರಿ ಗ್ರಾಮ ಪಂಚಾಯತಿ ಸಭಾ ಭವನದಲ್ಲಿ ಲಸಿಕೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಹುಬ್ಬಳ್ಳಿಯ ‘ಬ್ಲಿಂಗ್‌ಡೆ ಇನ್ನರ್ ವೀಲ್ ಕ್ಲಬ್’ ಮತ್ತು ‘ರೇಡಾನ್ ಕ್ಯಾನ್ಸರ್ ಫೌಂಡೇಶನ್’ ಸಹಯೋಗದೊಂದಿಗೆ ಈ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಗ್ರಾಮದ ವಿವಿಧ ಶಾಲೆಗಳ 9 ರಿಂದ 14 ವರ್ಷದೊಳಗಿನ 68 ಬಾಲಕಿಯರಿಗೆ ಉಚಿತವಾಗಿ ಗರ್ಭಕಂಠದ ಕ್ಯಾನ್ಸರ್ ವಿರುದ್ಧದ ಲಸಿಕೆ ನೀಡಲಾಯಿತು. ಈ ಲಸಿಕೆಯು ಆರಂಭಿಕ ಹಂತದಲ್ಲೇ ಸೋಂಕು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಜ್ಞರು ತಿಳಿಸಿದರು.

ಇದೇ ವೇಳೆ ಡಾ. ರತ್ನಮಾಲಾ ಎಮ್. ದೇಸಾಯಿಯವರು ಲಸಿಕೆಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ರೇಡಾನ್ ಕ್ಯಾನ್ಸರ್ ಫೌಂಡೇಶನ್ ಅಧ್ಯಕ್ಷೆ ಶೀಲಾ ಭೂಸದ್, ಡಾ. ಶೀತಲ್ ಕುಲ್ಗೋಡ್, ಡಾ. ಕೇಲ್ಕೆ ಕುಲಕರ್ಣಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ಎಫ್.ಎಸ್. ಬೆಂಗೇರಿ, ಜಿ.ಸಿ. ರಟ್ಟಿಗೇರಿಮಠ, ವಿರುಪಾಕ್ಷಗೌಡ ರಂಗನಗೌಡ್ರ, ಶಿವಪ್ಪಾ ಬಡ್ನಿ, ಸೋಮಣ್ಣ ಕಾಕಂಬಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಾರ್ವಜನಿಕರ ಆರೋಗ್ಯ ಸುಧಾರಣೆಗೆ ಇಂತಹ ಕಾರ್ಯಕ್ರಮಗಳು ಅತ್ಯಗತ್ಯ ಎಂದು ಗಣ್ಯರು ಅಭಿಪ್ರಾಯಪಟ್ಟರು.

Leave a Reply

Your email address will not be published. Required fields are marked *