ಗುರುವಾರ, 26 Nov 2026 | ಕರ್ನಾಟಕ & ರಾಷ್ಟ್ರೀಯ ಸುದ್ದಿ ಪೋರ್ಟಲ್
ಗುರುವಾರ, 26 Nov 2026 ವಿಶ್ವಾಸಾರ್ಹ ಕನ್ನಡ & ರಾಷ್ಟ್ರೀಯ ಸುದ್ದಿ ಜಾಲ
Top News

ಹನೂರು ತಾಲೂಕಿನಲ್ಲಿ 197 ಕೋಟಿ ರೂ. ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆ

30-ಸೆಕೆಂಡ್ ಮುಖ್ಯಾಂಶಗಳು (30-Sec AI Summary)
  • ಪ್ರಮುಖ ಬೆಳವಣಿಗೆ: ಹನೂರು ತಾಲೂಕಿನಲ್ಲಿ 197 ಕೋಟಿ ರೂ. ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆ
  • Spread the loveಹನೂರು: ತಾಲೂಕಿನ ಇತಿಹಾಸದಲ್ಲಿಯೇ ಇದೊಂದು ಮೈಲಿಗಲ್ಲು. ರೈತರಿಗೆ ಮುಖ್ಯವಾಗಿ ಬೇಕಾಗಿರುವುದು ನೀರು ಮತ್ತು ವಿದ್ಯುತ್. ಇವೆರಡೂ ಸಮರ್ಪಕವಾಗಿ ಸಿಕ್ಕರೆ ರೈತರ ಬದುಕು ಹಸನಾಗುತ್ತದೆ. ಆ…
  • ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಮತ್ತು ಸ್ಥಳೀಯ ಮೂಲಗಳಿಂದ ಸಮಗ್ರ ವರದಿ ಪರಿಶೀಲನೆ.
ಸುದ್ದಿ ಆಲಿಸಿ • ಸಿದ್ಧವಾಗಿದೆ (Ready)
AI ಆಡಿಯೋ ನ್ಯೂಸ್‌ರೂಮ್ • ಕನ್ನಡ & English
ವೇಗ:
Spread the love

ಹನೂರು: ತಾಲೂಕಿನ ಇತಿಹಾಸದಲ್ಲಿಯೇ ಇದೊಂದು ಮೈಲಿಗಲ್ಲು. ರೈತರಿಗೆ ಮುಖ್ಯವಾಗಿ ಬೇಕಾಗಿರುವುದು ನೀರು ಮತ್ತು ವಿದ್ಯುತ್. ಇವೆರಡೂ ಸಮರ್ಪಕವಾಗಿ ಸಿಕ್ಕರೆ ರೈತರ ಬದುಕು ಹಸನಾಗುತ್ತದೆ. ಆ ನಿಟ್ಟಿನಲ್ಲಿ ಇಂದು ಮಹತ್ವದ ಹೆಜ್ಜೆ ಇಟ್ಟಿದ್ದೇವೆ ಎಂದು ಶಾಸಕ ಎಂ.ಆರ್. ಮಂಜುನಾಥ್ ಹೇಳಿದರು.

ತಾಲೂಕಿನ ಹುಲಸುಗುಡ್ಡೆ ಸಮೀಪದ 8 ಎಕರೆ ಜಮೀನಿನಲ್ಲಿ ಸುಮಾರು 197 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ 220 ಕೆ.ವಿ ವಿದ್ಯುತ್ ಉಪಕೇಂದ್ರಕ್ಕೆ ಅವರು ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ಈ ಉಪಕೇಂದ್ರದಿಂದ ಎಲ್ಲಾ ಉಪಕೇಂದ್ರಗಳಿಗೆ ಮತ್ತೊಂದು ಮಾರ್ಗದ ಮೂಲಕ ವಿದ್ಯುತ್ ಪೂರೈಕೆಯಾಗಲಿದೆ. ಒಂದು ಕಡೆ ವಿದ್ಯುತ್ ವ್ಯತ್ಯಯವಾದರೂ, ಮತ್ತೊಂದು ಕಡೆಯಿಂದ ಶೀಘ್ರವಾಗಿ ವಿದ್ಯುತ್ ಪಡೆಯುವ ಅವಕಾಶ ಸಿಗಲಿದೆ. ಇದರಿಂದ ಹನೂರು ಭಾಗದ ರೈತರಿಗೆ ಬಹಳ ಅನುಕೂಲವಾಗಲಿದೆ. ಈ ಕಾರ್ಯವನ್ನು ಇಡೀ ಹನೂರು ತಾಲೂಕಿನ ರೈತರಿಗೆ, ರೈತಾಪಿ ವರ್ಗಕ್ಕೆ ಸಮರ್ಪಿಸುತ್ತೇನೆ ಎಂದು ಅವರು ತಿಳಿಸಿದರು.

ಈ ಯೋಜನೆಯಿಂದ ತಾಲೂಕಿನ ದೊಡ್ಡಿಂದುವಾಡಿ, ಕೊತ್ತನೂರು, ಹನೂರು, ಬಂಡಳ್ಳಿ, ಕೌದಳ್ಳಿ, ರಾಮಾಪುರ, ಮಹದೇಶ್ವರ ಬೆಟ್ಟ, ಲೊಕ್ಕನಹಳ್ಳಿ ಹಾಗೂ ಪಿ.ಜಿ.ಪಾಳ್ಯದ 66/11 ಕೆ.ವಿ ವಿದ್ಯುತ್ ಉಪಕೇಂದ್ರಗಳಿಗೆ ವಿದ್ಯುತ್ ಪೂರೈಕೆ ಸುಧಾರಣೆಯಾಗಲಿದೆ. ಗ್ರಾಮೀಣ ಭಾಗದಲ್ಲಿ ನಿರಂತರ ವಿದ್ಯುತ್ ಪೂರೈಕೆಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು.

ರೈತರು ರಾತ್ರಿ ವೇಳೆ ವಿದ್ಯುತ್ ಪಡೆದು ಅನುಭವಿಸುತ್ತಿರುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು, ಹಗಲಿನಲ್ಲೇ ಬಾವಿಗಳಿಗೆ ವಿದ್ಯುತ್ ನೀಡುವ ಉದ್ದೇಶದಿಂದ ಸೋಲಾರ್ ಮೂಲಕ ವಿದ್ಯುತ್ ಉತ್ಪಾದನೆಗೆ ಯೋಜನೆ ರೂಪಿಸಲಾಗಿದೆ ಎಂದರು.

ಕೆಪಿಟಿಸಿಎಲ್ ಎಂಜಿನಿಯರ್ ಪ್ರೀತಮ್ ಮಾತನಾಡಿ, ಈ ಹಿಂದೆ ಇದ್ದ 66 ಕೆ.ವಿ ಉಪಕೇಂದ್ರಗಳು ಎಲ್ಲವೂ ಸಿಂಗಲ್ ಸರ್ಕ್ಯೂಟ್ ಆಗಿದ್ದವು. ಒಂದು ಮಾರ್ಗದಲ್ಲಿ ವಿದ್ಯುತ್ ವ್ಯತ್ಯಯವಾದರೆ, ಅದಕ್ಕೆ ಸಂಪರ್ಕ ಹೊಂದಿದ್ದ 6ರಿಂದ 8 ಉಪಕೇಂದ್ರಗಳಲ್ಲಿ ವಿದ್ಯುತ್ ಇರುತ್ತಿರಲಿಲ್ಲ. ಈ ಹೊಸ ಉಪಕೇಂದ್ರದಿಂದ ಮತ್ತೊಂದು ಸರ್ಕ್ಯೂಟ್ ಮಾರ್ಗ ಲಭ್ಯವಾಗಲಿದೆ. ಒಂದು ಕಡೆ ವಿದ್ಯುತ್ ಹೋದರೂ ಇನ್ನೊಂದು ಕಡೆಯಿಂದ ಪೂರೈಸಲು ಸಾಧ್ಯವಾಗಲಿದೆ. ಇದರಿಂದ ವೋಲ್ಟೇಜ್ ಸುಧಾರಣೆಯಾಗಲಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ತಬಸ್ಸುಮ್ ಭಾನು, ಎಇಇ ರಂಗಸ್ವಾಮಿ, ವಿನೋದ್ ಸಿಂಗ್, ಚಾಮುಲ್ ಮಾಜಿ ಅಧ್ಯಕ್ಷ ಗುರುಮಲ್ಲಪ್ಪ, ಜಿ.ಪಂ. ಮಾಜಿ ಸದಸ್ಯ ರವಿ, ಮುಖಂಡರಾದ ಮಹಾದೇವ ಬಸವಣ್ಣ, ಜೆ.ಇಗಳಾದ ಚೇತನ್, ಕಿರಣ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ADVERTISEMENT