ಗುಡೇನಕಟ್ಟಿಯಲ್ಲಿ ಬೆಂಕಿ ಅವಘಡ: ಸಂತ್ರಸ್ತ ಕುಟುಂಬಗಳಿಗೆ ಷಣ್ಮುಖ ಶಿವಳ್ಳಿ ವೈಯಕ್ತಿಕ ನೆರವು

Spread the love

ಕುಂದಗೋಳ: ತಾಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ಇತ್ತೀಚೆಗೆ ಸಂಭವಿಸಿದ ಆಕಸ್ಮಿಕ ಬೆಂಕಿ ಅವಘಡದಲ್ಲಿ ಹೊಟ್ಟಿನ ಬಣವೆಗಳು ಹಾಗೂ ದನಕರುಗಳಿಗೆ ಉಪಯೋಗಿಸುವ ದವಸ-ಧಾನ್ಯಗಳು ಸುತ್ತು ಕರಕಲಾಗಿ ನಷ್ಟ ಅನುಭವಿಸಿದ ಕುಟುಂಬಗಳಿಗೆ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಷಣ್ಮುಖ ಶಿವಳ್ಳಿ ಅವರು ವೈಯಕ್ತಿಕವಾಗಿ ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.

ಗ್ರಾಮಕ್ಕೆ ಭೇಟಿ ನೀಡಿದ ಅವರು ಬೆಂಕಿ ಅವಘಡದಿಂದ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬ ಸದಸ್ಯರನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ಬಳಿಕ ನೊಂದ ಕುಟುಂಬಗಳಿಗೆ ತಲಾ 5,000 ರೂ.ಗಳಂತೆ ತಮ್ಮ ವೈಯಕ್ತಿಕ ಹಣದಿಂದ ಪರಿಹಾರ ವಿತರಿಸಿದರು. ಜೊತೆಗೆ, ಸಂತ್ರಸ್ತ ಕುಟುಂಬಗಳಿಗೆ ಆಹಾರದ ವ್ಯವಸ್ಥೆ ಮಾಡಿಸುವುದಾಗಿಯೂ ಭರವಸೆ ನೀಡಿದೆ.

ಈ ಸಂದರ್ಭದಲ್ಲಿ ಪ್ರದೇಶದ ಹಾಗೂ ಸ್ಥಳೀಯರು. 

Leave a Reply

Your email address will not be published. Required fields are marked *