
ಕುಂದಗೋಳ: ಪಟ್ಟಣದ ರೇವಡಿಗಾರ ಕಾಂಪ್ಲೆಕ್ಸ್‌ನಲ್ಲಿರುವ ಶಕ್ತಿ ಕ್ಲಿನಿಕ್ ಹಾಗೂ ಸ್ಕ್ಯಾನಿಂಗ್ ಆವರಣದಲ್ಲಿ ಸೆಪ್ಟೆಂಬರ್ 4ರಂದು ಉಚಿತ ಬಂಜೆತನ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.
ನೋವಾ ಐವಿಎಫ್ ಫರ್ಟಿಲಿಟಿ ಸಹಯೋಗದೊಂದಿಗೆ ಈ ಶಿಬಿರವನ್ನು ನಡೆಸಲಾಗುತ್ತಿದೆ.
ಅಂದು ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ ಬಂಜೆತನ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರಿಗೆ ಉಚಿತ ತಪಾಸಣೆ ಮತ್ತು ಸಲಹೆ ನೀಡಲಾಗುತ್ತದೆ.
ಬಂಜೆತನ ಎನ್ನುವದು ಒಂದು ಚಿಕಿತ್ಸೆ ಪಡೆಯಬಹುದಾದ ವೈದ್ಯಕೀಯ ಸ್ಥಿತಿ ಎಂದು ತಜ್ಞರು ತಿಳಿಸಿದ್ದಾರೆ. ಶಿಬಿರದಲ್ಲಿ ನುರಿತ ಫರ್ಟಿಲಿಟಿ ತಜ್ಞರು ಉಪಸ್ಥಿತರಿದ್ದು, ಉಚಿತ ಸಮಾಲೋಚನೆ, ನೋಂದಣಿ ಹಾಗೂ ಅಲ್ಟ್ರಾಸೌಂಡ್ ಸ್ಕ್ಯಾನ್ ಸೇವೆಗಳು ಲಭ್ಯವಿವೆ.
ಸ್ತ್ರೀ ರೋಗ ತಜ್ಞರಾದ ಡಾ. ಪವಿತ್ರ ಶ್ಯಾಮಸುಂದರ್ ಮತ್ತು ಡಾ. ಶಾರದಾ ಬಿ. ಕಮತರ ಅವರು ಶಿಬಿರದಲ್ಲಿ ಭಾಗವಹಿಸಿ ರೋಗಿಗಳನ್ನು ತಪಾಸಣೆ ಮಾಡಲಿದ್ದಾರೆ. ಈ ಅವಕಾಶವನ್ನು ಬಳಸಿಕೊಳ್ಳುವಂತೆ ಸಂಘಟಕರು ಮನವಿ ಮಾಡಿದ್ದಾರೆ.
ಆಸಕ್ತರು ಅಪಾಯಿಂಟ್‌ಮೆಂಟ್ ಪಡೆಯಲು 8105076752 ಮತ್ತು 8073140653 ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

