ರಾಜ್ಯದ ಜನತೆಗೆ ಶುಭ ಸುದ್ದಿ:ಸ್ವಾವಲಂಬಿ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಿಗೆ ಅರ್ಜಿ ಅಹ್ವಾನ

Spread the love

ಬೆಂಗಳೂರು, ಆ.28 – ಪರಿಶಿಷ್ಟ ಜಾತಿಯ ಸಮುದಾಯದ ಆರ್ಥಿಕ ಉನ್ನತಿಗಾಗಿ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ಸೇರಿದಂತೆ ರಾಜ್ಯದ ಐದು ಅಭಿವೃದ್ಧಿ ನಿಗಮಗಳು ವಿವಿಧ ಸ್ವಯಂ ಉದ್ಯೋಗ ಹಾಗೂ ಸಹಾಯಧನ ಯೋಜನೆಗಳಿಗಾಗಿ ಅರ್ಜಿ ಆಹ್ವಾನಿಸಿವೆ.

ಈ ಯೋಜನೆಗಳಲ್ಲಿ ಭಾಗವಹಿಸಲು ಇಚ್ಛಿಸುವ ಅರ್ಹ ಅಭ್ಯರ್ಥಿಗಳು ತಮ್ಮ ಸಮುದಾಯದ ನಿಗಮದ ವ್ಯಾಪ್ತಿಯ ಆಧಾರದ ಮೇಲೆ https://sevasindhu.karnataka.gov.in ವೆಬ್ ತಾಣದ ಮೂಲಕ ಆನ್ಲೈನ್ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ ಸೆಪ್ಟೆಂಬರ್ 10 ಆಗಿದೆ. ಅರ್ಜಿ ಸಲ್ಲಿಸಿದ ನಂತರ ಒಂದು ಪ್ರತಿಯನ್ನು ಸಂಬಂಧಿತ ನಿಗಮದ ಜಿಲ್ಲಾ ಕಚೇರಿಗೆ ಸಲ್ಲಿಸಲು ಸೂಚಿಸಲಾಗಿದೆ.

ಪ್ರಮುಖ ಯೋಜನೆಗಳು ಹೀಗಿವೆ:

🔹 ಸ್ವಯಂ ಉದ್ಯೋಗ ನೇರಸಾಲ ಯೋಜನೆ
ಹೈನುಗಾರಿಕೆ, ವ್ಯಾಪಾರ ಮತ್ತು ಇತರೆ ಉದ್ಯಮಗಳಿಗಾಗಿ ಘಟಕ ವೆಚ್ಚದ ಶೇಕಡಾ 50ರಿಂದ 70ರಷ್ಟು ಸಹಾಯಧನ ಅಥವಾ ಗರಿಷ್ಟ ₹2 ಲಕ್ಷ ವರೆಗೆ ಮಂಜೂರು. ಉಳಿದ ಮೊತ್ತ ಬ್ಯಾಂಕ್ ಸಾಲದ ಮೂಲಕ ಲಭ್ಯ.

🔹 ಸ್ವಾವಲಂಬಿ ಸಾರಥಿ ಯೋಜನೆ
ಸರಕು ವಾಹನ/ಹಳದಿ ಬೋರ್ಡ್ ಟ್ಯಾಕ್ಸಿ, ಪುಡ್ ಟ್ರಕ್, ಟ್ರೈಲರ್, ಮೊಬೈಲ್ ಕಿಚನ್, ಪುಡ್ ಕಿಯೋಸ್ಕ್‌ಗಳ ಖರೀದಿಗೆ ಶೇ.75ರಷ್ಟು ಸಹಾಯಧನ ಅಥವಾ ಗರಿಷ್ಟ ₹4 ಲಕ್ಷ ವರೆಗೆ ನೆರವು.

🔹 ಮೈಕ್ರೋ ಕ್ರೆಡಿಟ್ ಯೋಜನೆ (ಮಹಿಳಾ ಸ್ವಸಹಾಯ ಸಂಘಗಳು)
ಕನಿಷ್ಠ 10 ಸದಸ್ಯರಿರುವ ನೋಂದಾಯಿತ ಮಹಿಳಾ ಸಂಘಗಳಿಗೆ ₹5 ಲಕ್ಷ ವರೆಗೆ ನೆರವು, ಅದರಲ್ಲಿ ₹2.5 ಲಕ್ಷ ಸಹಾಯಧನ ಹಾಗೂ ₹2.5 ಲಕ್ಷ ಸಾಲ (ಶೇಕಡಾ 4ರಷ್ಟು ಬಡ್ಡಿ).

🔹 ಗಂಗಾ ಕಲ್ಯಾಣ ಯೋಜನೆ ಮತ್ತು ಭೂ ಒಡೆತನ ಯೋಜನೆಗೂ ಅರ್ಜಿ ಹಾಕಬಹುದಾಗಿದೆ.

ನಿಗಮಗಳ ಅಧಿಕೃತ ವೆಬ್ ತಾಣಗಳು:

ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ – https://adcl.karnataka.gov.in

ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ – https://adijambava.karnataka.gov.in

ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ – https://www.kbdc.karnataka.gov.in

ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ – https://kssksc.kar.nic.in

ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ – https://ktdc.karnataka.gov.in

ಹೆಚ್ಚಿನ ಮಾಹಿತಿಗೆ ಸಂಬಂಧಿತ ಜಿಲ್ಲೆಯ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರನ್ನು ಸಂಪರ್ಕಿಸಬಹುದು. ಕೊಡಗು ಜಿಲ್ಲೆಯ ಅಭ್ಯರ್ಥಿಗಳು ದೂರವಾಣಿ ಸಂಖ್ಯೆ 08272-228857 ಕ್ಕೆ ಕರೆ ಮಾಡಬಹುದು ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ

Leave a Reply

Your email address will not be published. Required fields are marked *