​ಧಾರವಾಡ ಉದ್ಯೋಗ ಮೇಳ: ನೋಂದಣಿಗೆ ಕ್ಯೂ.ಆರ್ ಕೋಡ್ ಸೌಲಭ್ಯ – ಫೆಬ್ರವರಿ 21 ಕೊನೆಯ ದಿನ!

ಧಾರವಾಡ: ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಫೆಬ್ರವರಿ 22 ರಂದು ಕರ್ನಾಟಕ ಕಾಲೇಜು (ಕೆ.ಸಿ.ಡಿ) ಆವರಣದಲ್ಲಿ ಆಯೋಜಿಸಿರುವ ಬೃಹತ್ ಜಿಲ್ಲಾ ಮಟ್ಟದ ಉದ್ಯೋಗ ಮೇಳಕ್ಕೆ ಅಭ್ಯರ್ಥಿಗಳು ಕ್ಯೂ.ಆರ್ ಕೋಡ್ (QR Code) ಸ್ಕ್ಯಾನ್ ಮಾಡುವ ಮೂಲಕ ಸುಲಭವಾಗಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಆಸಕ್ತ ಉದ್ಯೋಗ ಆಕಾಂಕ್ಷಿಗಳು ತಮ್ಮ ಹೆಸರು ನೋಂದಾಯಿಸಲು ಫೆಬ್ರವರಿ 21 ಕೊನೆಯ ದಿನ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ​ಜಿಲ್ಲಾ ಕೌಶಲ್ಯ ಮಿಷನ್ ಹಾಗೂ…

Read More

ಫೆಬ್ರುವರಿ 22 ರಂದು ಧಾರವಾಡದಲ್ಲಿ ಜಿಲ್ಲಾ ಮಟ್ಟದ ಶ್ವಾನ ಪ್ರದರ್ಶನ ಹಾಗೂ ಬೀದಿ ನಾಯಿ ಮರಿಗಳ ದತ್ತು ಕಾರ್ಯಕ್ರಮ: ಜಿ.ಪಂ. ಸಿಇಓ ಭುವನೇಶ ಪಾಟೀಲ

ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ಹಾಗೂ ಜಿಲ್ಲೆಯಲ್ಲಿ ಬೀದಿ ನಾಯಿಗಳ ನಿಯಂತ್ರಣ ಮತ್ತು ನಿರ್ವಹಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಫೆಬ್ರವರಿ 22 ರಂದು ಕರ್ನಾಟಕ ಕಾಲೇಜು (ಕೆ.ಸಿ.ಡಿ) ಆವರಣದಲ್ಲಿ ಜಿಲ್ಲಾ ಮಟ್ಟದ ಶ್ವಾನಗಳ ಪ್ರದರ್ಶನ, ಪೆಟ್ ಫ್ಯಾಶನ್ ಶೋ ಹಾಗೂ ಬೀದಿ ಶ್ವಾನ ಮರಿಗಳನ್ನು ದತ್ತು ಪಡೆಯುವ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ತಿಳಿಸಿದ್ದಾರೆ. ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ಇಂದು ಬೆಳಿಗ್ಗೆ ನಡೆದ ಪೂರ್ವಭಾವಿ ಸಭೆಯಲ್ಲಿ…

Read More

ಜನಮನ ಸೂರೆಗೊಂಡ ‘ಶಿವಾಮೃತ’: ಕುಂದಗೋಳದಲ್ಲಿ ನಿರಾಮಯ ಫೌಂಡೇಶನ್ ವತಿಯಿಂದ ಅದ್ಧೂರಿ ಶಿವರಾತ್ರಿ ಉತ್ಸವ

ಕುಂದಗೋಳ: ಪಟ್ಟಣದ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ನಿರಾಮಯ ಫೌಂಡೇಶನ್ ಹಮ್ಮಿಕೊಂಡಿದ್ದ ಸಂಗೀತ, ನೃತ್ಯ ಹಾಗೂ ಜಾನಪದ ಒಳಗೊಂಡ ‘ಶಿವಾಮೃತ’ ಕಾರ್ಯಕ್ರಮವು ಜನಮನ ಸೂರೆಗೊಂಡಿತು. ಭಾನುವಾರ ಸಂಜೆ 7 ಗಂಟೆಗೆ ಆರಂಭವಾದ ಈ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಉತ್ಸವವು ಸೋಮವಾರ ಬೆಳಗಿನ ಜಾವ 7 ಗಂಟೆಯವರೆಗೆ ನಿರಂತರವಾಗಿ ಜರುಗುವ ಮೂಲಕ ಭಕ್ತರನ್ನು ಭಕ್ತಿಭಾವದಲ್ಲಿ ತೇಲಿಸಿತು. ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಕಲ್ಯಾಣಪುರದ ಶ್ರೀ ಅಭಿನವ ಬಸವಣ್ಣಜ್ಜನವರು ಮಾತನಾಡಿ, ಯುವಕರಲ್ಲಿ ಆತ್ಮಸ್ಥೈರ್ಯ ತುಂಬುವ ನಿರಾಮಯ ಫೌಂಡೇಶನ್ ಕಾರ್ಯ…

Read More

ಧಾರವಾಡ ಹೈಕೋರ್ಟ್ ಬೆಂಚ್‌ಗೆ ಬಾಂಬ್ ಬೆದರಿಕೆ – ಸ್ಥಳದಲ್ಲಿ ಹೈ ಅಲರ್ಟ್!

ಧಾರವಾಡ: ಇಲ್ಲಿನ ಹೈಕೋರ್ಟ್ ಪೀಠಕ್ಕೆ ಇಂದು ಮಧ್ಯಾಹ್ನ 1:30ಕ್ಕೆ ಬಾಂಬ್ ಸ್ಫೋಟಿಸುವುದಾಗಿ ಅಪರಿಚಿತರಿಂದ ಇ-ಮೇಲ್ ಬಂದಿದ್ದು, ಇಡೀ ನ್ಯಾಯಾಲಯದ ಆವರಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ​ತಕ್ಷಣದ ಪೊಲೀಸ್ ಕಾರ್ಯಾಚರಣೆ: ​ಇ-ಮೇಲ್ ಮೂಲಕ ಬಂದ ಬಾಂಬ್ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ, ತಕ್ಷಣವೇ ಹೈಕೋರ್ಟ್ ಆವರಣಕ್ಕೆ ಧಾವಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಹೈಕೋರ್ಟ್‌ನ ಎಲ್ಲಾ ನ್ಯಾಯಾಧೀಶರು, ವಕೀಲರು ಹಾಗೂ ಸಿಬ್ಬಂದಿಗಳನ್ನು ಸದ್ಯಕ್ಕೆ ಕಟ್ಟಡದಿಂದ ಹೊರಗೆ ಕಳುಹಿಸಲಾಗಿದೆ. ​ಶ್ವೇತದಳ ಹಾಗೂ ಬಾಂಬ್ ನಿಷ್ಕ್ರಿಯ ದಳದಿಂದ ತಪಾಸಣೆ: ​ಸ್ಥಳಕ್ಕೆ ಆಗಮಿಸಿರುವ ಶ್ವಾನ…

Read More

ನವಲಗುಂದ: ಬಂಜಾರ ಸಮುದಾಯದಿಂದ ಸಂತ ಸೇವಾಲಾಲ್ ಮಹಾರಾಜರ ಜಯಂತಿ ಅದ್ದೂರಿ ಆಚರಣೆ

ನವಲಗುಂದ: ಪಟ್ಟಣದ ಬಸವೇಶ್ವರ ನಗರದಲ್ಲಿ ಬಂಜಾರ ಸಮಾಜದ ವತಿಯಿಂದ ಸಂತ ಸೇವಾಲಾಲ್ ಮಹಾರಾಜ ಅವರ ಜಯಂತಿಯನ್ನು ಅತ್ಯಂತ ಭಕ್ತಿಭಾವ ಹಾಗೂ ಸಡಗರದಿಂದ ಆಚರಿಸಲಾಯಿತು. ಸಮಾಜದ ಸುಧಾರಕ, ಅಹಿಂಸಾ ಮಾರ್ಗದರ್ಶಕ ಸಂತ ಸೇವಾಲಾಲ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಅವರ ತತ್ವ ಆದರ್ಶಗಳನ್ನು ಸ್ಮರಿಸಲಾಯಿತು. ​ಈ ಸಮಯದಲ್ಲಿ ಉಪಸ್ಥಿತರಿದ್ದ ಧಾರವಾಡ ಲೋಕಸಭಾ ಅಭ್ಯರ್ಥಿ ಹಾಗೂ ಕೆಪಿಸಿಸಿ ಸದಸ್ಯ ವಿನೋದ ಅಸೂಟಿ ಅವರು ಮಾತನಾಡಿ, ಸೇವಾಲಾಲ್ ಮಹಾರಾಜರು ಬಂಜಾರ ಸಮುದಾಯಕ್ಕೆ ಮಾತ್ರವಲ್ಲದೆ ಇಡೀ ಸಮಾಜಕ್ಕೆ ಶಿಸ್ತು ಮತ್ತು…

Read More

ಮಕ್ಕಳ ಕನಸುಗಳಿಗೆ ಬಣ್ಣ ತುಂಬಿದ ಎರಡು ಕೃತಿಗಳ ಲೋಕಾರ್ಪಣೆ

​ಧಾರವಾಡ: ಮಕ್ಕಳ ಸಾಹಿತ್ಯದ ಮೂಲಕ ಎಳೆಯ ಮನಸ್ಸುಗಳನ್ನು ಪೋಷಿಸುವ ಹಾಗೂ ಅವರ ಕಲ್ಪನಾ ಶಕ್ತಿಯನ್ನು ಹೆಚ್ಚಿಸುವ ಕೆಲಸವನ್ನು ಶಿಕ್ಷಕರಾದ ಶ್ರೀಧರ್ ಗಸ್ತಿಯವರು ಶ್ಲಾಘನೀಯವಾಗಿ ಮಾಡುತ್ತಿದ್ದಾರೆ ಎಂದು ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ. ಬಸು ಬೇವಿನಗಿಡದ ಅಭಿಪ್ರಾಯಪಟ್ಟರು. ​ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಚಿಲಿಪಿಲಿ ಪ್ರಕಾಶನ ಆಯೋಜಿಸಿದ್ದ ಶ್ರೀಧರ್ ಗಸ್ತಿ ಅವರ “The Cup Touched by Devamma” (ದೇವಮ್ಮನ ಲೋಟ – ಇಂಗ್ಲಿಷ್ ಅನುವಾದ) ಹಾಗೂ “ಎಲೆಬಾಳೆ ಸುಳಿನನವ್ವ” ಕೃತಿಗಳ ಲೋಕಾರ್ಪಣಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ​ಜೀವನಾನುಭವದ…

Read More

ಶಿಕ್ಷಣದ ಜೊತೆಗೆ ಸಂಸ್ಕಾರ ನೀಡುವುದು ಇಂದಿನ ಅಗತ್ಯ: ಶಾಸಕ ಎನ್.ಎಚ್. ಕೋನರಡ್ಡಿ ಅಭಿಮತ

ನವಲಗುಂದ: ಶಿಕ್ಷಣ ಸಂಸ್ಥೆಗಳು ಕೇವಲ ಅಂಕ ಗಳಿಸುವ ಯಂತ್ರಗಳನ್ನು ಸೃಷ್ಟಿಸದೆ, ಗುಣಮಟ್ಟದ ಶಿಕ್ಷಣದ ಜೊತೆಗೆ ಮಕ್ಕಳಿಗೆ ಸಂಸ್ಕಾರಯುತ ಬದುಕನ್ನು ಕಲಿಸಿಕೊಡುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ ಎಂದು ಶಾಸಕ ಎನ್.ಎಚ್. ಕೋನರಡ್ಡಿ ಅವರು ಹೇಳಿದರು. ​ಸ್ಥಳೀಯ ನ್ಯೂ ಆಕಾಶ ಲಿಟಲ್ ಕಿಡ್ಸ್ ಹಾಗೂ ಎ.ಬಿ. ಬಾಗಿ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ತೀವ್ರ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಕೇವಲ ಪುಸ್ತಕದ ಜ್ಞಾನ ನೀಡಿದರೆ ಸಾಲದು, ಅವರಲ್ಲಿ ಸ್ಪರ್ಧಾತ್ಮಕ ಮನೋಭಾವನೆಯನ್ನು ಬೆಳೆಸಬೇಕು. ವಾಸ್ತವಿಕ…

Read More

ಧಾರವಾಡ: ಮಿತಿಮೀರಿದ ಮರಳು ತುಂಬಿದ ಟಿಪ್ಪರ್ ಅಟ್ಟಹಾಸ; ಬ್ರೇಕ್ ಫೇಲ್ ಆಗಿ ಸರಣಿ ಅಪಘಾತ, ಜನರ ಆಕ್ರೋಶ

​ಧಾರವಾಡ: ನಗರದ ಮರಾಠಾ ಕಾಲನಿಯ ಯುನಿಟಿ ಆಸ್ಪತ್ರೆ ಸಮೀಪ ಶನಿವಾರ ಬೆಳಿಗ್ಗೆ ಮರಳು ತುಂಬಿದ ಟಿಪ್ಪರ್‌ನಿಂದ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ಮಿತಿಮೀರಿ ಮರಳು ಸಾಗಿಸುವ ಟಿಪ್ಪರ್‌ಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಯಮ ಬಾಹಿರವಾಗಿ ಟಿಪ್ಪರ್‌ನಲ್ಲಿ ಹೆಚ್ಚು ಮರಳು ತುಂಬಿಕೊಂಡು ನಗರದ ಜನನಿಬಿಡ ಪ್ರದೇಶಗಳಲ್ಲಿ ಸಂಚರಿಸುತ್ತಿರುವುದೇ ಇಂತಹ ಅನಾಹುತಗಳಿಗೆ ಮೂಲ ಕಾರಣ ಎಂದು ಸ್ಥಳೀಯರು ಕಿಡಿಕಾರಿದ್ದಾರೆ. ​ಶನಿವಾರ ಬೆಳಿಗ್ಗೆ ಮರಳು ತುಂಬಿದ ಟಿಪ್ಪರ್ ಮರಾಠಾ ಕಾಲನಿ ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ ಹಠಾತ್ ಬ್ರೇಕ್ ವೈಫಲ್ಯ ಸಂಭವಿಸಿದೆ. ಮಿತಿಮೀರಿದ…

Read More

ಗುರುಕುಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ 18ನೇ ವಾರ್ಷಿಕ ಸ್ನೇಹ ಸಮ್ಮೇಳನ ಸಂಭ್ರಮ

ನವಲಗುಂದ: ಪಟ್ಟಣದ ಪ್ರಸಿದ್ಧ ಶಿಕ್ಷಣ ಸಂಸ್ಥೆಯಾದ ಗುರುಕುಲ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 18ನೇ ವಾರ್ಷಿಕ ಸ್ನೇಹ ಸಮ್ಮೇಳನವು ಶಾಲಾ ಆವರಣದಲ್ಲಿ ಅತ್ಯಂತ ಅದ್ದೂರಿಯಾಗಿ ಜರುಗಿತು. ಬಣ್ಣಬಣ್ಣದ ದೀಪಾಲಂಕಾರ ಹಾಗೂ ಸಾಂಸ್ಕೃತಿಕ ಕಳೆಗಟ್ಟಿದ ಶಾಲಾ ಆವರಣದಲ್ಲಿ ನಡೆದ ಈ ಸಂಭ್ರಮದಲ್ಲಿ ವಿದ್ಯಾರ್ಥಿಗಳು, ಪೋಷಕರು ಹಾಗೂ ನೂರಾರು ಗಣ್ಯರು ಸಾಕ್ಷಿಯಾದರು. ​ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಧಾರವಾಡ ಜಿಲ್ಲಾ ಬಿಜೆಪಿ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ ಅವರು ಮಾತನಾಡಿ, ಶಿಕ್ಷಣವು ಮನುಷ್ಯನ ಜೀವನದ ದಾರಿದೀಪವಾಗಿದೆ. ವಿದ್ಯಾರ್ಥಿಗಳು ಕೇವಲ ಅಂಕಗಳಿಗೆ ಸೀಮಿತವಾಗದೆ ಶಿಸ್ತು, ಕಠಿಣ…

Read More

ಬಾಡ ಗ್ರಾಮದಲ್ಲಿ ಫೆ. 16 ರಿಂದ ಶ್ರೀ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವ: ವಿವಿಧ ಪವಾಡಗಳ ಸಡಗರ

​ಧಾರವಾಡ: ತಾಲೂಕಿನ ಸುಕ್ಷೇತ್ರ ಬಾಡ ಗ್ರಾಮದಲ್ಲಿ ಪ್ರತಿ ವರ್ಷದ ಪದ್ಧತಿಯಂತೆ ಈ ಬಾರಿಯೂ 23ನೇ ವರ್ಷದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ಭವ್ಯ ಜಾತ್ರಾ ಮಹೋತ್ಸವವನ್ನು ಫೆಬ್ರವರಿ 16 ಮತ್ತು 17 ರಂದು ಹಮ್ಮಿಕೊಳ್ಳಲಾಗಿದೆ. ಎರಡು ದಿನಗಳ ಕಾಲ ಜರುಗುವ ಈ ಧಾರ್ಮಿಕ ಉತ್ಸವದಲ್ಲಿ ಅಪಾರ ಭಕ್ತ ಮಂಡಳಿಯ ಸಮ್ಮುಖದಲ್ಲಿ ವಿವಿಧ ವೈವಿಧ್ಯಮಯ ಕಾರ್ಯಕ್ರಮಗಳು ಮತ್ತು ಸಾಂಪ್ರದಾಯಿಕ ಪೂಜಾ ಕೈಂಕರ್ಯಗಳು ನೆರವೇರಲಿವೆ. ​ಜಾತ್ರೆಯ ಮೊದಲ ದಿನವಾದ ಫೆಬ್ರವರಿ 16ರ ಸೋಮವಾರದಂದು ಜ್ಯೋತಿ ಬೆಳಗಿಸುವುದು, ಧ್ವಜಾರೋಹಣ ಹಾಗೂ ತ್ರಿಸೂಲಿ ಪೂಜೆ…

Read More