ಶ್ರೀ ರೇಣುಕಾದೇವಿ ರೈತರ ಗೋವಿನಜೋಳದ ಸಂಸ್ಕರಣ ಸಹಕಾರಿ ಸಂಘಕ್ಕೆ ಅವಿರೋಧ ಆಯ್ಕೆ
ನವಲಗುಂದ: ಪಟ್ಟಣದಲ್ಲಿರುವ ಶ್ರೀ ರೇಣುಕಾದೇವಿ ರೈತರ ಗೋವಿನಜೋಳದ ಸಂಸ್ಕರಣ ಸಹಕಾರಿ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರ ಸ್ಥಾನಗಳಿಗೆ ಶನಿವಾರ ನಡೆದ ಚುನಾವಣೆಯಲ್ಲಿ ಎಲ್ಲರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಅಧ್ಯಕ್ಷರಾಗಿ ಸದುಗೌಡ ಅಂದಾನಗೌಡ ಪಾಟೀಲ ಹಾಗೂ ಉಪಾಧ್ಯಕ್ಷರಾಗಿ ಸೋಮೇಶ ಜಗದೀಶ ಉಪನಾಳ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಶ್ರೀದೇವಿ ಕುಲಕರ್ಣಿ ಘೋಷಿಸಿದರು. ಅದೇ ರೀತಿ, ಸಂಘದ ನಿರ್ದೇಶಕ ಸ್ಥಾನಗಳಿಗೆ ಶಿದ್ದಲಿಂಗಪ್ಪ ಚನಬಸಪ್ಪ ಮದ್ಯೋರ, ಪಕ್ಕೀರಗೌಡ ರುದ್ರಗೌಡ ಕಲ್ಲನಗೌಡ್ರ, ಮಂಜುನಾಥ ಹನಮಪ್ಪ ಬಂಡಿವಾಡ, ನಾಗನಗೌಡ ಶಿದ್ಧನಗೌಡ ಪಾಟೀಲ,…

