ಧಾರವಾಡದಲ್ಲಿ ಜಪಾನ್ ನೈಡೆಕ್ ಕಂಪನಿಯ ₹600 ಕೋಟಿ ಆರ್ಚರ್ಡ್ ಹಬ್ ಉದ್ಘಾಟನೆ
ಧಾರವಾಡ ನ.15: ಇಲ್ಲಿನ ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಜಪಾನ್ ಮೂಲದ ನೈಡೆಕ್ ಕಂಪನಿಯು 600 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಥಾಪಿಸಿರುವ ಆರ್ಚರ್ಡ್ ಹಬ್‍ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಅವರು ಶುಕ್ರವಾರ (ನ.14) ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನೈಡೆಕ್ ಕಂಪನಿಯ ಈ ಸಂಸ್ಥೆಯ ಸ್ಥಾಪನೆಗೆ ಐದು ತಿಂಗಳ ಹಿಂದೆ ನಾನೇ ಭೂಮಿಪೂಜೆ ನೆರವೇರಿಸಿದ್ದೆ. ಕಂಪನಿಯು ಕೇಳಿದ್ದ ಸವಲತ್ತುಗಳನ್ನೆಲ್ಲ ರಾಜ್ಯ ಸರಕಾರವು ತ್ವರಿತವಾಗಿ ಪೂರೈಸಿದೆ. ಇದಕ್ಕೆ ತಕ್ಕಂತೆ ಕಂಪನಿಯು…

