ನಶೆ ಮುಕ್ತ ಅವಳಿ ನಗರಕ್ಕೆ ಪೊಲೀಸ್ ಸಮರ: ಡ್ರಗ್ಸ್ ಸೇವನೆಕೋರರಿಗೆ ಬಿಗ್ ಶಾಕ್!
ವರದಿ: ವಿನಾಯಕ ಗುಡ್ಡದಕೇರಿ ಧಾರವಾಡ/ಹುಬ್ಬಳ್ಳಿ: ಅವಳಿ ನಗರಗಳಾದ ಹುಬ್ಬಳ್ಳಿ-ಧಾರವಾಡದಲ್ಲಿ ಡ್ರಗ್ಸ್ ಹಾವಳಿಯನ್ನು ಸಂಪೂರ್ಣವಾಗಿ ತಡೆಗಟ್ಟಲು ಪೊಲೀಸ್ ಇಲಾಖೆಯು ‘ಆಪರೇಷನ್ ಕ್ಲೀನ್’ (Operation Clean) ಆರಂಭಿಸಿದೆ. ಇತ್ತಿಚ್ಚಿಗೆ ನಗರದಾದ್ಯಂತ ಪೊಲೀಸ್ ಇಲಾಖೆ ನಡೆಸಿದ ಬಿಗಿ ಡ್ರಿಲ್ ಕಾರ್ಯಾಚರಣೆಯು ಡ್ರಗ್ಸ್ ಸೇವನೆ ಮತ್ತು ಮಾರಾಟ ಮಾಡುತ್ತಿದ್ದವರ ನಿದ್ದೆಗೆಡಿಸಿದೆ. 💉 ನೂರಾರು ಶಂಕಿತರಿಗೆ ಮೆಡಿಕಲ್ ಟೆಸ್ಟ್ ಅವಳಿ ನಗರದ ಪ್ರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಡ್ರಗ್ಸ್ ಸೇವನೆ ಅಥವಾ ಮಾರಾಟದ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಬಗ್ಗೆ ಅನುಮಾನ ಹೊಂದಿರುವವರನ್ನು ಪೊಲೀಸರು ಮುಂಜಾನೆಯೇ ವಶಕ್ಕೆ…

