ಧಾರವಾಡ ಜಿಲ್ಲಾ ಕೃಷಿ ತರಬೇತಿ ಕೇಂದ್ರದಿಂದ ಊಟ-ಉಪಹಾರ ಪೂರೈಕೆಗೆ ದರಪಟ್ಟಿ ಆಹ್ವಾನ
ಧಾರವಾಡ: ನಗರದ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ವತಿಯಿಂದ 2025-26ನೇ ಸಾಲಿನ ವಿವಿಧ ಯೋಜನೆಗಳಡಿ ಆಯೋಜಿಸಲಾಗುವ ರೈತರ ಮತ್ತು ಅಧಿಕಾರಿಗಳ ತರಬೇತಿ ಕಾರ್ಯಕ್ರಮಗಳಿಗೆ ಊಟ ಹಾಗೂ ಉಪಹಾರವನ್ನು ಪೂರೈಸಲು ಅರ್ಹ ಕೆಟರಿಂಗ್ ಮಾಲೀಕರಿಂದ ಮುಚ್ಚಿದ ಲಕೋಟೆಯಲ್ಲಿ ದರಪಟ್ಟಿಗಳನ್ನು ಆಹ್ವಾನಿಸಲಾಗಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಹಾಯಕ ಕೃಷಿ ನಿರ್ದೇಶಕರು, ತರಬೇತಿ ಕೇಂದ್ರದಲ್ಲಿ ನಡೆಯುವ ವರ್ಷಪೂರ್ತಿ ಕಾರ್ಯಕ್ರಮಗಳಿಗೆ ಗುಣಮಟ್ಟದ ಆಹಾರ ಸರಬರಾಜು ಮಾಡುವ ಆಸಕ್ತಿಯುಳ್ಳ ಕೆಟರಿಂಗ್ ಸಂಸ್ಥೆಗಳು ತಮ್ಮ ದರಪಟ್ಟಿಯನ್ನು ಸಲ್ಲಿಸಬಹುದಾಗಿದೆ….

