ಮನುಷ್ಯತ್ವದ ಕಗ್ಗೊಲೆಗೆ ಮೌನವೇಕೆ? ಮಾನ್ಯಾಳ ಸಾವಿನ ಸುತ್ತಲ ಜಾತಿ ರಾಜಕೀಯ ಮತ್ತು ಸಂಘಟನೆಗಳ ಇಬ್ಬಂದಿತನ!
ಹುಬ್ಬಳ್ಳಿ: ಇನಾಂವೀರಾಪುರದಲ್ಲಿ ಹರಿದ ಆ ರಕ್ತ ಇಡೀ ನಾಗರಿಕ ಸಮಾಜಕ್ಕೆ ಹಚ್ಚಿದ ಮಸಿ. ಅಂತರ್ಜಾತಿ ವಿವಾಹವೆಂಬ ಒಂದೇ ಕಾರಣಕ್ಕೆ ಇಡೀ ಕುಟುಂಬವನ್ನೇ ಟ್ರ್ಯಾಕ್ಟರ್‌ನಿಂದ ಗುದ್ದಿಸಿ, ಮನೆಗೆ ನುಗ್ಗಿ ಕೊಡಲಿ-ರಾಡ್‌ಗಳಿಂದ ಮಹಿಳೆಯರ ಮೇಲೆ ಅಟ್ಟಹಾಸ ಮೆರೆದ ಈ ಘಟನೆ ಪ್ರಜಾಪ್ರಭುತ್ವದ ಅತಿದೊಡ್ಡ ಸೋಲು. ಆದರೆ, ಈ ಭೀಕರ ಕೃತ್ಯ ನಡೆದಾಗ ಸಮಾಜದಲ್ಲಿ ವ್ಯಕ್ತವಾಗುತ್ತಿರುವ “ಆಯ್ದ ಮೌನ” ಹಾಗೂ ಸಂಘಟನೆಗಳ ನಿಲುವುಗಳು ಈಗ ಗಂಭೀರ ಚರ್ಚೆಗೆ ಗ್ರಾಸವಾಗಿವೆ. ನಿಸರ್ಗದ ನಿಯಮ ಮರೆತ “ಬುದ್ಧಿಜೀವಿ” ಮನುಷ್ಯ ಈ ಜಗತ್ತಿನಲ್ಲಿ ಜಾತಿ ಎಂಬುದು…

