ಗಾಮನಗಟ್ಟಿ ಕೈಗಾರಿಕಾ ಪ್ರದೇಶ: ಜನೆವರಿ 21 ರಂದು ಲಾಟರಿ ಮೂಲಕ ವಸತಿ ನಿವೇಶನ ಹಂಚಿಕೆ

ಧಾರವಾಡ: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು (KIADB) ಧಾರವಾಡ ವಲಯದ ಗಾಮನಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ ಅಭಿವೃದ್ಧಿಪಡಿಸಿರುವ ವಸತಿ ನಿವೇಶನಗಳ ಹಂಚಿಕೆ ಪ್ರಕ್ರಿಯೆಗೆ ಚಾಲನೆ ನೀಡಿದೆ. ಈಗಾಗಲೇ ನಿವೇಶನಗಳಿಗಾಗಿ ಹಣ ಸಂದಾಯ ಮಾಡಿರುವ ಅರ್ಜಿದಾರರಿಗೆ ಲಾಟರಿ (ಚೀಟಿ ಎತ್ತುವಿಕೆ) ಮೂಲಕ ನಿವೇಶನ ಸಂಖ್ಯೆಯನ್ನು ಹಂಚಿಕೆ ಮಾಡಲು ದಿನಾಂಕ ನಿಗದಿಪಡಿಸಲಾಗಿದೆ. ​ಬರುವ ಜನೆವರಿ 21, 2026 ರಂದು ಬೆಳಿಗ್ಗೆ 11 ಗಂಟೆಗೆ ಹುಬ್ಬಳ್ಳಿಯ ಅಶೋಕ ನಗರದ ಪೊಲೀಸ್ ಠಾಣೆ ಸಮೀಪವಿರುವ ಡಾ. ಬಿ.ಎಸ್. ಕರ್ಕಿ ಕನ್ನಡ ಸಭಾ ಭವನದಲ್ಲಿ ಹಂಚಿಕೆ…

Read More

ಮರ್ಯಾದಾ ಹತ್ಯೆ ಖಂಡಿಸಿ ಕುಂದಗೋಳದಲ್ಲಿ ದಲಿತ ಸಂಘಟನೆಗಳ ಬೃಹತ್ ಪ್ರತಿಭಟನೆಆರೋಪಿಗಳಿಗೆ ಕಾನೂನು ಶಿಕ್ಷೆಗೆ ಆಗ್ರಹ

ಕುಂದಗೋಳ: ಹುಬ್ಬಳ್ಳಿ ತಾಲ್ಲೂಕಿನ ಇನಾಂವೀರಾಪುರ ಗ್ರಾಮದ ದಲಿತ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ ಅನ್ಯ ಜಾತಿಯ ಯುವತಿ ಮಾನ್ಯಾಳನ್ನು ಆಕೆಯ ಕುಟುಂಬದವರೇ ಮರ್ಯಾದಾ ಹತ್ಯೆ ಮಾಡಿ, ಆಕೆಯ ಪತಿಯ ಕುಟುಂಬದ ಮೇಲೆಯೂ ಪೈಶಾಚಿಕವಾಗಿ ಹಲ್ಲೆ ನಡೆಸಿರುವುದನ್ನು ಖಂಡಿಸಿ, ಚಲವಾದಿ ಸಮಾಜ ಹಿತ ರಕ್ಷಣಾ ಸಮಿತಿ ಹಾಗೂ ವಿವಿಧ ದಲಿತ ಪರ ಒಕ್ಕೂಟಗಳ ನೇತೃತ್ವದಲ್ಲಿ ಕುಂದಗೋಳದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಶಿರಸ್ತೆದಾರ ಮಹೇಶ ಶ್ಯಾನಬಾಳ ಅವರಿಗೆ ಮನವಿ ಸಲ್ಲಿಸಲಾಯಿತು. ಪಟ್ಟಣದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ತಳಿಗೆ…

Read More

ಇನಾಂ ವೀರಾಪೂರ ಪ್ರಕರಣ ಕುರಿತ ಸಭೆಗ್ರಾಮದಲ್ಲಿ ಶಾಂತಿ ಕಾಪಾಡಿ; ಇಂತಹ ದುರ್ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಿ– ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಸೂಚನೆ

ಧಾರವಾಡ, ಡಿ.30: ಇನಾಂ ವೀರಾಪೂರ ಗ್ರಾಮದಲ್ಲಿ ಶಾಂತಿ ಹಾಗೂ ಸೌಹಾರ್ದತೆ ನೆಲೆಸುವಂತೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ದೌರ್ಜನ್ಯಕ್ಕೆ ಒಳಗಾದ ಕುಟುಂಬಕ್ಕೆ ನಿಯಮಾನುಸಾರ ಪರಿಹಾರ ಮತ್ತು ಸಮರ್ಪಕ ರಕ್ಷಣೆ ಒದಗಿಸಬೇಕು ಎಂದು ಬಾಗಲಕೋಟ ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರು ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತಕ್ಕೆ ಸೂಚಿಸಿದರು. ಮಂಗಳವಾರದಂದು (ಡಿ.30) ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿದ ಸಚಿವರು, ಇನಾಂ ವೀರಾಪೂರ ಗ್ರಾಮದಲ್ಲಿ ನಡೆದ ದೌರ್ಜನ್ಯ ಹಾಗೂ ಕೊಲೆ ಪ್ರಕರಣದ…

Read More

ಜನವರಿ 5 ರಂದು ಧಾರವಾಡದಲ್ಲಿ ‘ಪಂಚ ಗ್ಯಾರಂಟಿ ಉತ್ಸವ’: ಅದ್ಧೂರಿ ಆಚರಣೆಗೆ ಸಿದ್ಧತೆ

​ಧಾರವಾಡ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಐದು ಗ್ಯಾರಂಟಿ ಯೋಜನೆಗಳ ಯಶಸ್ಸಿನ ಸಂಭ್ರಮಕ್ಕಾಗಿ ಜಿಲ್ಲೆಯಲ್ಲಿ ಬರುವ ಜನವರಿ 5, 2026 ರಂದು ಅತ್ಯಂತ ಅದ್ಧೂರಿಯಾಗಿ ‘ಪಂಚ ಗ್ಯಾರಂಟಿ ಉತ್ಸವ’ವನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ​ಸೋಮವಾರ ಜಿಲ್ಲಾ ಪಂಚಾಯತ್ ಸಭಾ ಭವನದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಬೆಳಗಾವಿ ವಿಭಾಗೀಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ್ ಅವರು ಈ ವಿಷಯ ತಿಳಿಸಿದರು. ಈ ಉತ್ಸವವು ಸರ್ಕಾರದ ಸೌಲಭ್ಯಗಳು ಜನಸಾಮಾನ್ಯರಿಗೆ ತಲುಪಿರುವುದರ ಪ್ರತಿಬಿಂಬವಾಗಬೇಕು ಎಂದು…

Read More

ಭಾರತದ ಮಣ್ಣಿನ ಪ್ರತಿ ಕಣದಲ್ಲೂ ಶಂಕರನನ್ನು ಕಂಡ ಶ್ರೇಷ್ಠ ಚೇತನ ಅಟಲ್ ಜಿ: ಎಂಎಲ್‌ಸಿ ಕೆ.ಎಸ್. ನವೀನ್

ಕುಂದಗೋಳ: “ದೇಶದ ಮಣ್ಣಿನ ಪ್ರತಿ ಕಣದಲ್ಲೂ ಶಂಕರನನ್ನು ಕಂಡವರು ಮತ್ತು ಅಧಿಕಾರವಿರಲಿ ಇಲ್ಲದಿರಲಿ ದೇಶ ಸೇವೆಯೇ ಪರಮೋಚ್ಚ ಎಂದು ಬದುಕಿ ತೋರಿಸಿಕೊಟ್ಟವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ” ಎಂದು ಚಿತ್ರದುರ್ಗ ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಹೇಳಿದರು. ಪಟ್ಟಣದ ಬಸವಣ್ಣಜ್ಜನವರ ಕಲ್ಯಾಣ ಪುರ ಮಠದ ಸಭಾಭವನದಲ್ಲಿ ಗುರುಕಾರುಣ್ಯ ಪ್ರತಿಷ್ಠಾನ ಹಾಗೂ ಅಟಲ್ ಸಾಹಿತ್ಯ ವೇದಿಕೆ ವತಿಯಿಂದ ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ 101ನೇ ಜನ್ಮ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ‘ಸದ್ಗಮಯ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು…

Read More

ಸಾಧಕರ ಸನ್ಮಾನ ಸಮಾಜಮುಖಿ ಸೇವೆಗೆ ಮತ್ತಷ್ಟು ಸ್ಫೂರ್ತಿ: ಡಾ. ಎಂ.ಬಿ. ಬಾಗಡಿ

ನವಲಗುಂದ: ಸಾಧಕರಿಗೆ ಸನ್ಮಾನ ಹಾಗೂ ಪುರಸ್ಕಾರ ನೀಡುವುದರಿಂದ ಸಮಾಜಮುಖಿಯಾಗಿ ಇನ್ನಷ್ಟು ಸೇವೆ ಸಲ್ಲಿಸಲು ಪ್ರೇರಣೆ ದೊರೆಯುತ್ತದೆ. ಇಂತಹ ಸನ್ಮಾನಗಳು ಸಾಧಕರ ಸಾಧನೆಯನ್ನು ಇತರರಿಗೆ ಮಾದರಿಯಾಗಿ ರೂಪಿಸಿ, ಯುವಜನರಲ್ಲಿ ಹೊಸ ಉತ್ಸಾಹ ತುಂಬುತ್ತವೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ. ಎಂ.ಬಿ. ಬಾಗಡಿ ಹೇಳಿದರು. ಅವರು ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಪ್ರೊ. ಬಸವರಾಜ ಸೂಡಿ ಅವರನ್ನು ಸನ್ಮಾನಿಸಿ ಮಾತನಾಡಿದರು. ಪ್ರೊ. ಬಸವರಾಜ ಸೂಡಿಯವರು “ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬಳಕೆದಾರರು” ಎಂಬ…

Read More

ಧಾರವಾಡ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬಜೆಟ್‌ನಲ್ಲಿ 3 ಸಾವಿರ ಕೋಟಿ ವಿಶೇಷ ಅನುದಾನಕ್ಕೆ ಜೆಡಿಯು ಆಗ್ರಹ

ಧಾರವಾಡ: ಸಾಂಸ್ಕೃತಿಕ ಹಾಗೂ ವಿದ್ಯಾನಗರಿ ಎಂದೇ ಪ್ರಸಿದ್ಧಿಯಾದ ಧಾರವಾಡ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ 2026–27ರ ರಾಜ್ಯ ಬಜೆಟ್‌ನಲ್ಲಿ 3 ಸಾವಿರ ಕೋಟಿ ರೂಪಾಯಿಗಳ ವಿಶೇಷ ಅನುದಾನವನ್ನು ಕಾಯ್ದಿರಿಸಬೇಕು ಎಂದು ಜನತಾದಳ (ಸಂಯುಕ್ತ) ಧಾರವಾಡ ಜಿಲ್ಲಾ ಘಟಕವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದೆ. ಜಿಲ್ಲಾಧಿಕಾರಿಗಳ ಮುಖಾಂತರ ಈ ಮನವಿ ಸಲ್ಲಿಸಲಾಗಿದ್ದು, ಹಿಂದಿನ ಬಜೆಟ್‌ಗಳಲ್ಲಿ ಧಾರವಾಡ ಜಿಲ್ಲೆಗೆ ಸೂಕ್ತ ಆದ್ಯತೆ ಸಿಗದ ಕಾರಣ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಲಾಗಿದೆ. ಹುಬ್ಬಳ್ಳಿ–ಧಾರವಾಡ ಮಹಾನಗರವು ವೇಗವಾಗಿ ಬೆಳೆಯುತ್ತಿದ್ದರೂ, ಮೂಲಭೂತ ಸೌಕರ್ಯಗಳ…

Read More

ಕುಂದಗೋಳ ತಾ.ಪಂ ನಿರ್ಲಕ್ಷ್ಯಕ್ಕೆ ಅಮಾಯಕ ಜೀವಗಳು ಬಲಿ ಬೇಕೇ?ಚರಂಡಿಗಿಂತ ಕಡೆಯಾದ ಸರ್ಕಾರಿ ಕಚೇರಿಗಳ ಸ್ಥಿತಿ ಕಂಡು ಸಾರ್ವಜನಿಕರ ಆಕ್ರೋಶ!

ಕುಂದಗೋಳ:ತಾಲೂಕಿನ ವಿವಿಧ ಇಲಾಖೆಗಳ ಸರ್ಕಾರಿ ಸಂಕೀರ್ಣ ಕಟ್ಟಡದಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳು ಹಾಗೂ ಅಲ್ಲಿಗೆ ಬರುವ ಸಾರ್ವಜನಿಕರು ಕಲುಷಿತ ನೀರಿನಿಂದ ರೋಗಪೀಡಿತರಾಗುವ ಭೀತಿಯಲ್ಲಿದ್ದಾರೆ. ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಭವ್ಯ ಕಟ್ಟಡವು, ಸಮರ್ಪಕ ನಿರ್ವಹಣೆಯಿಲ್ಲದೆ ಇದೀಗ ರೋಗಗಳ ಕಾರ್ಖಾನೆಯಾಗಿ ಪರಿವರ್ತನೆಯಾಗಿರುವುದು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸಲಾದ ತಾಲೂಕು ಪಂಚಾಯಿತಿ ವ್ಯಾಪ್ತಿಯ ಈ ಸರ್ಕಾರಿ ಸಂಕೀರ್ಣದಲ್ಲಿ ಅರಣ್ಯ ಇಲಾಖೆ, ಶಿಶು ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೇರಿದಂತೆ…

Read More

ನವಲಗುಂದದಲ್ಲಿ ಅಯ್ಯಪ್ಪ ಸ್ವಾಮಿಯ ಮಹಾ ಪೂಜೆ ಹಾಗೂ ಜ್ಯೋತಿ ಮೆರವಣಿಗೆ ವೈಭವ

​ನವಲಗುಂದ: ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಅಯ್ಯಪ್ಪ ಸ್ವಾಮಿಯ ಮಹಾ ಪೂಜೆ ಹಾಗೂ ಭವ್ಯ ಜ್ಯೋತಿ ಮೆರವಣಿಗೆ ಕಾರ್ಯಕ್ರಮವು ಅತ್ಯಂತ ಭಕ್ತಿಭಾವ ಹಾಗೂ ವಿಜೃಂಭಣೆಯಿಂದ ಜರುಗಿತು. ​ದಿನದ ಆರಂಭದಲ್ಲಿ ದೇವಸ್ಥಾನದಲ್ಲಿ ಸ್ವಾಮಿಗೆ ವಿಶೇಷ ಅಭಿಷೇಕ, ನಯನಮನೋಹರ ಅಲಂಕಾರ ಪೂಜೆ ಹಾಗೂ ಮಹಾ ಮಂಗಳಾರತಿ ನೆರವೇರಿಸಲಾಯಿತು. ಮಧ್ಯಾಹ್ನ ಭಕ್ತಾದಿಗಳಿಗಾಗಿ ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ವೇಳೆಗೆ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾದ ಜ್ಯೋತಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮಾಲಾಧಾರಿಗಳು ಜ್ಯೋತಿಯನ್ನು ಹೊತ್ತು ಸಾಗಿದರೆ, ಮಹಿಳೆಯರು ಮಂಗಲ ಆರತಿಗಳನ್ನು…

Read More

ಅಣ್ಣಿಗೇರಿ ದಾಸೋಹ ಮಠದ 62ನೇ ಜಾತ್ರಾ ಮಹೋತ್ಸವ ಸಂಪನ್ನ: ಮಠದ ಜೀರ್ಣೋದ್ಧಾರಕ್ಕೆ ಶಾಸಕ ಎನ್.ಎಚ್. ಕೋನರಡ್ಡಿ ಚಾಲನೆ

ಅಣ್ಣಿಗೇರಿ: ಪಟ್ಟಣದ ಪ್ರಸಿದ್ಧ ದಾಸೋಹ ಮಠದ 62ನೇ ವರ್ಷದ ಜಾತ್ರಾ ಮಹೋತ್ಸವವು ಶನಿವಾರ ಹಾಗೂ ರವಿವಾರ ಅತ್ಯಂತ ವಿಜೃಂಭಣೆಯಿಂದ ಜರುಗಿತು. ಭಕ್ತರ “ಹರಹರ ಮಹಾದೇವ”, “ಶಿವಕುಮಾರ ಮಹಾರಾಜ ಕೀ ಜೈ” ಹಾಗೂ “ಶಂಕರೇಂದ್ರ ಮಹಾರಾಜ ಕೀ ಜೈ” ಎಂಬ ಜೈಘೋಷಗಳ ನಡುವೆ ಶ್ರೀ ಮಠದ ವೈಭವಯುತ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನೆರವೇರಿತು. ಶನಿವಾರ ಮುಂಜಾನೆ ಶ್ರೀ ಮಠದ ಕರ್ತೃ ಗದ್ದಿಗೆಗೆ ವಿಶೇಷ ಅಭಿಷೇಕ ಹಾಗೂ ವಿವಿಧ ಪೂಜಾ ವಿಧಿವಿಧಾನಗಳು ನೆರವೇರಿಸಲಾಯಿತು. ಸಂಜೆ ಮಠದ ಆವರಣದಿಂದ…

Read More