ಅಬಕಾರಿ ಸನ್ನದುಗಳ ಇ-ಹರಾಜು: ಬಿಡ್ಡುದಾರರಿಗೆ ಜನೆವರಿ 5 ರಂದು ತರಬೇತಿ ಕಾರ್ಯಾಗಾರ
ಧಾರವಾಡ: ಅಬಕಾರಿ ಇಲಾಖೆಯಲ್ಲಿ ಸ್ಥಗಿತಗೊಂಡಿರುವ ಹಾಗೂ ಮಂಜೂರಾಗದೇ ಬಾಕಿ ಉಳಿದಿರುವ ಸನ್ನದುಗಳನ್ನು ಇ-ಹರಾಜು ಮಾಡುವ ಪ್ರಕ್ರಿಯೆ ಆರಂಭವಾಗಿದ್ದು, ಈ ಕುರಿತು ಬಿಡ್ಡುದಾರರಿಗೆ ಜನೆವರಿ 5 ರಂದು ವಿಶೇಷ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಭಾರತ ಸರ್ಕಾರದ ಸ್ವಾಮ್ಯದ ಎಮ್‍ಎಸ್‍ಟಿಸಿ ಲಿಮಿಟೆಡ್‍ನ ಇ-ಪೋರ್ಟಲ್ (https://www.mstcecommerce.com) ಮೂಲಕ ಈ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಹರಾಜು ಮತ್ತು ಅಂಗೀಕಾರ ಪತ್ರ (ಎಲ್‌ಓಎ) ನೀಡುವ ವರ್ಷವನ್ನೂ ಒಳಗೊಂಡಂತೆ ಒಟ್ಟು ಐದು ಅಬಕಾರಿ ವರ್ಷಗಳ ಅವಧಿಗೆ ಈ ಸನ್ನದುಗಳು ಅನ್ವಯಿಸಲಿವೆ. ರಾಜ್ಯದಾದ್ಯಂತ ಒಟ್ಟು 569…

