ಜೀವನ ಎಂದರೆ ಡೊನೇಷನ್ ಇಲ್ಲದ ಪಾಠಶಾಲೆ: ಗವಿಸಿದ್ದೇಶ್ವರ ಶ್ರೀ
ಅಣ್ಣಿಗೇರಿ: ಜೀವನದಲ್ಲಿ ಮನುಷ್ಯರನ್ನು ನಂಬಿ ಕೆಟ್ಟವರಿದ್ದಾರೆ, ಆದರೆ ಮಣ್ಣನ್ನು ನಂಬಿ ಕೆಟ್ಟವರಿಲ್ಲ. ಜೀವನ ಎಂದರೆ ಯಾವುದೇ ಡೊನೇಷನ್ ಇಲ್ಲದ ಪಾಠಶಾಲೆ, ಇದು ಸಮಾಜದ ಪ್ರತಿ ಕ್ಷಣಕ್ಕೂ ನಮಗೆ ಪಾಠವನ್ನು ಕಲಿಸುತ್ತದೆ ಎಂದು ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ನುಡಿದರು. ತಾಲೂಕಿನ ಶಲವಡಿ ಗ್ರಾಮದ ಶ್ರೀ ಗುರುಶಾಂತೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ (ಕೆಪಿಎಸ್) ರವಿವಾರ 1995-96ನೇ ಸಾಲಿನ ಹಳೆಯ ವಿದ್ಯಾರ್ಥಿಗಳ ಸಂಘದ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಗುರುವಂದನೆ ಹಾಗೂ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗುವ…

