ಗುಡಗೇರಿಯಲ್ಲಿ ಫೆಬ್ರವರಿ 1 ರಿಂದ 6 ರವರೆಗೆ ಶ್ರೀ ಶಾಂತಿನಾಥ ತೀರ್ಥಂಕರ ಜಿನ ಮಂದಿರದ ಪಂಚಕಲ್ಯಾಣ ಮಹೋತ್ಸವ
ಕುಂದಗೋಳ: ತಾಲೂಕಿನ ಗುಡಗೇರಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ 1008 ಭಗವಾನ್ ಶ್ರೀ ಶಾಂತಿನಾಥ ತೀರ್ಥಂಕರ ಜಿನ ಮಂದಿರದ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ ಹಾಗೂ ವಿಶ್ವಶಾಂತಿ ಮಹಾಯಾಗವು ಫೆಬ್ರವರಿ 1ರಿಂದ 6ರವರೆಗೆ ಅತ್ಯಂತ ವೈಭವದಿಂದ ಜರುಗಲಿದೆ. ಈ ಪವಿತ್ರ ಮಹೋತ್ಸವದ ಪಾವನ ಸಾನ್ನಿಧ್ಯವನ್ನು ಪರಮ ಪೂಜ್ಯ ಅಭಿಲಕ್ಷ ಜ್ಞಾನಭಾಸ್ಕರ ಆಚಾರ್ಯ ಶ್ರೀ 108 ಪುಣ್ಯಸಾಗರ ಮುನಿಮಹಾರಾಜರು ವಹಿಸಲಿದ್ದಾರೆ ಎಂದು ಶ್ರೀ 1008 ಭಗವಾನ್ ಶಾಂತಿನಾಥ ತೀರ್ಥಂಕರ ದಿಗಂಬರ ಜೈನ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ. ಆರು ದಿನಗಳ ಕಾಲ ನಡೆಯಲಿರುವ…

