ಸೌಲತ್ತುಗಳಿದ್ದೂ ಓದದ ವಿದ್ಯಾರ್ಥಿಗಳಿಗೆ ಮಾದರಿ: ಜೈಲಿನ ನಾಲ್ಕು ಗೋಡೆಗಳ ನಡುವೆ ಕೈದಿಯ ‘ಜ್ಞಾನದೀಪ’, ಪಿಯುಸಿಯಲ್ಲಿ ಶೇ.80 ಅಂಕ!
ಬಳ್ಳಾರಿ: ಸಾಮಾನ್ಯವಾಗಿ ಜೈಲು ಎಂದರೆ ಅದು ಕತ್ತಲೆ ಕೋಣೆ, ಅಲ್ಲಿ ಪಶ್ಚಾತಾಪದ ಕಣ್ಣೀರು ಮಾತ್ರ ಹರಿಯುತ್ತದೆ ಎಂಬ ಭಾವನೆ ಎಲ್ಲರಲ್ಲಿದೆ. ಆದರೆ, ಬಳ್ಳಾರಿ ಕೇಂದ್ರ ಕಾರಾಗೃಹದ ಗೋಡೆಗಳು ಈ ಬಾರಿ ಕೇವಲ ಶಿಕ್ಷೆಗೆ ಮಾತ್ರವಲ್ಲ, ಜ್ಞಾನದ ಹಸಿವಿಗೂ ಸಾಕ್ಷಿಯಾಗಿವೆ. ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಶೋಕ್ ಎಂಬ ಕೈದಿ ಇತ್ತೀಚಿನ ಪಿಯುಸಿ ಪರೀಕ್ಷೆಯಲ್ಲಿ ಶೇ.80ರಷ್ಟು ಅಂಕಗಳನ್ನು ಗಳಿಸುವ ಮೂಲಕ ಇಂದಿನ ವಿದ್ಯಾರ್ಥಿ ಲೋಕಕ್ಕೆ ದೊಡ್ಡ ಸಂದೇಶವೊಂದನ್ನು ನೀಡಿದ್ದಾರೆ. ಇಂದಿನ ಕಾಲದಲ್ಲಿ ಪೋಷಕರು ಕೇಳಿದ್ದನ್ನೆಲ್ಲ ಕೊಡಿಸಿ, ಸಕಲ…

