ಬಸಪ್ಪನದೊಡ್ಡಿಯಲ್ಲಿ ರೈತನ ಮೇಲೆ ಬರಸಿಡಿಲು: ಚಿರತೆ ದಾಳಿಗೆ 4 ಮೇಕೆ ಬಲಿ
Recent Views 35 ವರದಿ: ಕಾರ್ತಿಕ್ ಗೌಡ ಗೌಡ ಹನೂರು. ಹನೂರು, ಸೆ.23: ತಾಲೂಕಿನ ಬಸಪ್ಪನದೊಡ್ಡಿ ಗ್ರಾಮದಲ್ಲಿ ಮಂಗಳವಾರ ಬೆಳಗಿನ ಜಾವ ಚಿರತೆಯೊಂದು ದಾಳಿ ನಡೆಸಿ ಬಡ ರೈತ ಕುಟುಂಬಕ್ಕೆ ಭಾರಿ ನಷ್ಟ ಉಂಟುಮಾಡಿದೆ. ಗ್ರಾಮದ ಶಿವಮ್ಮ ಕೋಂ. ಚೆನ್ನೇಗೌಡ ಅವರು ಸಾಕಿದ್ದ ನಾಲ್ಕು ಮೇಕೆಗಳನ್ನು ಚಿರತೆ ದಾಳಿ ನಡೆಸಿ ಕೊಂದು ಹಾಕಿದೆ. ದಿನಗೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಶಿವಮ್ಮ ಅವರಿಗೆ ಮೇಕೆಗಳೇ ಕುಟುಂಬದ ಆದಾಯಕ್ಕೆ ಆಸರೆಯಾಗಿದ್ದವು. ಕೂಲಿ ಮಾಡಿ, ಸಾಲ ಮಾಡಿ ಸಾಕಿದ್ದ…
