ಅಣ್ಣಿಗೇರಿ ಪುರಸಭೆ ಸಭೆಯಲ್ಲಿ ಗದ್ದಲ, ಕಿತ್ತಾಟ: ಶಾಸಕರ ಸಮ್ಮುಖದಲ್ಲೇ ಭಿನ್ನಮತ ಸ್ಫೋಟ
Recent Views 10 ಅಣ್ಣಿಗೇರಿ: (ಧಾರವಾಡ) ಸ್ಥಳೀಯ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದ್ದ ಅಣ್ಣಿಗೇರಿ ಪುರಸಭೆಯ ವಿಶೇಷ ಸಾಮಾನ್ಯ ಸಭೆ, ಸೋಮವಾರ ಜನಪ್ರತಿನಿಧಿಗಳ ನಡುವಿನ ಭಿನ್ನಮತ ಮತ್ತು ಅಧಿಕಾರ ಹಂಚಿಕೆಯ ಕಿತ್ತಾಟದೊಂದಿಗೆ ಭಾರಿ ಗದ್ದಲಕ್ಕೆ ಕಾರಣವಾಯಿತು. ಶಾಸಕ ಎನ್.ಹೆಚ್.ಕೋನರಡ್ಡಿ ಅವರ ಸಮ್ಮುಖದಲ್ಲೇ ಕೆಲವು ಸದಸ್ಯರು ವಾಕ್ಸಮರ ನಡೆಸಿ ಸಭೆಯಿಂದ ಹೊರ ನಡೆದ ಪ್ರಸಂಗಗಳು ಜರುಗಿದವು. ಪುರಸಭೆ ಅಧ್ಯಕ್ಷ ಶಿವಾನಂದ ಬೆಳಹಾರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 12ಕ್ಕೂ ಹೆಚ್ಚು ವಿಷಯಗಳ ಬಗ್ಗೆ ಚರ್ಚೆ ನಡೆಸಿ ಅನುಮೋದನೆ ನೀಡಲಾಯಿತು….

