ಶವವಿಟ್ಟು ಪ್ರತಿಭಟನೆಗೆ ಎಚ್ಚರಿಕೆ: ಸ್ಮಶಾನಕ್ಕೆ ರಸ್ತೆ ಇಲ್ಲ; ಗ್ರಾಮಸ್ಥರಿಗೆ ‘ದೇವರು ವರ ಕೊಟ್ಟರೂ, ಪೂಜಾರಿ ವರ ಕೊಡಲಿಲ್ಲ’ ಎಂಬಂತಾಗಿದೆ! ಸೋಟಕನಾಳ ಗ್ರಾಮಸ್ಥರ ಗೋಳು
Recent Views 5 ನವಲಗುಂದ :ತಾಲೂಕಿನ ಸೊಟಕನಾಳ ಗ್ರಾಮಸ್ಥರ ಗೋಳು. ಸರ್ಕಾರ ಸ್ಮಶಾನಕ್ಕೆ ಜಾಗ ನೀಡಿದರೂ, ಅಲ್ಲಿಗೆ ಹೋಗಲು ರಸ್ತೆ ಇಲ್ಲ. ಈ ವಿಷಯದ ಬಗ್ಗೆ ತಾಲ್ಲೂಕು ಆಡಳಿತ ನಿರ್ಲಕ್ಷ್ಯ ವಹಿಸಿದರೆ, ಮುಂದಿನ ಬಾರಿ ಮೃತ ದೇಹವನ್ನು ಜಿಲ್ಲಾಧಿಕಾರಿ ಕಚೇರಿ ಮುಂದೆ ಇಟ್ಟು ಪ್ರತಿಭಟಿಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಶನಿವಾರ “ಪಬ್ಲಿಕ್ ಸಮಾಚಾರ” ವೆಬ್ ನ್ಯೂಸ್‌ನಲ್ಲಿ ಪ್ರಕಟವಾದ ವರದಿಯ ಮುಂದುವರೆದ ಭಾಗವಾಗಿ, ಗ್ರಾಮಸ್ಥರು ಸೋಮವಾರ ಸಭೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳೀಯ ಶಾಸಕರ ವಿರುದ್ಧ…

