ಯರಗುಪ್ಪಿ ಗ್ರಾಮದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ; ಹಾನಿಗೊಳಗಾದ ಹೋಟೆಲ್‌ಗೆ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಷಣ್ಮುಖ ಶಿವಳ್ಳಿ ಭೇಟಿ, ಪರಿಹಾರಕ್ಕೆ ಸೂಚನೆ

Spread the love

ಕುಂದಗೋಳ: ತಾಲ್ಲೂಕಿನ ಯರಗುಪ್ಪಿ ಗ್ರಾಮದಲ್ಲಿ ರವಿವಾರದಂದು ಸಂಭವಿಸಿದ ಘಟನೆಯಲ್ಲಿ, ಗ್ರಾಮದ ಸಂಜೀವರೆಡ್ಡಿ ತಹಶೀಲ್ದಾರ್ ಅವರಿಗೆ ಸೇರಿದ ಹೋಟೆಲ್‌ನಲ್ಲಿ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದು, ಅಪಾರ ಹಾನಿ ಸಂಭವಿಸಿದೆ.

ಸ್ಫೋಟದ ತೀವ್ರತೆಗೆ ಹೋಟೆಲ್‌ನ ಶಟರ್ ಸಂಪೂರ್ಣ ಮುರಿದು ಹೋಗಿದ್ದು, ಒಳಭಾಗದಲ್ಲಿದ್ದ ಎಲ್ಲ ಸಾಮಗ್ರಿಗಳು ಸುಟ್ಟು ಕರಕಲಾಗಿವೆ.
ಸೋಮವಾರದಂದು ಘಟನೆ ನಡೆದ ಸ್ಥಳಕ್ಕೆ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಷಣ್ಮುಖ ಶಿವಳ್ಳಿ ಹಾಗೂ ತಹಶೀಲ್ದಾರ್ ರಾಜು ಮಾವಕರ ಹಾಗೂ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮೀತಿ ಯೋಜನಾ ಅಧ್ಯಕ್ಷರಾದ ಸತೀಶ ಕೊಬ್ಬಯ್ಯನವರ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಆರ್ಥಿಕ ನೆರವು, ಸರ್ಕಾರದಿಂದ ಪರಿಹಾರಕ್ಕೆ ಸೂಚನೆ
ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಸಿಲಿಂಡರ್ ಸ್ಫೋಟದಿಂದಾಗಿ ತೀವ್ರ ಹಾನಿಗೊಳಗಾದ ಹೋಟೆಲ್ ಮಾಲಿಕ ಸಂಜೀವರೆಡ್ಡಿ ತಹಶೀಲ್ದಾರ್ ಅವರಿಗೆ ಧೈರ್ಯ ತುಂಬಿದರು. ಅಲ್ಲದೆ, ತಕ್ಷಣಕ್ಕೆ ವೈಯಕ್ತಿಕವಾಗಿ ರೂ. 10 ಸಾವಿರ ಆರ್ಥಿಕ ಧನ ಸಹಾಯ ನೀಡಿ, ಸರ್ಕಾರದ ಮಟ್ಟದಿಂದ ಬರಬೇಕಾದ ಪರಿಹಾರವನ್ನು ಶೀಘ್ರವಾಗಿ ಒದಗಿಸಬೇಕೆಂದು ಸ್ಥಳದಲ್ಲಿದ್ದ ತಹಶೀಲ್ದಾರ್ ರಾಜು ಮಾವಕರ ಅವರಿಗೆ ಸೂಚಿಸಿದರು.

ಅವರ ಸೂಚನೆಯ ನಂತರ ಮಾತನಾಡಿದ ತಹಶೀಲ್ದಾರ್ ರಾಜು ಮಾವಕರ, ಈ ಘಟನೆಯ ಬಗ್ಗೆ ಸಂಪೂರ್ಣ ವರದಿಯನ್ನು ಸರ್ಕಾರದ ಮಟ್ಟಕ್ಕೆ ಸಲ್ಲಿಸಿ, ಅದರಿಂದ ಬರುವ ಪರಿಹಾರವನ್ನು ಹೋಟೆಲ್ ಮಾಲಕರಿಗೆ ನೀಡುವ ಬಗ್ಗೆ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಗ್ಯಾರಂಟಿ ಸಮೀತಿ ಯೋಜನಾ ಅಧ್ಯಕ್ಷರಾದ ಸತೀಶ ಕೊಬ್ಬಯ್ಯನವರ, ಸಂಜೀವರಡ್ಡಿ ತಹಶೀಲ್ದಾರ್, ನಿಂಗರಡ್ಡಿ ರಡ್ಡೇರ, ಫಕ್ಕಿರೇಶ ನಾಯ್ಕರ, ಬಸವರಾಜ ಸತ್ಯನಾಯ್ಕರ, ಬಸವರಾಜ ಗೊಲ್ಲನವರ, ಶಿವಾನಂದ ಬಾರಕೇರ, ಹೈದರಸಾಬ ಸೊರಟೂರ, ಬಸವರಾಜ ಮಾದರ, ಸಲೀಂ ಕಡ್ಲಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *