ವರದಕ್ಷಿಣೆಗಾಗಿ ಮಹಿಳೆಯ ಭೀಕರ ಕೊಲೆ: ತೆಲಂಗಾಣದಲ್ಲಿ ಘೋರ ದುರಂತ
ತೆಲಂಗಾಣ: ವರದಕ್ಷಿಣೆಗಾಗಿ ಪತ್ನಿಯೊಬ್ಬಳನ್ನು ಬರ್ಬರವಾಗಿ ಕೊಲೆ ಮಾಡಿದ ನೋಯ್ಡಾ ಘಟನೆಯ ದುಃಖ ಇನ್ನೂ ಮಾಸುವ ಮುನ್ನವೇ, ಅದೇ ರೀತಿಯ ಮತ್ತೊಂದು ಕ್ರೂರ ಘಟನೆ ತೆಲಂಗಾಣದಲ್ಲಿ ವರದಿಯಾಗಿದೆ. ಕೊಥಗುಡೆಮ್ ಜಿಲ್ಲೆಯಲ್ಲಿ 33 ವರ್ಷದ ಮಹಿಳೆಯೊಬ್ಬಳು ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ವರದಕ್ಷಿಣೆಗಾಗಿ ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಖಮ್ಮಂ ಜಿಲ್ಲೆಯ ವಿಶ್ವನಾಥಪುರದವರಾದ ಲಕ್ಷ್ಮಿ ಪ್ರಸನ್ನ ಅವರ ವಿವಾಹ 2015ರಲ್ಲಿ ಖಾನಖಾನಪೇಟೆಯ ಪೂಲ ನರೇಶ್ ಬಾಬು ಅವರೊಂದಿಗೆ ನಡೆದಿತ್ತು. ಮದುವೆಯ ಸಮಯದಲ್ಲಿ ಲಕ್ಷ್ಮಿ ಅವರ ಕುಟುಂಬ ವರದಕ್ಷಿಣೆಯಾಗಿ ಎರಡು…

