ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿ ಶೌಚಾಲಯದಲ್ಲೇ ಹೆರಿಗೆ: ಯಾದಗಿರಿಯ ಘಟನೆ, ಶಿಕ್ಷಕರು-ಪಾಲಕರು ಗಮನಿಸಬೇಕಾದ ಸಂಗತಿ!
ಯಾದಗಿರಿ: ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ, ಸುರಕ್ಷತೆ ಮತ್ತು ನೈತಿಕ ವಾತಾವರಣ ನೀಡಬೇಕಾದ ವಸತಿ ಶಾಲೆಗಳು ಇಂದು ಎಂತಹ ದುರವಸ್ಥೆಗೆ ತಲುಪಿವೆ ಎಂಬುದಕ್ಕೆ ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ನಡೆದ ಘಟನೆಯೇ ಸಾಕ್ಷಿ. ಶಹಾಪುರ ನಗರದ ವಸತಿ ಶಾಲೆಯೊಂದರಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಗೆ ಶೌಚಾಲಯದಲ್ಲೇ ಹೆರಿಗೆಯಾದ ಘಟನೆ ಇಡೀ ಸಮಾಜದ ತಲೆ ತಗ್ಗಿಸುವಂತಿದೆ. ಈ ಘಟನೆ ರಾಜ್ಯದ ಎಲ್ಲ ಶಾಲಾ ಶಿಕ್ಷಕರು, ಆಡಳಿತ ಮಂಡಳಿಗಳು ಮತ್ತು ಪೋಷಕರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಗಂಭೀರ ವಿಷಯವಾಗಿದೆ. ಈ ಘಟನೆ ಕುರಿತು ರಾಜ್ಯ ಮಕ್ಕಳ ಹಕ್ಕುಗಳ…

