11 ವರ್ಷಗಳ ನಂತರ ಕುಂದಗೋಳದಲ್ಲಿ ಎಬಿವಿಪಿ ಸಮ್ಮೇಳನ; ವಿದ್ಯಾರ್ಥಿ ಪರಿಷತ್ ಮರು ಅಸ್ತಿತ್ವ
ಕುಂದಗೋಳ: ಕಳೆದ ಒಂದುವರೆ ತಿಂಗಳಿಂದ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ), 11 ವರ್ಷಗಳ ನಂತರ ಕುಂದಗೋಳದಲ್ಲಿ ಮತ್ತೆ ತನ್ನ ಅಸ್ತಿತ್ವವನ್ನು ಕಂಡುಕೊಂಡಿದೆ. ನಗರ ಸಮ್ಮೇಳನ ನಡೆಸುವ ಮೂಲಕ ವಿದ್ಯಾರ್ಥಿ ಪರಿಷತ್ ಪಟ್ಟಣದಲ್ಲಿ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ತನ್ನ ಕಾರ್ಯಚಟುವಟಿಕೆಗಳನ್ನು ಪುನರಾರಂಭಿಸಿದೆ. 2014ರಿಂದ ತೆರೆಮರೆಗೆ ಸರಿದಿದ್ದ ಎಬಿವಿಪಿ, ನಗರ ಸಮ್ಮೇಳನ ಆಯೋಜಿಸುವ ಮೂಲಕ ಯುವ ಸಮುದಾಯಕ್ಕೆ ಹೊಸ ಚೈತನ್ಯ ತುಂಬುವ ಪ್ರಯತ್ನ ಮಾಡಿದೆ. ಸಮ್ಮೇಳನದ ವಿವರನಗರ ಸಮ್ಮೇಳನದಲ್ಲಿ ಪ್ರಾಂತ ಸಂಘಟನಾ ಕಾರ್ಯದರ್ಶಿ ವೆಂಕಟೇಶ್ ಡಾಂಗೆ,…

