ಈದ್ ಮಿಲಾದ್‌ನಲ್ಲಿ ಧಾರ್ಮಿಕ ಸೌಹಾರ್ದತೆ: ಒಗ್ಗಟ್ಟಿನಿಂದ ಬಾಳೋಣ ಎಂದು ಶ್ರೀಗಳಿಂದ ಕರೆ

ಕುಂದಗೋಳ: ಪ್ರತಿ ವರ್ಷದಂತೆ ಈ ವರ್ಷವೂ ಕುಂದಗೋಳದಲ್ಲಿ ಈದ್ ಮಿಲಾದ್ ಹಬ್ಬವನ್ನು ಹಿಂದೂ-ಮುಸ್ಲಿಂ ಬಾಂಧವರು ಒಗ್ಗಟ್ಟಾಗಿ, ಜಾತಿಭೇದ ಮರೆತು ಆಚರಿಸಿ, ‘ನಾವೆಲ್ಲರೂ ಒಂದು’ ಎಂಬ ಸಂದೇಶ ಸಾರುವದು ವಿಷೇಶವಾಗಿರುತ್ತದೆ. ಪಂಚಗೃಹ ಹಿರೇಮಠದ ಶ್ರೀ ಶಿಥಿಕಂಠೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಮುಸ್ಲಿಂ ಬಾಂಧವರನ್ನು ಶ್ಲಾಘಿಸಿದರು. ಮುಸ್ಲಿಂ ಬಾಂಧವರು ನೀಡಿದ ಸೌಹಾರ್ದತೆಯ ಸಂದೇಶ ಪ್ರಶಂಸನೀಯ. ನಾವೆಲ್ಲರೂ ಒಟ್ಟಾಗಿ ಬದುಕುವ ಮೂಲಕ ಸೌಹಾರ್ದತೆಯನ್ನು ಹೆಚ್ಚಿಸಿ. ಭವಿಷ್ಯದಲ್ಲಿಯೂ ಎಲ್ಲರೂ ಹೀಗೆ ಒಗ್ಗಟ್ಟಿನಿಂದ ಬಾಳೋಣ” ಎಂದು ಶ್ರೀಗಳು ಕರೆ ನೀಡಿದರು. ಅವರ ಈ ಮಾತುಗಳು ಕಾರ್ಯಕ್ರಮದ…

Read More

*ಗುರುವಿನ ಗೌರವ: ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ*

ಧಾರವಾಡ : ಸೆಪ್ಟೆಂಬರ್ 5 – ಶಿಕ್ಷಕರ ದಿನಾಚರಣೆ ವಿಶೇಷ ವರದಿಭಾರತದ ಮಹಾನ್ ತತ್ವಜ್ಞಾನಿ ಮತ್ತು ಮಾಜಿ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಸ್ಮರಿಸುವ ಈ ಪವಿತ್ರ ದಿನ, ಶಿಕ್ಷಣ ಕ್ಷೇತ್ರದಲ್ಲಿ ಆಗಿರುವ ಮಹತ್ತರ ಬದಲಾವಣೆಗಳು ಮತ್ತು ಅದರಿಂದ ಶಿಕ್ಷಕ ಸಮುದಾಯದ ಮೇಲಾದ ಪರಿಣಾಮಗಳನ್ನು ಅವಲೋಕಿಸಲು ಒಂದು ಸುಸಂದರ್ಭ. ಹಿಂದಿನ ಪದ್ಧತಿಗಳಲ್ಲಿ ಗುರುವಿನ ಸ್ಥಾನ ಹಿಂದಿನ ಕಾಲದ ಶಿಕ್ಷಣ ಪದ್ಧತಿ ಮತ್ತು ಸಾಮಾಜಿಕ ರಚನೆಯಲ್ಲಿ ಶಿಕ್ಷಕರು ಒಂದು ಪವಿತ್ರ ಸ್ಥಾನವನ್ನು ಹೊಂದಿದ್ದರು. ‘ಗುರುಕುಲ’ ಪದ್ಧತಿಯಲ್ಲಿ…

Read More

ಪಠ್ಯದ ಜೊತೆಗೆ ಕ್ರೀಡೆಯೂ ಮುಖ್ಯ: ಮಾಜಿ ಶಾಸಕ ಎಂ.ಎಸ್. ಅಕ್ಕಿ

ಕುಂದಗೋಳ: ಕೇವಲ ಪಠ್ಯ ಪುಸ್ತಕಗಳ ಅಧ್ಯಯನಕ್ಕೆ ಸೀಮಿತವಾಗದೆ, ವಿದ್ಯಾರ್ಥಿಗಳು ಕ್ರೀಡೆಯಂತಹ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಇದು ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುವುದರ ಜೊತೆಗೆ ವ್ಯಕ್ತಿತ್ವ ವಿಕಸನಕ್ಕೂ ಸಹಕಾರಿಯಾಗುತ್ತದೆ ಎಂದು ಮಾಜಿ ಶಾಸಕ ಎಂ.ಎಸ್. ಅಕ್ಕಿ ಹೇಳಿದರು. ತಾಲ್ಲೂಕಿನ ಗುರುವಿನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದ ಸಂದರ್ಭದಲ್ಲಿ ಅವರನ್ನು ಅಭಿನಂದಿಸಿ ಅವರು ಮಾತನಾಡಿದರು. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಶಿಕ್ಷಕರ ಜೊತೆಗೆ ಪೋಷಕರು ಮತ್ತು ಇಡೀ ಸಮಾಜದ ಪಾತ್ರ…

Read More

ಲಂಚ ಪ್ರಕರಣ: ಲೋಕಾಯುಕ್ತ ಬಲೆಗೆ: ಇಬ್ಬರು ಅಧಿಕಾರಿಗಳಿಗೆ ಜೈಲು ಶಿಕ್ಷೆ

ಧಾರವಾಡ: ನ್ಯಾಯಯುತವಾಗಿ ಮಾಡಬೇಕಾಗಿದ್ದ ಕೆಲಸಕ್ಕೆ ₹10,000 ಲಂಚ ಸ್ವೀಕರಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರು ಸರ್ಕಾರಿ ಅಧಿಕಾರಿಗಳಿಗೆ ಧಾರವಾಡದ ವಿಶೇಷ ನ್ಯಾಯಾಲಯವು ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಈ ಕುರಿತು ಧಾರವಾಡ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಸ್.ಟಿ. ಸಿದ್ದಲಿಂಗಪ್ಪ ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ. ಕಾನೂನು ಮಾಪನಶಾಸ್ತ್ರ ಇಲಾಖೆ, ಎಪಿಎಂಸಿ, ಹುಬ್ಬಳ್ಳಿಯ ಸಹಾಯಕ ನಿಯಂತ್ರಕರಾಗಿದ್ದ ಮಧುಕರ ರಾಜಾರಾಮ ಘೋಡಕೆ ಮತ್ತು ಅದೇ ಕಚೇರಿಯ ಎಸ್.ಡಿ.ಎ. ಎಸ್.ಎನ್. ಲೀಲಾವತಿ ಅವರು ಲಂಚ ಪ್ರಕರಣದಲ್ಲಿ ದೋಷಿಗಳೆಂದು ಸಾಬೀತಾಗಿದ್ದಾರೆ….

Read More

ಪತ್ರಿಕಾ ವಿತರಕರ ಸಮಸ್ಯೆಗಳ ಬಗ್ಗೆ ಗಮನಹರಿಸಿ: ಮಹಾನಗರ ಪಾಲಿಕೆ ಹಾಗೂ ಸರ್ಕಾರಕ್ಕೆ ಪತ್ರಿಕಾ ವಿತರಕರ ಮನವಿ

ಧಾರವಾಡ : ನಗರದ ಜುಬಲಿ ಸರ್ಕಲ್‌ನಲ್ಲಿ ಗುರುವಾರದಂದು ಪತ್ರಿಕಾ ವಿತರಕರು ಕೇಕ್ ಕತ್ತರಿಸುವ ಮೂಲಕ ಪತ್ರಿಕಾ ದಿನವನ್ನು ಸಂಭ್ರಮದಿಂದ ಆಚರಿಸಿದರು. ತಮ್ಮ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟರು. ಈ ಸಮಯದಲ್ಲಿ ಪತ್ರಿಕಾ ವಿತರಕರ ಒಕ್ಕೂಟದ ಹಿರಿಯ ವಿತರಕರಾದ ನಾಗರಾಜ ಕುಲಕರ್ಣಿ ಹಾಗೂ ಸುರೇಶ ಸುಣಗಾರ ಅವರು ಪತ್ರಿಕೆಗಳ ಮಾಲೀಕರು, ಸಿಬ್ಬಂದಿ ಮತ್ತು ಸರ್ಕಾರಕ್ಕೆ ತಮ್ಮ ಅಹವಾಲುಗಳನ್ನು ಸಲ್ಲಿಸಿದರು. ವಿತರಕರನ್ನು ಕಡೆಗಣಿಸಬೇಡಿ: ನಾಗರಾಜ ಕುಲಕರ್ಣಿಕನ್ನಡ ಪತ್ರಿಕೋದ್ಯಮಕ್ಕೆ 200 ವರ್ಷಗಳ ಸುದೀರ್ಘ ಇತಿಹಾಸವಿದೆ ಎಂದು ಸ್ಮರಿಸಿದ ನಾಗರಾಜ ಕುಲಕರ್ಣಿ…

Read More

ಗಳಗಿಹುಲಕೊಪ್ಪ ಗ್ರಾ ಪಂ ಪಿಡಿಓ ಎ.ಹೆಚ್. ಮನಿಯಾರ್ ಅಮಾನತು: ಸರ್ಕಾರದ ಹಣ ಅಕ್ರಮ ವರ್ಗಾವಣೆ ಹಿನ್ನಲೆ ಕ್ರಮ:

ಕಲಘಟಗಿ: ತಾಲ್ಲೂಕಿನ ಗಳಗಿಹುಲಕೊಪ್ಪ ಗ್ರಾಮ ಪಂಚಾಯಿತಿಯ ಪಿಡಿಓ ಅಬ್ದುಲ್ ರಜಾಕ್ ಹೆಚ್ ಮನಿಯಾರ್, ಸರ್ಕಾರದ ಹಣವನ್ನು ಖಾಸಗಿ ವ್ಯಕ್ತಿಗಳ ಖಾತೆಗೆ ಅಕ್ರಮವಾಗಿ ವರ್ಗಾವಣೆ ಮಾಡಿದ ಆರೋಪದ ಮೇಲೆ ಅಮಾನತುಗೊಂಡಿದ್ದಾರೆ. ಭ್ರಷ್ಟಾಚಾರದಲ್ಲಿ ತೊಡಗಿದ್ದ ಈ ಅಧಿಕಾರಿಯನ್ನು ಜಿಲ್ಲಾಡಳಿತ ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಆಗಸ್ಟ್ 31ರಂದು ಗಳಗಿಹುಲಕೊಪ್ಪ ಗ್ರಾಮದಲ್ಲಿನ ವಿದ್ಯುತ್ ಬಿಲ್ ಪಾವತಿಯಲ್ಲಿ ಹಗರಣ ನಡೆದಿರುವುದು ಬೆಳಕಿಗೆ ಬಂದಿತ್ತು. ಸರ್ಕಾರದಿಂದ ಬಂದ ಹಣವನ್ನು ದುರುಪಯೋಗಪಡಿಸಿಕೊಂಡು, ಅದನ್ನು ಖಾಸಗಿ ಖಾತೆಗಳಿಗೆ ವರ್ಗಾವಣೆ ಮಾಡಿರುವ ಕುರಿತು ದಾಖಲೆಗಳು ಲಭ್ಯವಾಗಿವೆ. ಈ ವಿಷಯ ಗಮನಕ್ಕೆ…

Read More

ರೈತರ ಅಹೋರಾತ್ರಿ ಧರಣಿ ಅಂತ್ಯ; ಜಿಲ್ಲಾಡಳಿತಕ್ಕೆ ಮನವಿ

ಧಾರವಾಡ: ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿರುವ ರೈತರಿಗೆ ಪ್ರತಿ ಹೆಕ್ಟೇರ್‌ಗೆ 50,000 ರೂಪಾಯಿ ಪರಿಹಾರ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ಪಕ್ಷದ ಧಾರವಾಡ ಗ್ರಾಮೀಣ ಘಟಕದಿಂದ ಡಿಸಿ ಕಚೇರಿ ಎದುರು ಹಮ್ಮಿಕೊಳ್ಳಲಾಗಿದ್ದ ಅಹೋರಾತ್ರಿ ಧರಣಿಯನ್ನು ಬುಧವಾರ ಅಂತ್ಯಗೊಳಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಧರಣಿಯ ಸಮಯದಲ್ಲಿ ಮಾತನಾಡಿದ ಹು-ಧಾ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಹಾಗೂ ಸಭಾನಾಯಕ ಈರೇಶ ಅಂಚಟಗೇರಿ, ಜಿಲ್ಲೆಯಲ್ಲಿ ರೈತರಿಗೆ ಆಗಿರುವ ಅನ್ಯಾಯದ ಬಗ್ಗೆ ಮಾತನಾಡಲು ಯಾರೂ ಇಲ್ಲ….

Read More

ನಿಧನ ವಾರ್ತೆ

ನಿಧನ ವಾರ್ತೆ:ಧಾರವಾಡ: ಅಣ್ಣಿಗೇರಿ ತಾಲ್ಲೂಕಿನ ಸಾಸ್ವಿಹಳ್ಳಿ ಗ್ರಾಮದ ವಿಠ್ಠಲ. ವಿ.ಸೂರ್ಯವಂಶಿ (56) ಬುಧುವಾರದು ನಿಧನರಾದರು. ಮೃತರಿಗೆ ಪತ್ನಿ ಹಾಗೂ ಇಬ್ಬರೂ ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.

Read More

ನವಲಗುಂದ: ಹೆಸರು ಕಾಳು ಖರೀದಿ ಕೇಂದ್ರ ಆರಂಭಕ್ಕೆ ರೈತ ಮುಖಂಡರ ಆಗ್ರಹ

ನವಲಗುಂದ: ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಹೆಸರು ಬೆಳೆ ಬೆಳೆದಿದ್ದ ರೈತರು, ಅತಿಯಾದ ಮಳೆಯಿಂದಾಗಿ ಬೆಳೆ ಹಾನಿಗೊಳಗಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಉಳಿದಿರುವ ಬೆಳೆಯನ್ನೂ ಕಟಾವು ಮಾಡಿದ ರೈತರ ಹೆಸರನ್ನು ಖರೀದಿಸಲು ಸರ್ಕಾರ ಕೂಡಲೇ ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ರೈತ ಮುಖಂಡ ಮಾಬುಸಾಬ್ ಯರಗುಪ್ಪಿ ಆಗ್ರಹಿಸಿದರು. ಈ ಕುರಿತು ತಹಶೀಲ್ದಾರ್ ಸುಧೀರ್ ಸಾಹುಕಾರ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, “ಪ್ರಸ್ತುತ ಮಾರುಕಟ್ಟೆಯಲ್ಲಿ ಹೆಸರು ಕಾಳು ಪ್ರತಿ ಕ್ವಿಂಟಾಲ್‌ಗೆ ಕೇವಲ 3 ರಿಂದ 5…

Read More

ಹರಲಾಪೂರ: ಯೋಗಾಸನದಲ್ಲಿ ಕಂಚು, ಅನನ್ಯಗೆ ರಾಜ್ಯ ಸರ್ಕಾರದ ಗೌರವ

ಕುಂದಗೋಳ: ತಾಲ್ಲೂಕಿನ ಹರಲಾಪುರ ಗ್ರಾಮದ ಅನನ್ಯ ಸಾಂಬಯ್ಯ ಹಿರೇಮಠ ಅವರು ಉತ್ತರಾಖಂಡದಲ್ಲಿ ನಡೆದ 38ನೇ ರಾಷ್ಟ್ರಮಟ್ಟದ ಒಲಿಂಪಿಕ್ ಯೋಗಾಸನ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಕರ್ನಾಟಕಕ್ಕೆ ಕೀರ್ತಿ ತಂದಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ಕರ್ನಾಟಕ ಸರ್ಕಾರವು ಕ್ರೀಡಾ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಯುವನಿಕಾದಲ್ಲಿ ಸ್ಥಳದಲ್ಲಿ ಗೌರವಿಸಿದೆ. ಮುಖ್ಯಮಂತ್ರಿಗಳ ಅಭಿನಂದನಾ ಪತ್ರದೊಂದಿಗೆ ಎರಡು ಲಕ್ಷ ರೂಪಾಯಿ ನಗದನ್ನು ಅನನ್ಯ ಅವರಿಗೆ ನೀಡಿ ಸನ್ಮಾನಿಸಲಾಯಿತು.ಈ ಗೌರವವು ಅನನ್ಯ ಅವರ ಶ್ರಮಕ್ಕೆ ಸಿಕ್ಕ…

Read More