ಬೆಳೆ ಹಾನಿ ವೀಕ್ಷಣೆಗೆ ಸಚಿವ ಸಂತೋಷ ಲಾಡ್; “ಸಿಎಂ ಕಾಲಿಗೆ ಬಿದ್ದಾದರೂ ಪರಿಹಾರ ತರುತ್ತೇನೆ” – ರೈತರಿಗೆ ಭರವಸೆ

ಧಾರವಾಡ: ಇತ್ತೀಚೆಗೆ ಮುಕ್ತಾಯಗೊಂಡ ಮಳೆಗಾಲದ ಅಧಿವೇಶನದ ನಂತರ, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಜಿಲ್ಲೆಯಾದ್ಯಂತ ಸುರಿದ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರೈತರ ಬೆಳೆ ಹಾನಿಯನ್ನು ವೀಕ್ಷಿಸಿ ಅವರ ಸಂಕಷ್ಟಕ್ಕೆ ಸ್ಪಂದಿಸಿದ ಸಚಿವರು, ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದರು. ಬೆಳೆಹಾನಿ ಪರಿಶೀಲನೆ:ನವಲಗುಂದ ತಾಲ್ಲೂಕಿನ ಶಲವಡಿ ಸೇರಿದಂತೆ ಹಲವು ಗ್ರಾಮಗಳಿಗೆ ಭೇಟಿ ನೀಡಿದ ಸಚಿವರು, ಈರುಳ್ಳಿ ಮತ್ತು ಹೆಸರು ಬೆಳೆಗಳು ಸಂಪೂರ್ಣ ನಾಶವಾಗಿರುವುದನ್ನು ಗಮನಿಸಿದರು….

Read More

ಶಿವಾನಂದ ನವಲಗುಂದಗೆ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಸಂಯೋಜಕ ಸ್ಥಾನ

ಧಾರವಾಡ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಪ್ರಚಾರ ಸಮಿತಿಯ ಅಧ್ಯಕ್ಷ ವಿನಯಕುಮಾರ ಸೊರಕೆ ಅವರ ಆದೇಶದ ಮೇರೆಗೆ, ಶಿವಾನಂದ ನವಲಗುಂದ ಅವರನ್ನು ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಸಂಯೋಜಕರನ್ನಾಗಿ ನೇಮಕ ಮಾಡಲಾಗಿದೆ. ಕೆಪಿಸಿಸಿ ಸದಸ್ಯ ಚಂದ್ರಶೇಖರ ಗೋವಿಂದಪ್ಪ ಜುಟ್ಟಲ ಅವರು ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಶಿವಾನಂದ ನವಲಗುಂದ ಅವರ ನೇಮಕಕ್ಕೆ ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ. ಜಿಗಳೂರು ಗ್ರಾಮದವರಾದ ನವಲಗುಂದ ಅವರಿಗೆ ಪಕ್ಷವು ಈ ಮಹತ್ವದ…

Read More

ಶಿವಾನಂದ ನವಲಗುಂದಗೆ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಸಂಯೋಜಕ ಸ್ಥಾನ

ಧಾರವಾಡ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಪ್ರಚಾರ ಸಮಿತಿಯ ಅಧ್ಯಕ್ಷ ವಿನಯಕುಮಾರ ಸೊರಕೆ ಅವರ ಆದೇಶದ ಮೇರೆಗೆ, ಶಿವಾನಂದ ನವಲಗುಂದ ಅವರನ್ನು ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಸಂಯೋಜಕರನ್ನಾಗಿ ನೇಮಕ ಮಾಡಲಾಗಿದೆ. ಕೆಪಿಸಿಸಿ ಸದಸ್ಯ ಚಂದ್ರಶೇಖರ ಗೋವಿಂದಪ್ಪ ಜುಟ್ಟಲ ಅವರು ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಶಿವಾನಂದ ನವಲಗುಂದ ಅವರ ನೇಮಕಕ್ಕೆ ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ. ಜಿಗಳೂರು ಗ್ರಾಮದವರಾದ ನವಲಗುಂದ ಅವರಿಗೆ ಪಕ್ಷವು ಈ ಮಹತ್ವದ…

Read More

ಇಂದು ಕುಂದಗೋಳ. ನವಲಗುಂದ ಸೇರಿದಂತೆ ವಿವಿಧ ಭಾಗಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಮತ್ತು ಶಾಸಕರು, ಜಿಲ್ಲಾಧಿಕಾರಿಗಳಿಂದ ಬೆಳೆ ಹಾನಿ ಪರಿಶೀಲನೆ

ಹುಬ್ಬಳ್ಳಿ: ನಿರಂತರ ಮಳೆಯಿಂದಾಗಿ ಹಾನಿಗೊಳಗಾದ ಬೆಳೆ ಪ್ರದೇಶಗಳನ್ನು ಪರಿಶೀಲಿಸಲು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸ್ಥಳೀಯ ಶಾಸಕರು ಇಂದು ಮಧ್ಯಾಹ್ನ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 1 ರಿಂದ 2:30 ರವರೆಗೆ ಈ ಭೇಟಿ ನಡೆಯಲಿದ್ದು, ಈ ವೇಳೆ ಜಿಲ್ಲಾಧಿಕಾರಿಗಳು ಸಹ ಉಪಸ್ಥಿತರಿರುತ್ತಾರೆ. ಸಚಿವರು ಅಣ್ಣಿಗೇರಿ ತಾಲೂಕಿನ ಮಣಕವಾಡ, ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಮತ್ತು ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮಗಳಲ್ಲಿನ ಬೆಳೆ ಹಾನಿಯನ್ನು ಪರಿಶೀಲಿಸಲಿದ್ದಾರೆ. ಈ ಭಾಗಗಳಲ್ಲಿ ಹೆಸರು, ಉದ್ದು, ಈರುಳ್ಳಿ ಮತ್ತು ಇತರ ಬೆಳೆಗಳು ಹಾನಿಗೊಳಗಾಗಿದ್ದು, ಸ್ಥಳೀಯ…

Read More

ನವಲಗುಂದದಲ್ಲಿ ಗಣೇಶ ಹಬ್ಬದ ಡಿಜೆ: ನಿಯಮ ಸಡಿಲಿಸದಿದ್ದರೆ ಬಿಜೆಪಿ ಯುವ ಮೋರ್ಚಾದಿಂದ ಉಗ್ರ ಪ್ರತಿಭಟನೆ ಎಚ್ಚರಿಕೆ, ಬಿಜೆಪಿ ನವಲಗುಂದ ಮಂಡಳದ ಯುವ ಮೊರ್ಚಾ ಅಧ್ಯಕ್ಷ ಅರುಣಕುಮಾರ ಮೆಣಸಿನಕಾಯಿ

ನವಲಗುಂದ: ಗಣೇಶ ಹಬ್ಬದ ವಿಸರ್ಜನೆ ಮೆರವಣಿಗೆಯ ಸಂದರ್ಭದಲ್ಲಿ ಡಿಜೆ ಸೌಂಡ್ ಬಳಸಲು ಸರ್ಕಾರ ಮತ್ತು ಸ್ಥಳೀಯ ಆಡಳಿತವು ಅವಕಾಶ ನೀಡಬೇಕು. ಇಲ್ಲವಾದಲ್ಲಿ, ಉಗ್ರ ಹೋರಾಟ ನಡೆಸುವುದಾಗಿ ಬಿಜೆಪಿ ಯುವ ಮೋರ್ಚಾ ನವಲಗುಂದ ಮಂಡಲದ ಅಧ್ಯಕ್ಷ ಅರುಣಕುಮಾರ್ ಚ. ಮೆಣಸಿನಕಾಯಿ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ ಅವರು, “ಗಣೇಶ ಹಬ್ಬವು ಹಿಂದೂಗಳ ಪಾಲಿಗೆ ಅತ್ಯಂತ ಪ್ರಮುಖ ಧಾರ್ಮಿಕ ಹಬ್ಬವಾಗಿದೆ. ಇದನ್ನು ಪ್ರತಿ ವರ್ಷವೂ ಅತ್ಯಂತ ಸಡಗರ ಮತ್ತು ವಿಜೃಂಭಣೆಯಿಂದ ಸಾರ್ವಜನಿಕವಾಗಿ ಆಚರಿಸಲಾಗುತ್ತದೆ. ಈ ಹಬ್ಬದ…

Read More

ಗಣೇಶ ಹಾಗೂ ಈದ್ ಮಿಲಾದ್‌ ಹಬ್ಬಗಳ ಆಚರಣೆ: ಡಿಜೆ ನಿಷೇಧಿಸಿ ಸಾಂಪ್ರದಾಯಿಕ ವಾದ್ಯ ಬಳಸಲು ಎಸ್‌ಪಿ ಸೂಚನೆ

ಧಾರವಾಡ: ಮುಂಬರುವ ಗೌರಿ-ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬಗಳನ್ನು ಶಾಂತಿಯುತವಾಗಿ ಹಾಗೂ ಸೌಹಾರ್ದಯುತವಾಗಿ ಆಚರಿಸುವ ಕುರಿತು ಗುರುವಾರದಂದು ನಗರದ ದುರ್ಗಾದೇವಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಗುಂಜನ್ ಆರ್ಯ ಅವರು, ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಡಿಜೆ ಸೌಂಡ್ ಸಿಸ್ಟಮ್‌ಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದರು.ಡಿಜೆ ಬಳಕೆಯಿಂದ ವೃದ್ಧರು, ಮಕ್ಕಳು ಮತ್ತು ಗರ್ಭಿಣಿಯರಿಗೆ ತೊಂದರೆಯಾಗುವ ಸಾಧ್ಯತೆಗಳಿದ್ದು, ಅದಕ್ಕೆ ಬದಲಾಗಿ ಸಾಂಪ್ರದಾಯಿಕ…

Read More

ಶೀಘ್ರದಲ್ಲೇ ವ್ಯವಸ್ಥಿತವಾಗಿ ಕಟ್ಟಡ ನಿರ್ಮಾಣವನ್ನು ವ್ಯವಸ್ಥಿತವಾಗಿ ಪೂರ್ಣ ಗೋಳಿಸಲು ಗುತ್ತಿಗೆ ಧಾರನಿಗೆ ಜಿಲ್ಲಾಧಿಕಾರಿ ದಿವ್ಯ ‌ಪ್ರಭು ಸೂಚನೆ

ಧಾರವಾಡ: ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ನೂತನ ಕಟ್ಟಡ ಕಾಮಗಾರಿಯನ್ನು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಇಂದು ವೀಕ್ಷಿಸಿದರು. ಕಟ್ಟಡವನ್ನು 2026ರ ಜನವರಿ ತಿಂಗಳೊಳಗೆ ಪೂರ್ಣಗೊಳಿಸಿ, ಬಳಕೆಗೆ ನೀಡಬೇಕು ಎಂದು ನಿರ್ಮಾಣ ಸಂಸ್ಥೆಗೆ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳು ಕಾಲೇಜಿನ ಪ್ರಗತಿ, ಕಟ್ಟಡದ ಮೂಲಸೌಕರ್ಯ, ವಿದ್ಯಾರ್ಥಿನಿಯರ ಅಗತ್ಯಗಳು ಹಾಗೂ ತರಗತಿ ಸೌಲಭ್ಯಗಳನ್ನು ಪರಿಶೀಲಿಸಿದರು. ಈ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸ್ಥಳದಲ್ಲೇ ಚರ್ಚೆ ನಡೆಸಿದರು.ನಂತರ ಮಾತನಾಡಿದ ಅವರು, ಶೈಕ್ಷಣಿಕವಾಗಿ ಹೆಚ್ಚು ಉಪಯುಕ್ತವಾಗುವ ರೀತಿಯಲ್ಲಿ ಕಟ್ಟಡವನ್ನು ನಿರ್ಮಿಸಬೇಕು. ವಿದ್ಯಾರ್ಥಿನಿಯರಿಗೆ ಅಗತ್ಯವಿರುವ…

Read More

ಕುಂದಗೋಳದಲ್ಲಿ ಕರವೇ (ನಾರಾಯಣಗೌಡ್ರ) ಬಣದ ವತಿಯಿಂದ ಬೆಳೆ ವಿಮೆ ಮತ್ತು ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ ನಂತರ ಶಿರಸ್ತೆದಾರಗೆ ಮನವಿ

ಕುಂದಗೋಳ: ತಾಲೂಕಿನಲ್ಲಿ ಅತಿವೃಷ್ಟಿಯಿಂದ ಸಂಪೂರ್ಣ ಬೆಳೆ ನಾಶವಾಗಿರುವ ಹಿನ್ನೆಲೆಯಲ್ಲಿ, ಪ್ರತಿ ಹೆಕ್ಟೇರ್‌ಗೆ 50 ಸಾವಿರ ರೂಪಾಯಿ ಪರಿಹಾರ ನೀಡಬೇಕು ಮತ್ತು ಬೆಳೆ ವಿಮೆ ತಾರತಮ್ಯವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ಗುರುವಾರದಂದು ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಬಳಿಕ ಶಿರಸ್ತೆದಾರ ಮಹೇಶ ಶ್ಯಾನಬಾಳ ಅವರಿಗೆ ಮನವಿ ಸಲ್ಲಿಸಿದರು. ಪ್ರಮುಖ ಬೇಡಿಕೆಗಳು: ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದೆ. ಈ ಸಂದರ್ಭದಲ್ಲಿ…

Read More

ಕಲಘಟಗಿ ತಾಲೂಕಿನಲ್ಲಿ ‘ವಚನ ಶ್ರಾವಣ’ ಅಂಗವಾಗಿ ‘ವಚನದರ್ಶನ’ ಪ್ರವಚನ

ಕಲಘಟಗಿ: ತಾಲೂಕಿನ ಬಸವ ತತ್ವ ಲಿಂಗಾನುಭಾವಿ ಶರಣರ ಬಳಗದ ಅನುಭವ ಮಂಟಪದಲ್ಲಿ ‘ವಚನ ಶ್ರಾವಣ’ದ ಅಂಗವಾಗಿ ‘ವಚನದರ್ಶನ’ ಪ್ರವಚನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಹೊಸದುರ್ಗ ಬಸವಾಶ್ರಮದ ಪರಮಪೂಜ್ಯ ಅಕ್ಕಮಹಾದೇವಿ ಪೂಜ್ಯಮಾತಾಜಿ ಅವರು ಪ್ರವಚನ ನೀಡಿದರು. ಪೂಜ್ಯಮಾತಾಜಿ ಅವರು ತಮ್ಮ ಪ್ರವಚನದಲ್ಲಿ, ಬಸವಾದಿ ಶರಣರ ವಚನಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅವರ ಮಾರ್ಗದಲ್ಲಿ ನಡೆದರೆ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು. ಶರಣರು ನಮಗೆ ನೀಡಿದ ಅಷ್ಟಾವರಣ, ಪಂಚಾಚಾರ ಮತ್ತು ಷಟಸ್ಥಲಗಳು ನಮ್ಮ ಜೀವನಕ್ಕೆ ಭದ್ರ ಬುನಾದಿಗಳಾಗಿರಬೇಕು…

Read More

ಯರಗುಪ್ಪಿ ಗ್ರಾ.ಪಂ. ಮುಂದೆ ಮುಳ್ಳಹಳ್ಳಿ ನಿರಾಶ್ರಿತರ ಪ್ರತಿಭಟನೆ ಮನೆ ಮತ್ತು ಜಾಗೆ ನೀಡುವಂತೆ ಆಗ್ರಹ

ಕುಂದಗೋಳ: ಬೆಣ್ಣೆಹಳ್ಳ ಪ್ರವಾಹದಿಂದ ನಿರಾಶ್ರಿತರಾಗಿರುವ ಕುಂದಗೋಳ ತಾಲ್ಲೂಕಿನ ಮುಳ್ಳಹಳ್ಳಿ ಗ್ರಾಮದ 14 ಕುಟುಂಬಗಳು, ಮನೆ ಮತ್ತು ಜಾಗೆ ಹಂಚಿಕೆಯಲ್ಲಿ ತಮಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಗುರುವಾರದಂದು ಯರಗುಪ್ಪಿ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಮಹಾತ್ಮಾ ಗಾಂಧಿಜೀಯವರ ಪೋಟೋ ಇಟ್ಟು ಮತ್ತು ಪ್ರತಿಭಟನೆ ನಡೆಸಿದರು. ಸುಮಾರು 15 ವರ್ಷಗಳ ಹಿಂದೆ ಬೆಣ್ಣೆಹಳ್ಳ ಪ್ರವಾಹದಿಂದ ಗ್ರಾಮವು ಸ್ಥಳಾಂತರಗೊಂಡಾಗ, ಅನೇಕ ಕುಟುಂಬಗಳು ತಮ್ಮ ಆಸ್ತಿ ಮತ್ತು ಮನೆಗಳನ್ನು ಕಳೆದುಕೊಂಡಿದ್ದವು. ಅಂದಿನಿಂದಲೂ ಈ 14 ಕುಟುಂಬಗಳು ಗುಡಿಸಲು ಮತ್ತು ತಾತ್ಕಾಲಿಕ ಶೆಡ್‌ಗಳಲ್ಲಿ ವಾಸಿಸುತ್ತಿವೆ….

Read More