ಕಳಪೆ ಬೀಜ ಮಾರಿ ರೈತನಿಗೆ ವಂಚಿಸಿದ ಕಂಪನಿಗೆ ₹5.60 ಲಕ್ಷ ದಂಡ: ಗ್ರಾಹಕ ಆಯೋಗದಿಂದ ಅನ್ನದಾತನಿಗೆ ನ್ಯಾಯ!
ಧಾರವಾಡ: ಬೆವರು ಸುರಿಸಿ ಭೂಮಿ ತಾಯಿಯನ್ನು ನಂಬಿ ಬದುಕುವ ರೈತನ ನಂಬಿಕೆಗೆ ದ್ರೋಹ ಬಗೆದು, ಕಳಪೆ ಬೀಜ ಮಾರಾಟ ಮಾಡಿದ ತೆಲಂಗಾಣ ಮೂಲದ ಸತ್ಯಕಾಮ್ ದುಡಿಗಳ್ಳ ಸಂಸ್ಥೆ ಹಾಗೂ ಸ್ಥಳೀಯ ವಿತರಕರಿಗೆ ಧಾರವಾಡ ಜಿಲ್ಲಾ ಗ್ರಾಹಕ ಆಯೋಗವು ಸರಿಯಾದ ಪಾಠ ಕಲಿಸಿದೆ. ಈ ಕಂಪನಿಗಳ ಸೇವಾ ನ್ಯೂನ್ಯತೆಯನ್ನು ತೀವ್ರವಾಗಿ ಖಂಡಿಸಿರುವ ಆಯೋಗವು, ಸಂಕಷ್ಟಕ್ಕೀಡಾದ ರೈತನಿಗೆ ಒಟ್ಟು 5 ಲಕ್ಷ ರೂಪಾಯಿ ಬೆಳೆ ನಷ್ಟ ಪರಿಹಾರ, 50 ಸಾವಿರ ರೂಪಾಯಿ ಮಾನಸಿಕ ದಂಡ ಹಾಗೂ 10 ಸಾವಿರ ರೂಪಾಯಿ…

