ಕ.ವಿ.ವ. ಸಂಘವು ಕನ್ನಡದ ಬೇರು ಗಟ್ಟಿಗೊಳಿಸುವ ಪ್ರಾತಿನಿಧಿಕ ಸಂಸ್ಥೆ: ಡಾ. ಮಹೇಶ ವಾಳ್ವೇಕರ ಅಭಿಮತ
ಧಾರವಾಡ: ಕನ್ನಡದ ಗುಡಿಯೆಂದೇ ಖ್ಯಾತಿ ಪಡೆದಿರುವ ಕರ್ನಾಟಕ ವಿದ್ಯಾವರ್ಧಕ ಸಂಘವು ಕನ್ನಡದ ಬೇರನ್ನು ಗಟ್ಟಿಗೊಳಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತ ಬಂದಿದೆ. ಈ ಸಂಘವು ನಿಜ ಅರ್ಥದಲ್ಲಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿದೆ ಎಂದು ರಾಜ್ಯ ಮಾಹಿತಿ ಹಕ್ಕು ಆಯುಕ್ತರಾದ ಡಾ. ಮಹೇಶ ವಾಳ್ವೇಕರ ಅವರು ಅಭಿಪ್ರಾಯಪಟ್ಟರು. ಅವರು ಶನಿವಾರದಂದು ರಂದು ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ 70ನೇ ರಾಜ್ಯೋತ್ಸವ ನಾಡಹಬ್ಬ-2025 ನಿಮಿತ್ತದ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕವಿವ ಸಂಘವು ಕನ್ನಡ ಭಾಷೆ, ನೆಲ ಮತ್ತು…

