ಬಾಡ ಗ್ರಾಮದಲ್ಲಿ ಫೆ. 16 ರಿಂದ ಶ್ರೀ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವ: ವಿವಿಧ ಪವಾಡಗಳ ಸಡಗರ
ಧಾರವಾಡ: ತಾಲೂಕಿನ ಸುಕ್ಷೇತ್ರ ಬಾಡ ಗ್ರಾಮದಲ್ಲಿ ಪ್ರತಿ ವರ್ಷದ ಪದ್ಧತಿಯಂತೆ ಈ ಬಾರಿಯೂ 23ನೇ ವರ್ಷದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ಭವ್ಯ ಜಾತ್ರಾ ಮಹೋತ್ಸವವನ್ನು ಫೆಬ್ರವರಿ 16 ಮತ್ತು 17 ರಂದು ಹಮ್ಮಿಕೊಳ್ಳಲಾಗಿದೆ. ಎರಡು ದಿನಗಳ ಕಾಲ ಜರುಗುವ ಈ ಧಾರ್ಮಿಕ ಉತ್ಸವದಲ್ಲಿ ಅಪಾರ ಭಕ್ತ ಮಂಡಳಿಯ ಸಮ್ಮುಖದಲ್ಲಿ ವಿವಿಧ ವೈವಿಧ್ಯಮಯ ಕಾರ್ಯಕ್ರಮಗಳು ಮತ್ತು ಸಾಂಪ್ರದಾಯಿಕ ಪೂಜಾ ಕೈಂಕರ್ಯಗಳು ನೆರವೇರಲಿವೆ. ಜಾತ್ರೆಯ ಮೊದಲ ದಿನವಾದ ಫೆಬ್ರವರಿ 16ರ ಸೋಮವಾರದಂದು ಜ್ಯೋತಿ ಬೆಳಗಿಸುವುದು, ಧ್ವಜಾರೋಹಣ ಹಾಗೂ ತ್ರಿಸೂಲಿ ಪೂಜೆ…

