ಜಪಾನ್ನಲ್ಲಿ ಮತ್ತೊಂದು ಸಾಂಕ್ರಾಮಿಕ ರೋಗದ ಭೀತಿ: ಆ ದೇಶಾದ್ಯಂತ ಇನ್ಫ್ಲುಯೆಂಜಾ ಏಕಾಏಕಿ ಏರಿಕೆ, 4,000ಕ್ಕೂ ಹೆಚ್ಚು ಪ್ರಕರಣ ದಾಖಲು
ಟೋಕಿಯೋ: ಜಗತ್ತನ್ನು ತತ್ತರಿಸಿದ COVID-19 ಸಾಂಕ್ರಾಮಿಕದ ದುಃಸ್ವಪ್ನ ಇನ್ನೂ ಮಾಸಿಲ್ಲ. ಈ ಮಧ್ಯೆ, ಜಪಾನ್ನಲ್ಲಿ ಕಾಲೋಚಿತ ಇನ್ಫ್ಲುಯೆಂಜಾ (ಸಾಮಾನ್ಯವಾಗಿ ಫ್ಲೂ ಎಂದು ಕರೆಯಲಾಗುವ ಜ್ವರ) ಪ್ರಕರಣಗಳು ಹಠಾತ್ ಏರಿಕೆ ಕಂಡಿದ್ದು, ದೇಶವು ಮತ್ತೊಂದು ಆರೋಗ್ಯ ಬಿಕ್ಕಟ್ಟಿನ ಭೀತಿಯನ್ನು ಎದುರಿಸುತ್ತಿದೆ. ಒಂದೇ ವಾರದಲ್ಲಿ 4,000ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, ದೇಶಾದ್ಯಂತ ಸಾಂಕ್ರಾಮಿಕ ರೋಗದ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ಐದು ವಾರ ಮುಂಚಿತವಾಗಿ ಏಕಾಏಕಿ ಏರಿಕೆಮಾಹಿತಿ ಪ್ರಕಾರ, ಜಪಾನ್ನಲ್ಲಿ ಈ ವರ್ಷ ಕಾಲೋಚಿತ ಇನ್ಫ್ಲುಯೆಂಜಾ ಜ್ವರವು ಸಾಮಾನ್ಯಕ್ಕಿಂತ ಸುಮಾರು ಐದು…

