ವೀರ ಯೋಧ ಅಜಯ್ ಮಲಿಕ್ ಅವರನ್ನು ಭೇಟಿ ಮಾಡಿ ಧೈರ್ಯ ತುಂಬಿದ ರಾಹುಲ್ ಗಾಂಧಿ
ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರು ಸೋಮವಾರ ದೆಹಲಿಯ ಆರ್.ಕೆ. ಪುರಂನಲ್ಲಿ ಕೋಬ್ರಾ ಬೆಟಾಲಿಯನ್‌ನ ಅಸಿಸ್ಟೆಂಟ್ ಕಮಾಂಡೆಂಟ್ ಶ್ರೀ ಅಜಯ್ ಮಲಿಕ್ ಅವರನ್ನು ಭೇಟಿ ಮಾಡಿ ಸೌಜನ್ಯಯುತ ವಿಚಾರಣೆ ನಡೆಸಿದರು. ಜರ್ಖಂಡ್‌ನಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಯ ವೇಳೆ ನಡೆದ ಐಇಡಿ ಸ್ಫೋಟದಲ್ಲಿ ಮಲಿಕ್ ಅವರು ತೀವ್ರವಾಗಿ ಗಾಯಗೊಂಡು ತಮ್ಮ ಒಂದು ಕಾಲನ್ನು ಕಳೆದುಕೊಂಡಿದ್ದರು. ಈ ಭೀಕರ ದುರಂತದ ಹೊರತಾಗಿಯೂ ಮಲಿಕ್ ಅವರಲ್ಲಿ ಕಂಡುಬಂದ ಅಚಲವಾದ ಮನೋಬಲ ಮತ್ತು ಅಪ್ರತಿಮ ದೇಶಪ್ರೇಮವನ್ನು ಕಂಡು ರಾಹುಲ್…

