ಗಣೇಶಪೇಟ ಕಾ ರಾಜಾ ಆಗಮನ ಉತ್ಸವ: ‘ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳಿ’ – ಸಮಾಜ ಸೇವಕರಾದ ಸುಭಾಷ್ ಸಿಂಗ್ ಜಮಾಧಾರ ಕರೆ

Spread the love

ಹುಬ್ಬಳ್ಳಿ: ಪ್ರತಿಷ್ಠಿತ ‘ಗಣೇಶಪೇಟ ಕಾ ರಾಜಾ’ ಗಣೇಶ ಆಗಮನ ಉತ್ಸವಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗಣೇಶನ ಆಶೀರ್ವಾದಕ್ಕೆ ಪಾತ್ರರಾಗಬೇಕೆಂದು ಸಮಾಜಸೇವಕರಾದ ಸುಭಾಷ್ ಸಿಂಗ್ ಜಮಾಧಾರ ಕರೆ ನೀಡಿದ್ದಾರೆ. ಶ್ರೀ ಸೂರ್ಯವಂಶ ಕ್ಷೇತ್ರೀಯ ಕಲಾಲ ಸಮಾಜ ಹಾಗೂ ಯುವಕ ಮಂಡಳ (ರಿ) ಆಶ್ರಯದಲ್ಲಿ ಸೋಮವಾರ ನಡೆಯಲಿರುವ ಗಣೇಶ ಮೂರ್ತಿಯ ಆಗಮನದ ಮೆರವಣಿಗೆಗೆ ಅವರು ಶುಭ ಕೋರಿದ್ದಾರೆ.

ಮೆರವಣಿಗೆ ವಿವರ:
ಪ್ರತಿ ವರ್ಷದಂತೆ ಈ ವರ್ಷವೂ ಗಣೇಶ ಚತುರ್ಥಿ ಪ್ರಯುಕ್ತ ಇಂದು (ಆಗಸ್ಟ್‌ 25, 2025) ಮಧ್ಯಾಹ್ನ 2 ಗಂಟೆಗೆ ದಾಜಿಬಾನ ಪೇಟೆಯ ತುಳಜಾಭವಾನಿ ಸರ್ಕಲ್‌ನಿಂದ ಮೆರವಣಿಗೆ ಆರಂಭವಾಗಲಿದೆ. ಮೆರವಣಿಗೆ ಗಣೇಶಪೇಟೆಯ ಮುಕ್ಕೇರಿ ಓಣಿಯಲ್ಲಿ ಸಮಾಪ್ತಿಯಾಗಲಿದೆ.
ಈ ಉತ್ಸವವು ಸಮಾಜದ ಗುರು-ಹಿರಿಯರು, ಮಹಿಳಾ ಮಂಡಳ ಹಾಗೂ ಯುವ ಮಿತ್ರರ ಸಹಭಾಗಿತ್ವದಲ್ಲಿ ನಡೆಯಲಿದೆ. ಇದೇ ವೇಳೆ ಸಮಾಜದ ರಾಜ್ಯಾಧ್ಯಕ್ಷ ಲಕ್ಷ್ಮಣ ಎಂ. ಗಂಡಗಾಳೇಕರ, ಹುಬ್ಬಳ್ಳಿ ಘಟಕದ ಅಧ್ಯಕ್ಷ ಸದಾನಂದ ಖಜೂರ್ಕರ ಮತ್ತು ಉಪಾಧ್ಯಕ್ಷ ಕೃಷ್ಣ ಎಂ. ಗಂಡಗಾಳೇಕರ ಹಾಗೂ ಸದಸ್ಯರಾದ ಮನೋಜ ಭೀಮಕರ ಅವರು ಸಾರ್ವಜನಿಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಉತ್ಸವವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದ್ದಾರೆ.

ಪ್ರಮುಖ ಕಾರ್ಯಕ್ರಮಗಳು:

  • ಮಹಾ ಮಂಗಳಾರತಿ: ಆಗಸ್ಟ್ 27 (ಬುಧವಾರ) ರಂದು ಸಾಯಂಕಾಲ 6.30ಕ್ಕೆ ಮೊದಲ ಮಹಾಮಂಗಳಾರತಿ ನಡೆಯಲಿದೆ.
  • ಶ್ರೀ ಸತ್ಯನಾರಾಯಣಸ್ವಾಮಿ ಪೂಜೆ: ಸೆಪ್ಟೆಂಬರ್‌ 1 (ಸೋಮವಾರ) ರಂದು ಪೂಜೆ ಮತ್ತು ಸಾಯಂಕಾಲ 6 ಗಂಟೆಗೆ ಪ್ರಸಾದ ವಿತರಣೆ ಇರುತ್ತದೆ.
  • ಬೆಳ್ಳಿ ಅಲಾವ (ಸವಾಲ) ಕಾರ್ಯಕ್ರಮ: ಸೆಪ್ಟೆಂಬರ್‌ 1 ರಂದು ರಾತ್ರಿ 8 ಗಂಟೆಗೆ ಗಣೇಶನ ಮೂರ್ತಿ ಮೇಲಿರುವ ಬೆಳ್ಳಿ ಮತ್ತು ಅಂತರಕಾಯಿ ಅಲಾವ (ಸವಾಲ) ಕಾರ್ಯಕ್ರಮ ಜರುಗಲಿದೆ.
  • ವಿಸರ್ಜನೆ: ಸೆಪ್ಟೆಂಬರ್‌ 6 (ಶನಿವಾರ) ರಂದು ಮಧ್ಯಾಹ್ನ 2 ಗಂಟೆಗೆ ‘ಗಣೇಶಪೇಟ ಕಾ ರಾಜಾ’ ವಿಸರ್ಜನೆ ನಡೆಯಲಿದೆ.
    ಸಮಾಜದ ಎಲ್ಲಾ ಬಾಂಧವರು, ಯುವ ಮಿತ್ರರು, ಸರ್ವ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಕುಟುಂಬ ಸಮೇತರಾಗಿ ಆಗಮಿಸಿ ಈ ಕಾರ್ಯಕ್ರಮಗಳ ಯಶಸ್ಸಿಗೆ ಸಹಕರಿಸಬೇಕೆಂದು ಆಯೋಜಕರು ವಿನಂತಿಸಿದ್ದಾರೆ.

Leave a Reply

Your email address will not be published. Required fields are marked *