
ನವಲಗುಂದ: ತಾಲ್ಲೂಕಿನ ಗುಡಿಸಾಗರ ಗ್ರಾಮದಲ್ಲಿ ಭಾನುವಾರ ಶಾಸಕ ಎನ್.ಎಚ್. ಕೋನರಡ್ಡಿ ಅವರ ಹುಟ್ಟುಹಬ್ಬವನ್ನು ಗ್ರಾಮದ ಹಿರಿಯರು ಹಾಗೂ ಅಭಿಮಾನಿಗಳು ಅತ್ಯಂತ ಸಡಗರ-ಸಂಭ್ರಮದಿಂದ ಆಚರಿಸಿದರು. ಹಿರೇಮಠದ ಶ್ರೀಗಳ ಸಾನ್ನಿಧ್ಯದಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ, ಶಾಸಕರಿಗೆ ಆಯುರಾರೋಗ್ಯ ಮತ್ತು ಹೆಚ್ಚಿನ ಜನಸೇವೆ ಮಾಡುವ ಶಕ್ತಿ ಲಭಿಸಲಿ ಎಂದು ಹಾರೈಸಲಾಯಿತು.
ಗ್ರಾಮದ ಪ್ರಮುಖರು ಹಾಗೂ ಹಿರಿಯರು ಶಾಸಕರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿ, ಗ್ರಾಮಸ್ಥರಿಗೆ ಸಿಹಿ ಹಂಚುವ ಮೂಲಕ ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯರು, ಶಾಸಕ ಕೋನರಡ್ಡಿ ಅವರಿಗೆ ಭಗವಂತನು ಹೆಚ್ಚಿನ ಆಯಸ್ಸು ಮತ್ತು ಆರೋಗ್ಯವನ್ನು ಕರುಣಿಸಲಿ. ಜನಸಾಮಾನ್ಯರ ಸೇವೆಯಲ್ಲಿ ಅವರು ಸದಾ ತೊಡಗಿಸಿಕೊಳ್ಳುವಂತಾಗಲಿ ಮತ್ತು ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲು ದೇವರು ಅವರಿಗೆ ಇನ್ನು ಹೆಚ್ಚಿನ ಶಕ್ತಿಯನ್ನು ನೀಡಲಿ ಎಂದು ಭಕ್ತಿಪೂರ್ವಕವಾಗಿ ಪ್ರಾರ್ಥಿಸಿದರು.
ಈ ಸಂಭ್ರಮಾಚರಣೆಯಲ್ಲಿ ಗುಡಿಸಾಗರ ಗ್ರಾಮದ ಹಿರಿಯರಾದ ಗಿರೀಶ ದೇವರಡ್ಡಿ, ಬಸವರಾಜ್ ಉಳ್ಳೆಗಡ್ಡಿ, ಶಂಕ್ರಪ್ಪ ಬಾಗೂರು, ಫಕ್ಕೀರೇಶ ಪಡೆಸೂರ್, ಚಿದಾನಂದ್ ಮುತ್ತಣ್ಣರ್, ಗುರುಸಿದ್ದಪ್ಪ ಪೂಜಾರ್, ರವಿ ಹಳ್ಯಾಳ್, ಮಂಜು ನಾವಳ್ಳಿ, ಶಿವಯೋಗಿ ಪೂಜಾರ್ ಸೇರಿದಂತೆ ಗ್ರಾಮದ ಅನೇಕ ಮುಖಂಡರು ಮತ್ತು ಗ್ರಾಮಸ್ಥರು ಪಾಲ್ಗೊಂಡು ಶಾಸಕರಿಗೆ ಶುಭ ಕೋರಿದರು.

