
ನವಲಗುಂದ: ಅನ್ನದಾನ ಮಹಾ ಪುಣ್ಯದ ಕೆಲಸವಾಗಿದೆ ಅದನ್ನು ಜೀವನದಲ್ಲಿ ಗುರಿಯಾಗಿಸಿಕೊಂಡು ಶ್ರೀ ಮಠದಲ್ಲಿ ವೀರಬಸವ ದೇವರು ಆರಂಭ ಮಾಡಿದ್ದು ಬಹಳ ಸಂತೋಷ ತಂದಿದೆ ಎಂದು ಶಿರಹಟ್ಟಿಯ ಫಕ್ಕಿರೇಶ ಮಠದ ಫಕ್ಕೀರ ಸಿದ್ದರಾಮದೇವರು ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಶ್ರೀ ಸಂಸ್ಥಾನ ಪಂಚಗ್ರಹ ಹಿರೇಮಠದಲ್ಲಿ ಶ್ರೀ ಸಿದ್ದೇಶ್ವರ ಪ್ರಸಾದ ನಿಲಯ ಉದ್ಘಾಟನೆ ಮಾಡಿ ಮಾತನಾಡಿದ ಅವರು ಜಗದ್ಗುರುಗಳ ಆಶೀರ್ವಾದದಿಂದ ಇನ್ನಷ್ಟು ಕಾರ್ಯಕ್ರಮಗಳು ಈ ಪಂಚಗ್ರಹ ಹಿರೇಮಠದಲ್ಲಿ ನಡೆಯಲಿ, ನೂತನ ಪೀಠಾಧಿಕಾರಿಗಳ ಮೇಲೆ ಶಿರಹಟ್ಟಿಯ ಶ್ರೀಗಳ ಆಶೀರ್ವಾದ ಯಾವತ್ತೂ ಇರುತ್ತೆ ಎಂದರು.
ಮಣಕವಾಡ ಮಠದ ಅಭಿನವ ಮೃತ್ಯುಂಜಯ ಶ್ರೀಗಳು ಮಾತನಾಡಿ ಈ ಸಮಾಜದಲ್ಲಿ ಸಾಮರಸ್ಯ ಹದಗೆಟ್ಟಾಗ ಶ್ರೀ ಮಠದ ಪೂಜ್ಯರು ಸರಿ ಮಾಡುವಂತಹ ಕೆಲಸ ಮಾಡುತ್ತಾರೆ, ಶಿರಹಟ್ಟಿಯ ಮಠದ ಅಜ್ಜನವರ ಆಶಿರ್ವಾದದಿಂದ ಭಾವೈಕ್ಯತೆಯ ಮಠವಾಗಿ ಪಂಚಗ್ರಹ ಹಿರೇಮಠ ಬೆಳೆಯುತ್ತದೆ, ವೀರಬಸವ ದೇವರು ಬಂದು ಮೂರು ತಿಂಗಳಲ್ಲಿ ವ್ಯವಸ್ಥಿತವಾದ ಪ್ರಸಾದ ನಿಲಯ ಕಟ್ಟಿಸಿದ್ದಾರೆ, ವೀರಬಸವ ದೇವರ ಮೇಲೆ ನಂಬಿಕೆ ಇಟ್ಟು ನೋಡಿ ಅವರು ಪಂಚಗ್ರಹ ಹಿರೇಮಠವನ್ನು ಭಾವಕ್ಯತೆಯ ಮಠವಾಗಿ ಬೆಳೆಸುತ್ತಾರೆ ಎಂದರು.

-ಅಣ್ಣಪ್ಪ ಬಾಗಿ ಮಾತನಾಡಿ ಶಿರಹಟ್ಟಿಯ ಫಕ್ಕಿರೇಶ್ವರ ದೇವರ ಅನುಗ್ರಹ ವೀರಬಸವ ದೇವರ ಮೇಲೆ ಆಗಿದೆ ಅದಕ್ಕೆ ಇವತ್ತಿನ ಪ್ರಸಾದ ನಿಲಯವೇ ಸಾಕ್ಷಿ , ಕಾಶಿ ಜಗದ್ಗುರುಗಳ ಆಶೀರ್ವಾದವು ಶ್ರೀ ಮಠದ ಮೇಲಿದೆ, ಇಲ್ಲಿ ಭೇದ ಭಾವ ಮಾಡದೇ ನಾವೆಲ್ಲರೂ ಒಗ್ಗಟ್ಟಾಗಿ ಪೂಜ್ಯರ ಆಶೀರ್ವಾದ ದಂತೆ ನಡೆಯುತ್ತೇವೆ ಎಂದರು.
-ಬಂಗಾರೇಶ ಹಿರೇಮಠ ಮಾತನಾಡಿ ಅನ್ನ ದಾಸೋಹ, ಅಕ್ಷರ ದಾಸೋಹ ನೀಡಿದ ಕೀರ್ತಿ ನಮ್ಮ ಮಠಗಳು ವಹಿಸಿಕೊಂಡಿದೆ, ವೀರಬಸವ ದೇವರು ಪ್ರಸಾದ ನಿಲಯ ಉದ್ಘಾಟನೆ ಮಾಡುವ ಮೂಲಕ ಸಮಾಜದ ಸೇವೆಯಲ್ಲಿ ನಾನು ಸದಾಸಿದ್ದ ಎನ್ನುವಂತಹ ಸಂದೇಶವನ್ನು ನೀಡಿದ್ದಾರೆ, ನಾವು ನಮ್ಮ ಸಂಪ್ರದಾಯವನ್ನು ನಮ್ಮ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ, ಈ ಆಧುನಿಕತೆಯಲ್ಲಿ ನಾವು ಸಾಮರಸ್ಯ ಬದುಕು ಸಾಗಿಸಲು ಜಾತಿ ಭೇದ ಭಾವ ಮರೆತು ನಡೆದಾಗ ಮಾತ್ರ ಸಾಧ್ಯ ಎಂದರು.
ವೆಂಕಣ್ಣ ಕರಡ್ಡಿ ಮಾತನಾಡಿ ಶ್ರೀ ಮಠದ ಪ್ರಸಾದ ನಿಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನನ್ನ ಪುಣ್ಯ,ವೀರ ಬಸವ ದೇವರು ಮಠದ ಭಕ್ತಾಧಿಗಳಿಗೆ ಪ್ರಸಾದದ ವ್ಯವಸ್ಥೆ ಮಾಡಿದ್ದಾರೆ, ಪಂಚಗ್ರಹ ಹಿರೇಮಠವು ಸಹ ಭಾವೈಕ್ಯತೆಯ ಮಠವಾಗಿ ಬೆಳೆಯಲಿ ಎಂದರು.
ಶ್ರೀಶೈಲ ಮೂಲಿಮನಿ ಮಾತನಾಡಿ ಅಜ್ಜನವರ ಎಷ್ಟೋ ದಿನದ ಕನಸು ಇಂದು ನನಸು ಆಗಿದೆ, ವೀರಬಸವದೇವರು ಅತೀ ಚಿಕ್ಕವಯಸ್ಸಿನಲ್ಲಿಯೇ ಇಷ್ಟು ಸಾಧನೆ ಮಾಡಿದ್ದಾರೆ, ಅವರ ಅವಧಿಯಲ್ಲಿ ಇನ್ನು ಸಾಕಷ್ಟು ಕಾರ್ಯಗಳು ನಡೆಯಲಿ ಅದಕ್ಕೆ ನಮ್ಮ ಸಹಕಾರ ಯಾವತ್ತು ಇರುತ್ತೆ ಎಂದರು.

“ಈ ವೇಳೆ ಶಿರಹಟ್ಟಿಯ ಶ್ರೀ ಫಕ್ಕಿರೇಶ ಸಿದ್ದರಾಮದೇವರ ಪಾದ ಪೂಜೆ ನಡೆಯಿತು, ನೂತನ ಪ್ರಸಾದ ನಿಲಯಕ್ಕೆ ದೇಣಿಗೆ ನೀಡಿದ ಭಕ್ತರಿಗೆ ಪೂಜ್ಯರಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ ಪಂಚಗ್ರಹ ಹಿರೇಮಠದ ಹಿರಿಯ ಗುರುಗಳಾದ ಷ.ಬ್ರ ಶ್ರೀ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ನೂತನ ಪೀಠಾಧಿಕಾರಿ ಶ್ರೀ ವೀರಬಸವ ದೇವರು, ಸಿ.ಪಿ.ಐ ರವಿಕುಮಾರ ಕಪ್ಪತ್ತನವರ, ಅಬ್ಬಾಸಲಿ ದೇವರಿಡು, ಮಹೇಶ ಹಳ್ಳದ, ಜಯಕಾಂತ ನಿಡವಣಿ, ವೀರಯ್ಯ ಜಾವೂರಮಠ, ಕೊಟ್ರೇಶ ಹಿರೇಮಠ, ಶರ್ಮಾಜಿ ಹಿರೇಮಠ, ಬಸುರಾಜ ಕೇರಿಮಠ, ಶಿದ್ಲಿಂಗಯ್ಯ ಹಿರೇಮಠ, ಎಂ. ಡಿ ಕುಲಕರ್ಣಿ, ಮಹಾಂತೇಶ ಕುಲಕರ್ಣಿ, ಅಡಿವೆಪ್ಪ ಶಿರಸಂಗಿ, ಯಲ್ಲಪ್ಪ ಭೋವಿ, ಈರಣ್ಣ ಪೂಜಾರ, ಸೇರಿದಂತೆ ತಾಲೂಕಿನ ಮಠದ ಸದ್ಭಕ್ತರು, ಉಪಸ್ಥಿತರಿದ್ದರು

