
ಧಾರವಾಡ: ಕುಂದಗೋಳ ತಾಲ್ಲೂಕಿನ ಬಸಾಪುರ (ಗೌಡಗಟ್ಟಿ) ಗ್ರಾಮದ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವವು ಆಗಸ್ಟ್ 18ರಂದು ಭಕ್ತಿ, ಸಡಗರದಿಂದ ನಡೆಯಲಿದೆ.
ಜಾತ್ರಾ ಮಹೋತ್ಸವದ ಅಂಗವಾಗಿ ಶ್ರಾವಣ ಮಾಸದ ನಿಮಿತ್ತ ನಿರಂತರ ರುದ್ರಾಭಿಷೇಕ, ಎಲೆ ಪೂಜೆ, ಬುತ್ತಿ ಪೂಜೆ, ಬೆಣ್ಣೆ ಪೂಜೆ, ಬಾಳೆಹಣ್ಣಿನ ಪೂಜೆ ಹಾಗೂ ಗಂಧದ ಅಲಂಕಾರದಂತಹ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಈಗಾಗಲೇ ನಡೆಸಲಾಗಿದೆ.
ಸಾಂಪ್ರದಾಯಿಕ ಮೆರವಣಿಗೆ
ಆಗಸ್ಟ್ 18ರಂದು ಶಿರೂರು ಗ್ರಾಮದಿಂದ ಹೊರಡುವ ನಂದಿಕೋಲು ಪಲ್ಲಕ್ಕಿಯಲ್ಲಿ ಶ್ರೀ ಬಸವಣ್ಣನವರ ಮೂರ್ತಿಯನ್ನು ಭಕ್ತರು ಹೊತ್ತು ಬಸಾಪುರ ಗ್ರಾಮಕ್ಕೆ ಬರಲಿದ್ದಾರೆ. ಇದೇ ರೀತಿ, ಬಸಾಪುರ ಗ್ರಾಮದ ಭಕ್ತರು ಕೂಡ ಪಲ್ಲಕ್ಕಿಯನ್ನು ಸಿದ್ಧಪಡಿಸಿ ಭಜನೆಗಳನ್ನು ಹಾಡುತ್ತ ಮೆರವಣಿಗೆ ಮೂಲಕ ಜಾತ್ರೆಗೆ ವಿಶೇಷ ಕಳೆ ತರಲಿದ್ದಾರೆ.
ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ಈ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಬೇಕೆಂದು ಅರ್ಚಕರಾದ ಶಿವಕುಮಾರ ಸ್ವಾಮಿ, ಮತ್ತು ವನಹಳ್ಳಿಮಠ, ಅವರು ಕೋರಿದ್ದಾರೆ.

