
ಹುಬ್ಬಳ್ಳಿ: ಕೂಡಲಸಂಗಮ ಪೀಠದ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿಗಳ ದಿವ್ಯ ನೇತೃತ್ವದಲ್ಲಿ, ಹುಬ್ಬಳ್ಳಿಯಲ್ಲಿ ಕಿತ್ತೂರು ರಾಣಿ ಚನ್ನಮ್ಮ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ, ಪಂಚಸೇನಾ ಮತ್ತು ಪಂಚಮಸಾಲಿ ವಕೀಲರ ಪರಿಷತ್‌ನ ವತಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸ್ವಾಮೀಜಿಗಳು ರಾಣಿ ಚನ್ನಮ್ಮನವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಅಲ್ಲದೆ, ಸಾರ್ವಜನಿಕರಿಗೆ ಸಿಹಿ ವಿತರಿಸುವ ಮೂಲಕ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಹಾಸಭಾದ ಮತ್ತು ಇತರ ಘಟಕಗಳ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು. ಹುಬ್ಬಳ್ಳಿ ಶಹರ ಅಧ್ಯಕ್ಷರು ರಾಜು ಕೋಟಗಿ, ವಕೀಲರ ಪರಿಷತ್ ಅಧ್ಯಕ್ಷರು ಶ್ರೀ ಎಸ್. ಎಸ್. ನಾಗನಗೌಡರ, ಶಶಿಶೇಖರ ಡಂಗನವರ, ಜಗನ್ನಾಥ ಸಿದ್ದನಗೌಡರ, ಗುರು ಕೆಲಗೇರಿ, ವಿ. ಎಸ್. ಕಂಟೆಪ್ಪಗೌಡರ, ನಾಗರಾಜ ದೇಶಪಾಂಡೆ, ಶಂಕರ ಮಾಲಕನ್ನವರ, ಸುರೇಶ್ ಪಲ್ಲೇದ, ಪ್ರಭು ನರಗುಂದ, ರವಿರಾಜ ಕೊಡಲಿ, ಈಶ್ವರ ಶಿರಸಂಗಿ ಸೇರಿದಂತೆ ವಿವಿಧ ಘಟಕಗಳ ಇತರ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಕಿತ್ತೂರು ರಾಣಿ ಚನ್ನಮ್ಮನವರ ದೇಶಪ್ರೇಮ ಮತ್ತು ತ್ಯಾಗವನ್ನು ಸ್ಮರಿಸುವ ಮೂಲಕ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.

