​ಅಖಿಲ ಭಾರತ ಮಹಾಪೌರರ ಮಂಡಳಿ ಉಪಾಧ್ಯಕ್ಷರಾಗಿ ಜ್ಯೋತಿ ಪಾಟೀಲ್ ನೇಮಕ

Spread the love

ಅವಳಿನಗರದ ಪ್ರಥಮ ಪ್ರಜೆಯ ಕಾರ್ಯತತ್ಪರತೆಗೆ ಒಲಿದ ಅಪೂರ್ವ ಅವಕಾಶ

ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಪ್ರಥಮ ಪ್ರಜೆ ಜ್ಯೋತಿ ಪಾಟೀಲ್ ಅವರು ಅಖಿಲ ಭಾರತ ಮಹಾಪೌರರ ಮಂಡಳಿಯ (ಆಲ್ ಇಂಡಿಯಾ ಕೌನ್ಸಿಲ್ ಆಫ್ ಮೇಯರ್ಸ್) ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

​ಈ ನೇಮಕವನ್ನು ಮಹಾಪೌರರ ಮಂಡಳಿಯ ನೂತನ ಅಧ್ಯಕ್ಷರಾದ ರೇಣು ಬಾಲಾ ಗುಪ್ತಾ ಅವರು ಪ್ರಕಟಿಸಿದ್ದಾರೆ ಎಂದು ಮಂಡಳಿಯ ಕಾರ್ಯದರ್ಶಿ ಮನೋಜ್ ಗುಪ್ತಾ ತಿಳಿಸಿದ್ದಾರೆ.

​ಮಹಾಪೌರರಾಗಿ ಅಧಿಕಾರ ಸ್ವೀಕರಿಸಿದ ಅಲ್ಪ ಅವಧಿಯಲ್ಲೇ ಜ್ಯೋತಿ ಪಾಟೀಲ್ ಅವರು ಅವಳಿನಗರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಭರವಸೆ ಹುಟ್ಟಿಸುವಂತಹ ಕಾರ್ಯತತ್ಪರತೆಯನ್ನು ಅವರು ಪ್ರದರ್ಶಿಸಿದ್ದಾರೆ. ಅವರ ಈ ಕಾರ್ಯವೈಖರಿ ಮತ್ತು ಬದ್ಧತೆಗೆ ಪ್ರತಿಯಾಗಿ ಈ ಅಪೂರ್ವ ಅವಕಾಶ ಅರಸಿ ಬಂದಿದೆ ಎನ್ನಲಾಗಿದೆ.

​ಜ್ಯೋತಿ ಪಾಟೀಲ್ ಅವರ ಈ ಪ್ರತಿಷ್ಠಿತ ನೇಮಕಕ್ಕೆ ಉಪ ಮಹಾಪೌರ ಸಂತೋಷ ಚೌಹಾಣ್ ಸೇರಿದಂತೆ ಮಹಾನಗರ ಪಾಲಿಕೆಯ ಎಲ್ಲ ಸದಸ್ಯರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *