
ಧಾರವಾಡ: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ (MSP) 2025-26ನೇ ಸಾಲಿನಲ್ಲಿ ಹೆಸರು ಕಾಳು ಮತ್ತು ಉದ್ದಿನ ಕಾಳು ಖರೀದಿಗೆ ಜಿಲ್ಲೆಯಾದ್ಯಂತ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಧಾರವಾಡ ಜಿಲ್ಲೆಯ ರೈತರಿಗೆ ಮಾತ್ರ ಈ ಯೋಜನೆಯಡಿ ತಮ್ಮ ಎಫ್.ಎ.ಕ್ಯೂ. (FAQ) ಗುಣಮಟ್ಟದ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶವಿದೆ. ಜಿಲ್ಲೆಯ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಟಾಸ್ಕ್‌ಪೋರ್ಸ್ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.
ಪ್ರತಿ ಕ್ವಿಂಟಾಲ್‌ಗೆ ಬೆಂಬಲ ಬೆಲೆ ವಿವರ
ಸರ್ಕಾರವು ಹೆಸರು ಕಾಳು ಉತ್ಪನ್ನಕ್ಕೆ ಪ್ರತಿ ಕ್ವಿಂಟಾಲ್‌ಗೆ ₹ 8,768 ಮತ್ತು ಉದ್ದಿನ ಕಾಳು ಉತ್ಪನ್ನಕ್ಕೆ ಪ್ರತಿ ಕ್ವಿಂಟಾಲ್‌ಗೆ ₹ 7,800 ರಂತೆ ಬೆಂಬಲ ಬೆಲೆ ನಿಗದಿಪಡಿಸಿದೆ. ರೈತರಿಗೆ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಸಂಸ್ಥೆಯವರು ನೀಡುವ ಗೋಣಿ ಚೀಲದಲ್ಲಿ 50 ಕೆ.ಜಿ. ಪ್ರಮಾಣದಲ್ಲಿ ತುಂಬಬೇಕು. ಹೆಸರುಕಾಳನ್ನು ಪ್ರತಿ ಎಕರೆಗೆ 3 ಕ್ವಿಂಟಾಲ್‌ನಂತೆ ಹಾಗೂ ಪ್ರತಿ ರೈತರಿಂದ ಗರಿಷ್ಠ 15 ಕ್ವಿಂಟಾಲ್ ವರೆಗೆ ಖರೀದಿಸಲಾಗುವುದು.
ನೋಂದಣಿ ಮತ್ತು ಖರೀದಿಯ ಅವಧಿ
ಬೆಂಬಲ ಬೆಲೆ ಯೋಜನೆಯಡಿ ಹೆಸರುಕಾಳು ಮತ್ತು ಉದ್ದಿನಕಾಳು ಉತ್ಪನ್ನ ಖರೀದಿಗೆ ರೈತರ ನೋಂದಣಿಯು ಸೆಪ್ಟೆಂಬರ್ 25, 2025 ರಿಂದ ಡಿಸೆಂಬರ್ 13, 2025 ರವರೆಗೆ (80 ದಿನಗಳು) ನಡೆಯಲಿದೆ. ಉತ್ಪನ್ನಗಳ ಖರೀದಿ ಅವಧಿಯು ಸಹ ಸೆಪ್ಟೆಂಬರ್ 25, 2025 ರಿಂದ ಡಿಸೆಂಬರ್ 23, 2025 ರವರೆಗೆ (90 ದಿನಗಳು) ನಡೆಯುತ್ತದೆ. ಸರ್ಕಾರಿ ರಜೆ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ಮಾತ್ರ ಖರೀದಿ ಪ್ರಕ್ರಿಯೆ ನಡೆಯಲಿದೆ.
ಖರೀದಿ ಕೇಂದ್ರಗಳ ವಿವರ ಮತ್ತು ಸಂಪರ್ಕ ಸಂಖ್ಯೆಗಳು
ಹೆಸರುಕಾಳು ಖರೀದಿ ಕೇಂದ್ರಗಳು:
ತಾಲೂಕು ಖರೀದಿ ಸಂಸ್ಥೆ (ಸಂಪರ್ಕ ಸಂಖ್ಯೆ)
ಧಾರವಾಡ ಟಿ.ಎ.ಪಿ.ಸಿ.ಎಮ್.ಎಸ್. (9916259625), ಉಪ್ಪಿನ ಬೆಟಗೇರಿ ಪಿ.ಕೆ.ಪಿ.ಎಸ್. (9620048221), ಹೆಬ್ಬಳ್ಳಿ ಪಿ.ಕೆ.ಪಿ.ಎಸ್. (9448424876)
ಹುಬ್ಬಳ್ಳಿ ಟಿ.ಎ.ಪಿ.ಸಿ.ಎಮ್.ಎಸ್. (6360506861), ಬ್ಯಾಹಟ್ಟಿ ಪಿ.ಕೆ.ಪಿ.ಎಸ್. (9986211378), ಹೆಬಸೂರ ಪಿ.ಕೆ.ಪಿ.ಎಸ್. (9945894870), ಕೋಳಿವಾಡ ನಂ-1 ಪಿ.ಕೆ.ಪಿ.ಎಸ್. (9945846878), ನೂಲ್ವಿ ಪಿ.ಕೆ.ಪಿ.ಎಸ್. (9743836535)
ನವಲಗುಂದ ಹೆಬ್ಬಾಳ ಪಿ.ಕೆ.ಪಿ.ಎಸ್. (9449065613), ತಿರ್ಲಾಪೂರ ಪಿ.ಕೆ.ಪಿ.ಎಸ್. (8494801475), ಆರೇಕುರಹಟ್ಟಿ ಪಿ.ಕೆ.ಪಿ.ಎಸ್. (9845822903), ಶಿರೂರ, ಮೊರಬ ಎಫ್.ಪಿ.ಓ. (9900189128), ಮೊರಬ ಕೆ.ಎಸ್.ಎಫ್.ಪಿ.ಓ. (9620107330), ಮೊರಬ ಪಿ.ಕೆ.ಪಿ.ಎಸ್. (8431012192), ಹಾಲಕುಸುಗಲ್ ಪಿ.ಕೆ.ಪಿ.ಎಸ್. (8123836380), ನವಲಗುಂದ ಪಿ.ಕೆ.ಪಿ.ಎಸ್. (9886491644), ಅಣ್ಣಿಗೇರಿ ಟಿ.ಎ.ಪಿ.ಸಿ.ಎಮ್.ಎಸ್. (8861008191), ಶಿರಕೋಳ ಪಿ.ಕೆ.ಪಿ.ಎಸ್. (8150834048)
ಅಣ್ಣಿಗೇರಿ ಅಣ್ಣಿಗೇರಿ ಪಿ.ಕೆ.ಪಿ.ಎಸ್. (7760184669), ಅಣ್ಣಿಗೇರಿ ಟಿ.ಎ.ಪಿ.ಸಿ.ಎಮ್.ಎಸ್. (8861008191)
ಕುಂದಗೋಳ ಯಳಿವಾಳ ಪಿ.ಕೆ.ಪಿ.ಎಸ್. (9945163891), ಯರಗುಪ್ಪಿ ಪಿ.ಕೆ.ಪಿ.ಎಸ್. (9845169206)
ಉದ್ದಿನಕಾಳು ಖರೀದಿ ಕೇಂದ್ರಗಳು:
ತಾಲೂಕು ಖರೀದಿ ಸಂಸ್ಥೆ (ಸಂಪರ್ಕ ಸಂಖ್ಯೆ)
ಧಾರವಾಡ ಟಿ.ಎ.ಪಿ.ಸಿ.ಎಮ್.ಎಸ್. (9916259625), ಉಪ್ಪಿನಬೇಟಗೇರಿ ಪಿ.ಕೆ.ಪಿ.ಎಸ್. (9620048221)
ಹುಬ್ಬಳ್ಳಿ ಟಿ.ಎ.ಪಿ.ಸಿ.ಎಮ್.ಎಸ್. (6360506861)
ಕುಂದಗೋಳ ಯರಗುಪ್ಪಿ ಪಿ.ಕೆ.ಪಿ.ಎಸ್. (9845169206)
ನವಲಗುಂದ ನವಲಗುಂದ ಪಿ.ಕೆ.ಪಿ.ಎಸ್. (9886491644), ಅಣ್ಣಿಗೇರಿ ಟಿ.ಎ.ಪಿ.ಸಿ.ಎಮ್.ಎಸ್. (8861008191)
ದಾಖಲೆಗಳು ಮತ್ತು ಗುಣಮಟ್ಟದ ಮಾನದಂಡಗಳು
ಖರೀದಿಗೆ ನೋಂದಾಯಿಸಲು ಆಧಾರ್ ಗುರುತಿನ ಚೀಟಿಯ ಮೂಲ ಮತ್ತು ನಕಲು ಪ್ರತಿ, ಹಾಗೂ ಪಹಣಿ ಪತ್ರಿಕೆಯಲ್ಲಿರುವ ಹೆಸರಿನ ರೈತರ ಆಧಾರ್ ಜೋಡಣೆಗೊಂಡ ಬ್ಯಾಂಕ್ ಖಾತೆ ಪಾಸ್‌ಪುಸ್ತಕದ ನಕಲು ಪ್ರತಿ ಕಡ್ಡಾಯ.
ಉತ್ಪನ್ನದ ಗುಣಮಟ್ಟ: ಉತ್ಪನ್ನಗಳು ಚೆನ್ನಾಗಿ ಒಣಗಿರಬೇಕು, ತೇವಾಂಶ ಶೇ.12 ಕ್ಕಿಂತ ಕಡಿಮೆ ಇರಬೇಕು. ಕಾಳುಗಳು ಗುಣಮಟ್ಟದ ಗಾತ್ರ, ಬಣ್ಣ ಮತ್ತು ಆಕಾರ ಹೊಂದಿದ್ದು, ಗಟ್ಟಿಯಾಗಿ, ಮಣ್ಣಿನಿಂದ ಬೇರ್ಪಡಿಸಲ್ಪಟ್ಟು ಸ್ವಚ್ಛವಾಗಿ, ಕ್ರಿಮಿಕೀಟಗಳಿಂದ ಮುಕ್ತವಾಗಿರಬೇಕು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು, ರೈತರು ಯಾವುದೇ ಕಾರಣಕ್ಕೂ ಮಧ್ಯವರ್ತಿಗಳ ಮೊರೆ ಹೋಗಬಾರದು ಮತ್ತು ಯೋಜನೆಯ ಉಪಯೋಗವನ್ನು ನೇರವಾಗಿ ಪಡೆಯಬೇಕು ಎಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ, ಸಂಬಂಧಿಸಿದ ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಅಥವಾ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ (ಕೆಎಸ್‍ಸಿಎಮ್‍ಎಫ್) ಹುಬ್ಬಳ್ಳಿ ಶಾಖಾ ವ್ಯವಸ್ಥಾಪಕರನ್ನು (ದೂರವಾಣಿ ಸಂಖ್ಯೆ: 0836-2004419) ಸಂಪರ್ಕಿಸಬಹುದಾಗಿದೆ.

