ಧಾರವಾಡದ ಶಿವಲೀಲಾ ವಿ. ಕುಲಕರ್ಣಿ ಸೇರಿದಂತೆ 39 ನಿಗಮ-ಮಂಡಳಿ ಅಧ್ಯಕ್ಷರ ನೇಮಕ: ಆದೇಶ ಹೊರಡಿಸಿದ ಕಾಂಗ್ರೆಸ್ ಸರ್ಕಾರ

Spread the love

ಬೆಂಗಳೂರು: ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿದ್ದ ರಾಜ್ಯದ ವಿವಿಧ ನಿಗಮ ಮತ್ತು ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿಯನ್ನು ಕಾಂಗ್ರೆಸ್ ಸರ್ಕಾರ ಅಂತಿಮಗೊಳಿಸಿದೆ. ಹೈಕಮಾಂಡ್‌ನ ಅನುಮೋದನೆಯೊಂದಿಗೆ ಇಂದು (ಸೆಪ್ಟೆಂಬರ್ 24) ಒಟ್ಟು 39 ಅಧ್ಯಕ್ಷರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಅಧಿಕೃತ ಆದೇಶವನ್ನು ಹೊರಡಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಿಡಬ್ಲ್ಯೂಸಿ ಸಭೆಗೆ ಬಿಹಾರಕ್ಕೆ ತೆರಳಿದ ಸಂದರ್ಭದಲ್ಲೇ ಈ ಮಹತ್ವದ ಬೆಳವಣಿಗೆ ನಡೆದಿದೆ.

ಈ ಪಟ್ಟಿಯಲ್ಲಿ, ಧಾರವಾಡ ಜಿಲ್ಲೆಯವರಿಗೆ ಸಂತಸ ತಂದಿರುವ ಸುದ್ದಿಯಿದೆ. ಪ್ರಕರಣವೊಂದರಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಶಾಸಕ ವಿನಯ್ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಅವರಿಗೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಈ ನೇಮಕಾತಿಯು ರಾಜಕೀಯ ವಲಯದಲ್ಲಿ ವಿಶೇಷ ಗಮನ ಸೆಳೆದಿದೆ.

ಇತ್ತೀಚೆಗೆ ದೆಹಲಿಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರ ಸಭೆಯಲ್ಲಿ ಈ ಕುರಿತು ವಿಸ್ತೃತ ಚರ್ಚೆಗಳು ನಡೆದಿದ್ದವು. ಈ ಚರ್ಚೆಗಳ ಫಲವಾಗಿ ಈಗ ಎಲ್ಲ ಗೊಂದಲಗಳಿಗೆ ತೆರೆ ಬಿದ್ದಿದ್ದು, ನೂತನ ಅಧ್ಯಕ್ಷರ ಅಧಿಕೃತ ಪಟ್ಟಿ ಹೊರಬಿದ್ದಿದೆ. ಈ ನೇಮಕಾತಿಗಳು ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ತುಂಬಲು ಮತ್ತು ಆಡಳಿತ ಯಂತ್ರವನ್ನು ಮತ್ತಷ್ಟು ಚುರುಕುಗೊಳಿಸಲು ಸಹಕಾರಿಯಾಗಲಿದೆ ಎಂದು ವಿಶ್ಲೇಷಿಸಲಾಗಿದೆ.

ಯಾರಿಗೆ ಯಾವ ನಿಗಮ/ಮಂಡಳಿ? ಸಂಪೂರ್ಣ ಪಟ್ಟಿ ಇಲ್ಲಿದೆ:

ಶಿವಲೀಲಾ ಕುಲಕರ್ಣಿ: ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ

ಪಿ. ರಘು: ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ

ಅರುಣ್ ಪಾಟೀಲ್: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ

ಜಗದೀಶ್ ವೊಟ್ಬಾಳ್: ಕರ್ನಾಟಕ ಜೈವಿಕ ವೈವಿಧ್ಯ ಮಂಡಳಿ

ಡಾ. ಮೂರ್ತಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗ

ಕರ್ನಲ್ ಮಲ್ಲಿಕಾರ್ಜುನ್: ಮಾಜಿ ಸೈನಿಕರ ಕಲ್ಯಾಣ ಮಂಡಳಿ

ಡಾ. ಬಿ.ಸಿ. ಮುದ್ದುಗಂಗಾಧರ್: ಕರ್ನಾಟಕ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ

ಶರ್ಲೆಟ್ ಪಿಂಟೋ: ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ

ಮರಿಯೋಜಿ ರಾವ್: ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ

ಎಂ.ಎ. ಗಫೂರ್: ಕರಾವಳಿ ಅಭಿವೃದ್ಧಿ ಪ್ರಾಧಿಕಾರ

ಕೆ. ಹರೀಶ್ ಕುಮಾರ್: ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (MESCOM)

ಎನ್. ಸಂಪಂಗಿ: ಕರ್ನಾಟಕ ಗೋದಾಮು ನಿಗಮ

ವೈ. ಸಯೀದ್ ಅಹಮದ್‌: ದೇವರಾಜ ಅರಸ್ ಟ್ರಕ್ ಟರ್ಮಿನಲ್

ಮಹೇಶ್: ಕಾಡುಗೊಲ್ಲ ಅಭಿವೃದ್ಧಿ ನಿಗಮ

ಮಂಜಪ್ಪ: ಬಯಲುಸೀಮೆ ಅಭಿವೃದ್ಧಿ ಮಂಡಳಿ

ಧರ್ಮಣ್ಣ ಉಪ್ಪಾರ: ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ

ಅಗಾ ಸುಲ್ತಾನ್: ಸೆಂಟ್ರಲ್ ರಿಲೀಫ್ ಕಮಿಟಿ

ಎಸ್.ಜಿ. ನಂಜಯ್ಯ ಮಠ: ಕರ್ನಾಟಕ ಸ್ಟೇಟ್ ಇಂಡಸ್ಟ್ರಿಯಲ್ ಅಂಡ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಕಾರ್ಪೊರೇಷನ್

ಆಂಜಪ್ಪ: ಕರ್ನಾಟಕ ಸೀಡ್ಸ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್

ನೀಲಕಂಠ ಮುಲೆ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ

ಬಾಬು ಹೊನ್ನ ನಾಯ್ಕ: ಕಮಾಂಡ್ ಏರಿಯಾ ಡೆವಲಪ್‌ಮೆಂಟ್ ಅಥಾರಿಟಿ (ಭದ್ರಾ, ಹಗರಿಬೊಮ್ಮನಹಳ್ಳಿ, ಕಲಬುರ್ಗಿ)

ಯುವರಾಜ್ ಕದಮ್: ಮಲಪ್ರಭಾ ಮತ್ತು ಘಟಪ್ರಭಾ ಪ್ರಾಜೆಕ್ಟ್ ಕಮಾಂಡ್ ಏರಿಯಾ ಡೆವಲಪ್‌ಮೆಂಟ್ ಅಥಾರಿಟಿ (ಬೆಳಗಾವಿ)

ಜಮಾದಾರ್ ಅನಿಲ್ ಕುಮಾರ್: ಕರ್ನಾಟಕ ತೂರ್ ದಾಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್ (ಕಲಬುರ್ಗಿ)

ಪ್ರವೀಣ್ ಹರ್ವಾಲ್: ಗುಲ್ಬರ್ಗಾ ಎಲೆಕ್ಟ್ರಿಸಿಟಿ ಸಪ್ಲೈ ಕಂಪನಿ (GESCOM)

ಮಂಜುನಾಥ್ ಪೂಜಾರಿ: ಶ್ರೀ ನಾರಾಯಣ ಗುರು ಡೆವಲಪ್‌ಮೆಂಟ್ ಕಾರ್ಪೊರೇಷನ್

ಸೈಯದ್‌ ಮೆಹಮೂದ್ ಚಿಸ್ತಿ: ಕರ್ನಾಟಕ ಸ್ಟೇಟ್ ಪಲ್ಸಸ್ ಅಭಿವೃದ್ಧಿ ಮಂಡಳಿ ಲಿಮಿಟೆಡ್

ಎಂ.ಎಸ್. ಮುತ್ತುರಾಜ್: ಕರ್ನಾಟಕ ಸವಿತಾ ಸಮಾಜ ಡೆವಲಪ್‌ಮೆಂಟ್ ಕಾರ್ಪೊರೇಷನ್

ನಂಜಪ್ಪ: ಕರ್ನಾಟಕ ಮಡಿವಾಳ ಮಾಚಿ ದೇವ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್

ವಿಶ್ವಾಸ ದಾಸ್: ಕರ್ನಾಟಕ ಗಾಣಿಗ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್

ಆರ್. ಸತ್ಯನಾರಾಯಣ: ಕರ್ನಾಟಕ ಸ್ಟೇಟ್ ಟೆಂಪರೆನ್ಸ್ ಬೋರ್ಡ್

ಗಂಗಾಧರ್: ಕರ್ನಾಟಕ ಸಿಲ್ಕ್ ಮಾರ್ಕೆಟಿಂಗ್ ಬೋರ್ಡ್ ಲಿಮಿಟೆಡ್

ಶಿವಪ್ಪ: ಹಾಸನ ಅರ್ಬನ್ ಡೆವಲಪ್‌ಮೆಂಟ್ ಅಥಾರಿಟಿ

ಬಿ.ಎಸ್. ಕವಲಗಿ: ಕರ್ನಾಟಕ ಲೈಮ್ ಡೆವಲಪ್‌ಮೆಂಟ್ ಬೋರ್ಡ್

ಶ್ರೀನಿವಾಸ ವೇಲು: ಕುಂಬಾರ ಡೆವಲಪ್‌ಮೆಂಟ್ ಕಾರ್ಪೊರೇಷನ್

ಟಿ.ಎಂ. ಶಾಹೀದ್ ತಕ್ಕಿಲ್: ಕರ್ನಾಟಕ ಸ್ಟೇಟ್ ಮಿನಿಮಮ್ ವೇಜ್ ಬೋರ್ಡ್

ಚೇತನ್ ಕೆ. ಗೌಡ: ಕರ್ನಾಟಕ ಸ್ಟೇಟ್ ಹ್ಯಾಂಡ್‌ಲೂಮ್ಸ್ ಇನ್‌ಫ್ರಾಸ್ಟ್ರಕ್ಚರ್ (ಪವರ್ ಲೂಮ್ಸ್) ಬೋರ್ಡ್

ಶರಣಪ್ಪ ಸಾರದ್ದು: ಕರ್ನಾಟಕ ಸ್ಟೇಟ್ ಅಗ್ರಿಕಲ್ಚರಲ್ ಪ್ರೊಡ್ಯೂಸ್ ಪ್ರೊಸೆಸಿಂಗ್ ಅಂಡ್ ಎಕ್ಸ್‌ಪೋರ್ಟ್ ಬೋರ್ಡ್

ಲಾವಣ್ಯ ಬಲ್ಲಾಳ್ ಜೈನ್: ಕರ್ನಾಟಕ ಸ್ಟೇಟ್ ಸೀಡ್ ಅಂಡ್ ಆರ್ಗಾನಿಕ್ ಸರ್ಟಿಫಿಕೇಶನ್ ಏಜೆನ್ಸಿ

ಹೀಗೆ ಒಟ್ಟು 39 ನಿಗಮ-ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.

Leave a Reply

Your email address will not be published. Required fields are marked *