ಕುಂದಗೋಳ ತಾಲ್ಲೂಕು ಆಸ್ಪತ್ರೆಗೆ ನ್ಯಾಯಾಧೀಶರ ಭೇಟಿ, ಪರಿಶೀಲನೆ

Spread the love

ಸರಕಾರಿ ಆಸ್ಪತ್ರೆಗೆ ನ್ಯಾಯಾಧೀಶರ ಬೇಟಿ: ಪರಿಶೀಲನೆ

ಧಾರವಾಡ:ಜಿಲ್ಲಾ ಕುಂದಗೋಳ ಪಟ್ಟಣದ ಸಾರ್ವಜನಿಕ ಸರಕಾರಿ ಆಸ್ಪತ್ರೆ ಹಾಗೂ ಸ್ಥಳಿಯ ಪೋಲೀಸ್ ಠಾಣೆಗೆ ಬೇಟಿ‌ ನೀಡಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅದ್ಯಕ್ಷರು ಹಾಗೂ ಜಿಲ್ಲಾ ಸಿವಿಲ್ ಹಿರಿಯ ನ್ಯಾಯಾಧೀಶರಾದ ಪರಶುರಾಮ ಎಪ್.ದೊಡ್ಡಮನಿ‌ ಅಲ್ಲಿನ ಕುಂದು,ಕೊರತೆ ಪರಿಶೀಲನೆ‌‌ ನಡೆಸಿದರು.

ಪಟ್ಟಣದ ಜೆಎಂಎಪ್ ಸಿ ನ್ಯಾಯಾಲಯದಲ್ಲಿ ಗುರುವಾರ ಜರುಗಿದ ಕಾನೂನು‌ ನೆರವು ಕಾರ್ಯಕ್ರಮದಲ್ಲಿ ಬಾಗವಹಿಸಿದ ನಂತರ ದಿಡೀರನೇ  ಆಸ್ಪತ್ರೆ ಗೆ ತೆರಳಿದ ನ್ಯಾಯಾಧೀಶರು,ರೋಗಿಗಳಿಂದ ಚಿಕಿತ್ಸೆಯ ಕುರಿತಾಗಿ ಮಾಹಿತಿ ಪಡೆದರು. ಇದೇ ವೇಳೆ ಒಂಬತ್ತು ತಿಂಗಳ ಕಾಲ ಸ್ತ್ರೀರೋಗ ತಜ್ಞೆ ಶಾರದಾ ಕಮತರ ಅನಧಿಕೃತವಾಗಿ ಗೈರಾಗಿದ್ದು ಇದರಿಂದ ಗರ್ಬಿಣಿಯರಿಗೆ,ಮಹಿಳಾ ರೋಗಿಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ  ವಿಷಯ ತಿಳಿದು ಕೂಡಲೇ ಜಿಲ್ಲಾ ಆರೋಗ್ಯಾಧಿಕಾರಿಗಳ ಸ್ಪಷ್ಟನೆ ಪಡೆಯುವುದಾಗಿ ತಿಳಿಸಿದರು. 

ಗೈರಾಗಿರುವ ಮಾಹಿತಿಯನ್ನು ಅಧಿಕೃತವಾಗಿ ತಿಳಿಸದೇ ಇರುವುದರಿಂದ ಹೊಸದಾಗಿ ವೈದ್ಯರನ್ನು‌ ನೇಮಿಸಿಕೊಳ್ಳಲು ಅಸಾದ್ಯವಾಗಿದ್ದು,ಈ ರೀತಿ ವೈದ್ಯೆಯ‌ ನಡಾವಳಿ ಕುರಿತು ಡಿಎಚ್ ಓ‌,ಮಾಹಿತಿ ನೀಡಬೇಕಿದೆ.ಎಂದು ಹೇಳಿದರು.

ನಂತರ ತುರ್ತು ಚಿಕಿತ್ಸಾ ಘಟಕ,ಒಳ,ಹೊರ ರೋಗಿಗಳಿದ್ದ ಕೊಠಡಿಗಳಿಗೆ ತೆರಳಿ‌ಸಮಸ್ಯೆ ಆಲಿಸಿದರಲ್ಲದೇ ಈ ಕೂಡಲೇ ತಮ್ಮೆದುರಿಗೆ ಪ್ರಸ್ತಾಪವಾದ ಸಮಸ್ಯೆಗಳನ್ನು ಬಗೆ ಹರಿಸಲು ಸೂಚಿಸಿದರು.ಕಣ್ಣು ಚಿಕಿತ್ಸಾಲಯ ಕೊಠಡಿಗೆ ಬೇಟಿ‌ನೀಡಿ ಅಲ್ಲಿನ ವೈದ್ಯೆ ಜ್ಯೋತಿ ಬಡಿಗೇರ ಅವರಿಂದ ಮಾಹಿತಿ ಪಡೆದರು.

ನಂತರ ಪೋಲೀಸ್ ಠಾಣೆಗೆ ತೆರಳಿದ ನ್ಯಾಯಾಧೀಶರು  ಪ್ರಕರಣಗಳ ವಿಲೇವಾರಿ ಮಾಹಿತಿ ಪಡೆದರು.

Leave a Reply

Your email address will not be published. Required fields are marked *