
ಕುಂದಗೋಳ: ತಾಲ್ಲೂಕಿನ ಯಲಿವಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ಹಾಗೂ ಕುಂದಗೋಳದ ಕರ್ಮಣಿ ಮಹಿಳಾ ಸಾಂತ್ವನ ಕೇಂದ್ರದ ಸಹಯೋಗದಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ಮಂಗಳವಾರದಂದು ಪೋಕ್ಸೋ ಕಾಯ್ದೆ-2012 ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ, ಕರ್ಮಣಿ ಮಹಿಳಾ ಸಾಂತ್ವನ ಕೇಂದ್ರದ ನಿರ್ದೇಶಕರಾದ ಶ್ರೀ ಎನ್.ಬಿ. ಹೊಸಮನಿ ಅವರು ವಿದ್ಯಾರ್ಥಿಗಳಿಗೆ ಪೋಕ್ಸೋ ಕಾಯ್ದೆಯ ಮಹತ್ವ, ಅದರ ಜಾರಿ ಮತ್ತು ನೀತಿ-ನಿಯಮಗಳ ಕುರಿತು ತಿಳುವಳಿಕೆ ನೀಡಿದರು. ಮಕ್ಕಳ ಹಕ್ಕುಗಳು, ರಕ್ಷಣೆ ಮತ್ತು ಸಹಾಯವಾಣಿಗಳ ಬಗ್ಗೆಯೂ ಅವರು ಮಾಹಿತಿ ನೀಡಿದರು.
ವಿಜ್ಞಾನ ಶಿಕ್ಷಕಿ ಶ್ರೀಮತಿ ಅಶ್ವಿನಿ. ಕೆ ಅವರು ಅತಿಥಿಯಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಡಾ. ಕೊಟ್ರೇಶ್ವರಸ್ವಾಮಿ ಸುರಪುರಮಠ ವಹಿಸಿದ್ದರು.
ಈ ಸಂದರ್ಭದಲ್ಲಿ, ಸಾಮಾಜಿಕ ಕಾರ್ಯಕರ್ತರಾದ ಬಸಮ್ಮ ಮೊರಬದ, ಗೌರಮ್ಮ ಕೋಳಿವಾಡ, ಬೋಧಕ ಸಿಬ್ಬಂದಿಯವರಾದ ಕ್ಷೀರಸಾಗರ, ಮೀನಾಕ್ಷಿ ಜವಾಯಿ, ಅಕ್ಕಮ್ಮ, ಬಸವರಾಜ ಚಿಕ್ಕನರಗುಂದ ಮತ್ತು ಪ್ರಕಾಶ್ ಹಡಪದ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಿದ್ದಲಿಂಗಸ್ವಾಮಿ ಕೆಳದಿಮಠ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು, ಗಂಗಮ್ಮ ಹಿರೇಗೌಡ್ರು ವಂದಿಸಿದರು, ಮತ್ತು ಈಶ್ವರ್ ಶಿರಗುಪ್ಪಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಈ ಕಾರ್ಯಕ್ರಮವು ಪೋಕ್ಸೋ ಕಾಯ್ದೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಸಹಕಾರಿಯಾಯಿತು.

