
ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಳಸುವ ಸರ್ಕಾರಿ ವಾಹನವು ಸಂಚಾರ ನಿಯಮ ಉಲ್ಲಂಘಿಸಿ ದಂಡ ಪಾವತಿಸಬೇಕಾಗಿ ಬಂದಿದೆ.
ಸಾಮಾನ್ಯವಾಗಿ ವಿಐಪಿ ವಾಹನಗಳು ಝೀರೋ ಟ್ರಾಫಿಕ್ನಲ್ಲಿ ಸಂಚರಿಸುವುದರಿಂದ ಇಂತಹ ಘಟನೆಗಳು ಅಪರೂಪ. ಆದರೆ, ಬೆಂಗಳೂರಿನಲ್ಲಿ ಹೊಸದಾಗಿ ಅಳವಡಿಸಿರುವ ಕ್ಯಾಮರಾಗಳು ಈ ಮಾಹಿತಿಯನ್ನು ಬಹಿರಂಗಪಡಿಸಿವೆ.
ವರದಿಗಳ ಪ್ರಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯರವರ ಸರ್ಕಾರಿ ಕಾರು (ಕೆಎ-05, ಜಿಎ-2023) ಮೇಲೆ ಇದುವರೆಗೆ 8 ಪ್ರಕರಣಗಳು ದಾಖಲಾಗಿದ್ದು, ಒಟ್ಟು ₹4,000 ದಂಡ ವಿಧಿಸಲಾಗಿದೆ. ಈ ಪ್ರಕರಣಗಳಲ್ಲಿ ಅತೀವೇಗದ ಚಾಲನೆ ಮತ್ತು ಸೀಟ್ ಬೆಲ್ಟ್ ಧರಿಸದೆ ಪ್ರಯಾಣಿಸಿರುವುದು ಸೇರಿದೆ. ಝೀರೋ ಟ್ರಾಫಿಕ್ ವ್ಯವಸ್ಥೆ ಇದ್ದಾಗಲೂ ಈ ಘಟನೆಗಳು ನಡೆದಿರುವುದು ಗಮನ ಸೆಳೆದಿದೆ.
ಸಂಚಾರ ನಿಯಮ ಉಲ್ಲಂಘನೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರು ಈ ವಿಷಯದ ಬಗ್ಗೆ ಮಾತನಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ತಾವೇ ಘೋಷಿಸಿದ ಶೇ. 50ರ ರಿಯಾಯಿತಿ ಯೋಜನೆಯಡಿ ಕೇವಲ ₹2,000 ದಂಡ ಪಾವತಿಸಬೇಕೆಂದು ಹೇಳಿದ್ದಾರೆ. ಕಾನೂನು ಎಲ್ಲರಿಗೂ ಸಮಾನವಾಗಿ ಅನ್ವಯಿಸಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ.
ಈ ಘಟನೆ ವಿಐಪಿ ಸಂಸ್ಕೃತಿ ಮತ್ತು ಕಾನೂನು ಪಾಲನೆಯ ಬಗ್ಗೆ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಝೀರೋ ಟ್ರಾಫಿಕ್ ವ್ಯವಸ್ಥೆಯಡಿ ವಾಹನಗಳು ಪ್ರಯಾಣಿಸುತ್ತಿದ್ದಾಗಲೂ ಈ ಉಲ್ಲಂಘನೆಗಳು ಹೇಗೆ ಸಾಧ್ಯವಾಯಿತು ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಕೆಳಿ ಬರುತ್ತಿರುವದು ವಿಷೇಶವಾಗಿದೆ.

