ಹಾವೇರಿ: ನಾಳೆ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶದ ಹಬ್ಬ; ಸಾವಿರಾರು ಫಲಾನುಭವಿಗಳಿಗೆ ಭೂಮಿಯ ಹಕ್ಕು ನೀಡಲಿರುವ ಸಿಎಂ ಸಿದ್ದರಾಮಯ್ಯ
ಹಾವೇರಿ: ಜಿಲ್ಲೆಯ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮಟ್ಟದ ಜನಕಲ್ಯಾಣ ಕಾರ್ಯಕ್ರಮಗಳಲ್ಲಿ ಒಂದಾದ ‘ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ’ಕ್ಕೆ ಹಾವೇರಿ ನಗರದ ಹೊರವಲಯವು ನವವಧುವಿನಂತೆ ಸಜ್ಜಾಗಿದೆ. ದಶಕಗಳಿಂದ ಭೂಮಿಯ ಹಕ್ಕು ಮತ್ತು ಸಾಗುವಳಿ ಚೀಟಿಗಾಗಿ ಕಾಯುತ್ತಿದ್ದ ಬಡವರ ಹಾಗೂ ರೈತರ ಕನಸು ನಾಳೆ ನನಸಾಗಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಜಿಲ್ಲೆಯ ಸಾವಿರಾರು ಫಲಾನುಭವಿಗಳಿಗೆ ನೇರವಾಗಿ ಹಕ್ಕುಪತ್ರಗಳನ್ನು ವಿತರಿಸಲಿದ್ದಾರೆ. ಸರ್ಕಾರದ ಆಶಯದಂತೆ ಪ್ರತಿಯೊಬ್ಬ ಅರ್ಹ ಭೂಹೀನನಿಗೂ ಭೂಮಿಯ ಒಡೆತನ ನೀಡುವ ಉದ್ದೇಶದೊಂದಿಗೆ ಆಯೋಜಿಸಲಾಗಿರುವ ಈ…

